ಫ್ರೀಡಂ ಹಬ್ಬದಲ್ಲಿ ತುಳುನಾಡಿನ ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ ಮತ್ತು ಭರತನಾಟ್ಯ ಪ್ರದರ್ಶನ

KannadaprabhaNewsNetwork |  
Published : Aug 18, 2026, 02:00 AM IST
ಪಂಚಮಿ | Kannada Prabha

ಸಾರಾಂಶ

ಫ್ರೀಡಂ ಹಬ್ಬದ ಅಂಗವಾಗಿ ನಡೆದ ಫ್ರೀಡಂ ಪರೇಡ್‌ನಲ್ಲಿ ತುಳುನಾಡಿನ ಪಂಚಮಿ ಮಾರೂರು ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ತುಳುನಾಡಿನ ಶ್ರೀಮಂತ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು.

ಬೆಂಗಳೂರು: ಫ್ರೀಡಂ ಹಬ್ಬದ ಅಂಗವಾಗಿ ನಡೆದ ಫ್ರೀಡಂ ಪರೇಡ್‌ನಲ್ಲಿ ತುಳುನಾಡಿನ ಪಂಚಮಿ ಮಾರೂರು ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ತುಳುನಾಡಿನ ಶ್ರೀಮಂತ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು.ಅದರಲ್ಲೂ ವಿಶೇಷವಾಗಿ, ನಾಡಿನ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ತುಳುನಾಡಿನ ಜನತೆಗೆ ಹೆಮ್ಮೆಯ ಕ್ಷಣವಾಯಿತು. ಇದೇ ಭವ್ಯ ವೇದಿಕೆಯಲ್ಲಿ ಪಂಚಮಿ ಮಾರೂರು ಅವರ ಶ್ರೀ ಪರಂಪರಾ ಹೆಜ್ಜೆಗಜ್ಜೆ ವೈ.ಪಿ. ಆರ್ಟ್ ಫೌಂಡೇಶನ್ (ರಿ.), ಬೆಂಗಳೂರು ತಂಡವು ತುಳು ಹಾಡಿಗೆ ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿ ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ಈ ಕಲಾ ಪ್ರದರ್ಶನಗಳು ನಡೆದವು. ನಾಡಿನ ಗಣ್ಯರ ಮುಂದೆ ತುಳುನಾಡಿನ ಯಕ್ಷಗಾನ ಕಲೆಯನ್ನು ಹೆಮ್ಮೆಯಿಂದ ಪ್ರಸ್ತುತಪಡಿಸಿದ ಪಂಚಮಿ ಮಾರೂರು ಮತ್ತು ತಂಡದ ಸಾಧನೆ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.ವಿಧಾನಸೌಧದ ಮುಂಭಾಗದ ಭವ್ಯ ವೇದಿಕೆಯಲ್ಲಿ ಒಂದೆಡೆ ತುಳುನಾಡಿನ ಹೆಮ್ಮೆಯ ಯಕ್ಷಗಾನ, ಮತ್ತೊಂದೆಡೆ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಭರತನಾಟ್ಯ ಪ್ರದರ್ಶನಗೊಂಡಿದ್ದು ಕಲಾಭಿಮಾನಿಗಳಿಗೆ ಮತ್ತಷ್ಟು ಸಂತಸ ತಂದಿತು. ಪಂಚಮಿ ಮಾರೂರು ಅವರ ನೇತೃತ್ವದಲ್ಲಿ ಎರಡೂ ಕಲಾ ಪ್ರಕಾರಗಳು ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನಗೊಂಡಿರುವುದು ತುಳುನಾಡಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರು ಬರೆದರೆ ಬದುಕಿನ ಬಹಳ ದೊಡ್ಡ ಸತ್ಯ ಹೇಳಿದಂತೆ: ಡಾ.ಕೃಷ್ಣಮೂರ್ತಿ ಹನೂರು
ದೇಶಭಕ್ತಿ, ಹಿಂದೂ ಸಂಸ್ಕೃತಿ ರಕ್ಷಣೆ ಸಂಕಲ್ಪ ಮಾಡಿ