ಗೋಕುಲಂ ಗೋಶಾಲೆ: ಪರಂಪರಾ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 23, 2026, 02:45 AM IST
ಗೋಕುಲಂ ಗೋಶಾಲೆಯಲ್ಲಿ ಪರಂಪರಾ ಪ್ರಶಸ್ತಿಗಳ ಪ್ರದಾನ ಹಾಗೂ ಶಿವಶ್ರೀ ತೇಜಸ್ವಿ ಸೂರ್ಯ ಅವರಿಂದ ನಾಮಸಂಕೀರ್ತನೆ ನಡೆಯಿತು  | Kannada Prabha

ಸಾರಾಂಶ

ಬೇಕಲ್ ಗೋಕುಲಂ ಗೋಶಾಲೆಯ 2026ರ ಪರಂಪರ ಪ್ರಶಸ್ತಿಗಳನ್ನು ಗೋಶಾಲೆಯ ಸ್ಥಾಪಕ ಮತ್ತು ಪರಂಪರ ವಿದ್ಯಾಪೀಠದ ಆಚಾರ್ಯ ವಿಷ್ಣುಪ್ರಸಾದ್ ಹೆಬ್ಬಾರ್ ಪ್ರದಾನ ಮಾಡಿದರು.

ಮಂಗಳೂರು: ಬೇಕಲ್ ಗೋಕುಲಂ ಗೋಶಾಲೆಯ 2026ರ ಪರಂಪರ ಪ್ರಶಸ್ತಿಗಳನ್ನು ಗೋಶಾಲೆಯ ಸ್ಥಾಪಕ ಮತ್ತು ಪರಂಪರ ವಿದ್ಯಾಪೀಠದ ಆಚಾರ್ಯ ವಿಷ್ಣುಪ್ರಸಾದ್ ಹೆಬ್ಬಾರ್ ಪ್ರದಾನ ಮಾಡಿದರು.

ಪರಂಪರ ವಿಭೂಷಣ ಪುರಸ್ಕಾರವನ್ನು ಮಧುರೈ ಟಿ.ಎನ್. ಶೇಷಗೋಪಾಲನ್ ಅವರಿಗೆ, ಪ್ರಸಿದ್ಧ ವಯೊಲಿನ್ ವಿದ್ವಾಂಸ ನೆಡುಮಂಗಾಡ್ ಶಿವಾನಂದನ್ ಅವರಿಗೆ ಪರಂಪರ ಭೂಷಣ ಪ್ರಶಸ್ತಿ, ಮತ್ತು ಪರಂಪರಶ್ರೀ ಪುರಸ್ಕಾರವನ್ನು ಆನೂರ್ ಅನಂತಕೃಷ್ಣ ಶರ್ಮಾ ಅವರಿಗೆ ಪ್ರದಾನ ಮಾಡಲಾಯಿತು.

ಡ್ರಮ್ ಮಾಂತ್ರಿಕ ಶಿವಮಣಿ, ಸಂಗೀತಜ್ಞ ಪಟ್ಟಾಭಿರಾಮ ಪಂಡಿತ್, ಮೃದಂಗ ವಿದ್ವಾಂಸ ಪಾಲಕ್ಕಾಡ್ ಜಯಕೃಷ್ಣನ್, ಮುಖರ್ಶಂಖ ವಿದ್ವಾಂಸ ಪಯ್ಯನ್ನೂರ್ ಗೋವಿಂದ ಪ್ರಸಾದ್ ಮತ್ತಿತರರು ಇದ್ದರು.

ಆರನೇ ದೀಪಾವಳಿ ಸಂಗೀತೋತ್ಸವದಲ್ಲಿ ಪ್ರಸಿದ್ಧ ಭಜನಾ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರ ನಾಮಸಂಕೀರ್ತನೆ ನಡೆಯಿತು. ಪದ್ಮಭೂಷಣ ಟಿ.ಎನ್.ಶೇಷಗೋಪಾಲ್, ವಿಷ್ಣುದೇವ್ ನಂಬೂತಿರಿ ಮತ್ತು ಮಾತಂಗಿ ಸತ್ಯಮೂರ್ತಿ ವಿಶೇಷ ಕಛೇರಿಗಳನ್ನು ನಡೆಸಿಕೊಟ್ಟರು. ನೆಡುಂಬಳ್ಳಿ ರಾಮ್‌ಮೋಹನ್ ಮತ್ತು ಮೀರಾ ರಾಮ್‌ಮೋಹನ್ ಅವರು ಕರ್ನಾಟಕ ಸಂಗೀತ-ಕಥಕ್ಕಳಿ ಸಮನ್ವಯವನ್ನು ಪ್ರಸ್ತುತಪಡಿಸಿದರು.

ಇಂದು ತೆರೆ: 14 ದಿನಗಳ ಕಾಲ ನಡೆದ ದೀಪಾವಳಿ ಸಂಗೀತೋತ್ಸವಕ್ಕೆ ಸೋಮವಾರ ಸುಮಾರು 30ಭಜನೆಗಳೊಂದಿಗೆ ತೆರೆ ಬೀಳಲಿದೆ. ಧೇನು ಮಂಡಪ, ನಂದಿ ಮಂಡಪ ಮತ್ತು ಸುರಭಿ ಮಂಡಪ ಎಂಬ ಮೂರು ವೇದಿಕೆಗಳಲ್ಲಿ ಭಜನೆಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ