ಪಂಚಾಯ್ತಿ ಚಾಂಪಿಯನ್ ಕ್ರಿಕೆಟ್‌ ಟ್ರೋಫಿ

KannadaprabhaNewsNetwork |  
Published : Oct 05, 2026, 01:45 AM IST
4ಎಎಚ್ಎಸ್ಎನ್16 : ಯಗಟಿ ವಿಷ್ಣುವರ್ಧನ್ ಶಂಕರನಾಗ್ ಸೇನಾ  ಸಮಿತಿ ಯಗಟಿ*  ವತಿಯಿಂದ *ಪಂಚಾಯತ್ ಚಾಂಪಿಯನ್ ಟ್ರೋಫಿ* ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ  ಶಾಸಕರಾದ  ಎ ಮಂಜು ಉದ್ಘಾಟನೆ ಮಾಡಿದರು, | Kannada Prabha

ಸಾರಾಂಶ

ವಿಧಾನಸಭಾ ಕ್ಷೇತ್ರದ ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದು ಪ್ರತಿ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯುವಂತೆ ಮನವಿ ಮಾಡಿ ಎಲ್ಲಾ ತಂಡಗಳ ಆಟಗಾರರಿಗೆ ಶಾಸಕ ಎ. ಮಂಜು ಶುಭಕೋರಿದರು. ದೊಡ್ಡಮಗ್ಗೆ ಹೋಬಳಿ ಯಗಟಿ ಗ್ರಾಮದಲ್ಲಿ ವಿಷ್ಣುವರ್ಧನ್ ಶಂಕರನಾಗ್ ಸೇನಾ ಸಮಿತಿ ಯಗಟಿ ವತಿಯಿಂದ ಪಂಚಾಯತ್ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯೆ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಳವಡುಸಿಕೊಂಡು ನಡೆಯಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರವಿಧಾನಸಭಾ ಕ್ಷೇತ್ರದ ಎಲ್ಲಾ ಪಂಚಾಯಿತಿ ವ್ಯಾಪ್ತಿಯ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದು ಪ್ರತಿ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯುವಂತೆ ಮನವಿ ಮಾಡಿ ಎಲ್ಲಾ ತಂಡಗಳ ಆಟಗಾರರಿಗೆ ಶಾಸಕ ಎ. ಮಂಜು ಶುಭಕೋರಿದರು.

ದೊಡ್ಡಮಗ್ಗೆ ಹೋಬಳಿ ಯಗಟಿ ಗ್ರಾಮದಲ್ಲಿ ವಿಷ್ಣುವರ್ಧನ್ ಶಂಕರನಾಗ್ ಸೇನಾ ಸಮಿತಿ ಯಗಟಿ ವತಿಯಿಂದ ಪಂಚಾಯತ್ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯೆ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಳವಡುಸಿಕೊಂಡು ನಡೆಯಬೇಕು ಎಂದರು. ಅರಕಲಗೂಡು ಪಟ್ಟಣ ವ್ಯಾಪ್ತಿಯ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಸುಮಾರು ₹40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. ಕಾಮಗಾರಿಗಳನ್ನು ನಿಗದಿತ ಗುಣಮಟ್ಟ ಹಾಗೂ ಶಾಶ್ವತವಾಗಿ ಉಳಿಯುವ ರೀತಿಯಲ್ಲಿ ಕೈಗೊಳ್ಳುವಂತೆ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಜನತೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮಸ್ಥರು, ಸಂಘಸಂಸ್ಥೆಗಳ ಯುವಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡ ರೈತರಿಗೆ ಕಾನೂನು ಬದ್ಧವಾಗಿಯೇ ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು
ಮಂಡ್ಯ: ಗುರುದೇವ ಅಕಾಡೆಮಿಯ ಗುರು ದೇವೋತ್ಸವಕ್ಕೆ ತೆರೆ