ಸುರೇಂದ್ರ ಹೆಗ್ಗಡೆಯವರಿಂದ ಪಂಚಕಲ್ಯಾಣ ಮಹೋತ್ಸವ ಸಿದ್ಧತೆ ಪರಿಶೀಲನೆ

KannadaprabhaNewsNetwork |  
Published : Nov 15, 2024, 12:38 AM IST
14ಎಚ್ಎಸ್ಎನ್10 : ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಜೈನರ ಗುತ್ತಿಯಲ್ಲಿ ನಡೆಯುವ ೬ ದಿನದ ಪಂಚಕಲ್ಯಾಣ ಮಹಾಮಹೋತ್ಸವದಲ್ಲಿ ದೂರದಿಂದ ಆಗಮಿಸಿದ ಭಕ್ತರಿಗೆ ಊಟೋಪಚಾರದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು ಎಂದು ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಅವರ ಸಹೋದರ ಜೈನರ ಗುತ್ತಿ ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿಗೆ ಸಮೀಪದ ಜೈನರ ಗುತ್ತಿಯಲ್ಲಿ ನಡೆಯುವ ೬ ದಿನದ ಪಂಚಕಲ್ಯಾಣ ಮಹಾಮಹೋತ್ಸವದಲ್ಲಿ ದೂರದಿಂದ ಆಗಮಿಸಿದ ಭಕ್ತರಿಗೆ ಊಟೋಪಚಾರದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು ಎಂದು ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಅವರ ಸಹೋದರ ಜೈನರ ಗುತ್ತಿ ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್‌ ಹೇಳಿದರು.

ಜೈನರ ಗುತ್ತಿಯಲ್ಲಿ ಪಂಚಕಲ್ಯಾಣ ಮಹೋತ್ಸವದ ಶ್ರೀಮುಖ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತ, ಜೈನರ ಗುತ್ತಿಯಲ್ಲಿ ನಿರಂತರ ಸ್ವಚ್ಛತೆ ಇರುವಂತೆ ಸಂಬಂಧಿಸಿದ ಉಪ ಸಮಿತಿಯವರು ನಿಗಾ ವಹಿಸಬೇಕು. ಭಕ್ತಾದಿಗಳ ಪೂಜಾ ಕಾರ್ಯಗಳ ವೀಕ್ಷಣೆಗೆ ಆಸನಗಳು ಅಸ್ತವ್ಯಸ್ತ ಆಗದಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

ಪಂಚಕಲ್ಯಾಣ ಮಹೋತ್ಸವದ ಸಮಯದಲ್ಲಿಯೇ ಧರ್ಮಸ್ಥಳದಲ್ಲಿ ದೀಪೋತ್ಸವ ಇರುವುದರಿಂದ ನಾವು ೬ ದಿನ ಭಾಗವಹಿಸಲು ಸಾಧ್ಯವಾಗುವುದಿಲ್ಲ. ವಿರೇಂದ್ರ ಹೆಗ್ಗಡೆಯವರು ಯಾವುದಾದರೂ ಒಂದು ದಿನ ಭಾಗವಹಿಸುತ್ತಾರೆ ಎಂದು ಸುರೇಂದ್ರ ಕುಮಾರ್ ಹೇಳಿದರು. ಧರ್ಮಸ್ಥಳ ಟ್ರಸ್ಟಿನ ಅನುದಾನದಿಂದ ಪಂಚಕಲ್ಯಾಣ ನಡೆಯುವ ಸ್ಥಳಕ್ಕೆ ವಿದ್ಯುತ್ ದೀಪಗಳನ್ನು ಕೊಡಿಸಬೇಕು ಎಂದು ಪಂಚಕಲ್ಯಾಣ ಸಮಿತಿಯವರು ಸುರೇಂದ್ರ ಕುಮಾರ್ ಅವರಿಗೆ ಮನವಿ ಮಾಡಿದರು. ಟ್ರಸ್ಟಿನಲ್ಲಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸುರೇಂದ್ರ ಕುಮಾರ್ ತಿಳಿಸಿದರು.

ವೀರ ಸಾಗರ ಮುನಿ ಮಹಾರಾಜರು ಮಾತನಾಡಿ, ಪಂಚಕಲ್ಯಾಣ ಮಹೋತ್ಸವಕ್ಕೆ ವಿವಿಧೆಡೆಯಿಂದ ವಿಹಾರ ಮಾಡುತ್ತಿರುವ ಜೈನ ಮುನಿಗಳ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಸುಗಮ ವಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಂಚಕಲ್ಯಾಣ ಸಮಿತಿ ಪದಾಧಿಕಾರಿಗಳಾದ ಎಂ.ಧನಪಾಲ್, ಜಯೇಂದ್ರ ಕುಮಾರ್, ಬ್ರಹ್ಮೇಶ್, ಎಂ.ಆರ್‌.ನಾಗೇಂದ್ರ ಪ್ರಸಾದ್, ರತ್ನರಾಜು, ಹೊಲಬಗೆರೆ ಜಿನಚಂದ್ರ, ಅಡಗೂರು ಜೈನ್ ಸಮಾಜದ ನಾಗೇಂದ್ರ ಕುಮಾರ್, ಎ.ಎನ್.ಶಶಿಕುಮಾರ್‌, ಮನ್ಮತರಾಜು, ಧಾವನ್ ಜೈನ್, ಸಮಿತಿಯ ಸಹ ಸಂಚಾಲಕ ಅನಿಲ್ ಕುಮಾರ್‌ ಪಾಲ್ಗೊಂಡಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ