ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕಾಮನ ಚೌಕ ವೃತ್ತದಿಂದ ಮೈಸೂರಿನ ಚೌಕದವರೆಗೆ ತಿರಂಗಾ ಯಾತ್ರೆ ನಡೆಸಿದ ಯುವಕರು, ತ್ರಿವರ್ಣ ಧ್ವಜ ಹಿಡಿದು ಭಾರತ ಹಾಗೂ ಸೈನಿಕರ ಪರ ಘೋಷಣೆಗಳನ್ನು ಕೂಗಿದರು.
ಯಾತ್ರೆಯು ಕಾಮನಚೌಕದಿಂದ ಹೊರಟು ಪೊಲೀಸ್ ಠಾಣೆ ರಸ್ತೆ ಮಾರ್ಗವಾಗಿ ನ್ಯಾಯಾಲಯದ ರಸ್ತೆಗೆ ತೆರಳಿ, ಅಂಚೆ ಕಚೇರಿ ರಸ್ತೆ ಮೂಲಕ ಕೆ.ಆರ್.ಎಸ್. ರಸ್ತೆಗೆ ಸಾಗಿ ಬಳಿಕ ಪಟ್ಟಣದ ಐದು ದೀಪದ ವೃತ್ತದ ಮೂಲಕ ಮೈಸೂರಿನ ಶ್ರೀ ಚಾಮರಾಜೇಂದ್ರ ಸರ್ಕಲ್ ವರೆಗೆ ತಲುಪುವ ಮೂಲಕ ತಿರಂಗ ಯಾತ್ರೆ ಅಂತ್ಯಗೊಂಡಿತು.ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ಐವರು ವೀರ ಯೋಧರು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಪಹಲ್ಗಾಮ್ ನ ಭೀಕರ ಭಯೋತ್ಪಾದಕ ದಾಳಿದಲ್ಲಿ ಮಡಿದ ಭಾರತದ 26 ಪ್ರವಾಸಿಗರ ಸಾವಿಗೆ ಪ್ರತೀಕಾರ ತೀರಿಸಿಕೊಂಡ ನಮ್ಮ ಹೆಮ್ಮೆಯ ಆಪರೇಷನ್ ಸಿಂದೂರ ಯಶಸ್ಸಿಗೆ ನಮನಗಳನ್ನು ಸಲ್ಲಿಸಿದರು.
ಈ ವೇಳೆ ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಹಿರೇಮರಳಿ ಸಂದೇಶ್ ಹಾಗೂ ಯಾತ್ರೆ ನೇತೃತ್ವ ವಹಿಸಿದ್ದ ಶಶಾಂಕ್ ಮಾತನಾಡಿದರು. ತಿರಂಗ ಯಾತ್ರೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ನೀಲನಹಳ್ಳಿ ಧನಂಜಯ, ಬಿಜೆಪಿ ಯುವ ಘಟಕದ ಮಾಜಿ ಅಧ್ಯಕ್ಷ ಹಿರೇಮರಳಿ ಸಂದೇಶ್, ಯಾತ್ರೆಯ