ಪಾಂಡವಪುರ:
ಸಂಘದ ಉಪಾಧ್ಯಕ್ಷರಾಗಿ ಎಸ್.ನಾಗಸುಂದರ್, ಖಜಾಂಚಿಯಾಗಿ ಬೀರಶೆಟ್ಟಹಳ್ಳಿ ಭಾಸ್ಕರ್, ಕಾರ್ಯದರ್ಶಿಯಾಗಿ ಎಸ್.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು. ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಸಂಘದ ಸದಸ್ಯರು ಪಾಲ್ಗೊಂಡಿದ್ದರು.ಕೆ.ಆರ್.ಪೇಟೆ ಪತ್ರಕರ್ತರ ಸಂಘಕ್ಕೆ ಟಿ.ವೈ.ಆನಂದ್ ಅಧ್ಯಕ್ಷರಾಗಿ ಆಯ್ಕೆ
ಕೆ.ಆರ್.ಪೇಟೆತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವೈ.ಆನಂದ ಚುನಾಯಿತರಾದರು.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಕಾರ್ಯದರ್ಶಿಯಾಗಿ ಸಿದ್ದಾಪುರ ಉಮೇಶ್, ಉಪಾಧ್ಯಕ್ಷರಾಗಿ ಅಘಲಯ ತಮ್ಮಣ್ಣ ನಾಯಕ ಮತ್ತು ಖಜಾಂಚಿಯಾಗಿ ಸೈಯದ್ ಖಲೀಲ್ ಅವಿರೋಧವಾಗಿ ಆಯ್ಕೆಯಾದರು. ನಂತರ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೊತ್ತತ್ತಿ ಗ್ರಾಮದ ಎಲೆ ತೋಟದ ಕ್ಯಾತಮ್ಮ ಸೇವಾ ಟ್ರಸ್ಟ್ ವತಿಯಿಂದ ಫೆ.೭ರಂದು ಮಹಾಶಿವರಾತ್ರಿ ಪ್ರಯುಕ್ತ ಗ್ರಾಮದಲ್ಲಿ ಶ್ರೀಬೀರೇಶ್ವರ ದೇವಸ್ಥಾನದ ಬಳಿ ಕರಗ ಮಹೋತ್ಸವ ಮತ್ತು ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.ಅಂದು ಮಧ್ಯಾಹ್ನ ೨ ಗಂಟೆಗೆ ಶ್ರೀ ಭೂಮಿಸಿದ್ದೇಶ್ವರ ಬಸಪ್ಪ, ಶ್ರೀಬೀರೇಶ್ವರ ಬಸಪ್ಪ ಉತ್ಸವ ಮೂರ್ತಿಗಳನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು ಎಂದು ದೇವಾಲಯ ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಫೆ.೮ರಂದು ಭಾನುವಾರ ಬೆಳಗ್ಗೆ ೫ ಗಂಟೆಗೆ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.