ದಾಬಸ್‍ಪೇಟೆ: ಪೋಷಕರು ಮಕ್ಕಳು ಕಲಿಯುವ ಶಾಲಾ, ಕಾಲೇಜಿನೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಶ್ರೇಯೋಭಿವೃದ್ದಿಯತ್ತ ಗಮನಹರಿಸಬೇಕು. ಮಕ್ಕಳ ಚಲನವಲನ ಗಮನಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಪಂಕಜ ಹೇಳಿದರು.
ಮುಖ್ಯಶಿಕ್ಷಕ ಹೊನ್ನಹನುಮಯ್ಯ ಮಾತನಾಡಿ, ಪ್ರಸಕ್ತ ವರ್ಷದಿಂದ ಶಾಲಾ ದಾಖಲಾತಿ ಹೆಚ್ಚಿಸಲು ಪೋಷಕರು ಸಹಕಾರ ನೀಡಬೇಕು. ಮುಂದಿನ ವರ್ಷದಿಂದ ಶಾಲೆಯಲ್ಲಿ ಪ್ರೌಢಶಾಲೆ ಪ್ರಾರಂಭಿಸುವ ಚಿಂತನೆ ಇದೆ. ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದೆ. ದೊಡ್ಡ ಶಾಲೆಗಳ ಜೊತೆ ಹತ್ತಿರದ ಚಿಕ್ಕ ಶಾಲೆಗಳನ್ನು ವಿಲೀನ ಮಾಡಿ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಇದೇ ಸಂದರ್ಭದಲ್ಲಿ ಪೋಷಕರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಸದಸ್ಯರಾದ ಪೂರ್ಣಿಮಾ, ಚೈತ್ರರಮೇಶ್, ಪುಷ್ಪಲತಾ, ಹಸೀನಾ, ತಾರಾದೇವಿ ಲಕ್ಷ್ಮಣಕುಮಾರ್, ಭೈರೇಗೌಡ, ಸಿದ್ದಗಂಗಯ್ಯ, ಶಿಕ್ಷಕರುಗಳಾದ ಲೀಲಾವತಿ, ಸರೋಜಮ್ಮ, ರಾಜೇಶ್ವರಿ, ಶೀಲಾಕುಮಾರಿ, ಲಕ್ಷ್ಮಿಕಾಂತ್, ಚಂದ್ರಿಕಾ ಶ್ವೇತಾ, ಐಶ್ವರ್ಯ, ಜಯಂತ್ ಸೇರಿದಂತೆ 150ಕ್ಕೂ ಹೆಚ್ಚು ಪೋಷಕ ಬಂಧುಗಳು ಗ್ರಾಮಸ್ಥರು ಭಾಗವಹಿಸಿದ್ದರು.