ಮಲೇಬೆನ್ನೂರು: ಶಾಲಾ ಶಿಕ್ಷಕರ ಹೆಚ್ಚುವರಿ ಆದೇಶ ಪಟ್ಟಿ ಕಂಡು ಪೋಷಕರು ಎರಡು ದಿನಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸಮೀಪದ ನಂದಿಗುಡಿ ಗ್ರಾಮದಲ್ಲಿ ಜರುಗಿದೆ.
ಶುಕ್ರವಾರ ಮತ್ತು ಶನಿವಾರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪರವರಲ್ಲಿ ವಾಗ್ವಾದ ನಡೆಸಿ ಶಿಕ್ಷಣ ಇಲಾಖೆಯ ನಿಯಮವನ್ನೇ ಗಾಳಿಗೆ ತೂರಿ ಮೂವರನ್ನು ಯಾಕೆ ನೇಮಕ ಮಾಡಿದ್ದೀರಿ, ಉಪನಿರ್ದೆಶಕರನ್ನು, ಜಿಲ್ಲಾಧಿಕಾರಿಯವರನ್ನು ಸ್ಥಳಕ್ಕೆ ಕರೆಸಿ ಅವರ ಜತೆ ಮಾತಾಡುತ್ತೇವೆ ಬರುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದು ಪಟ್ಟು ಹಿಡಿದರು.
ದುರುಗಪ್ಪ ಮನವಿ ಮಾಡಿದರೂ ಸಹ ಪೋಷಕರು ಪ್ರತಿಭಟನೆ ಮುಂದುವರಿಸಿದ್ದರು.ಶನಿವಾರ ವಿಷಯ ತಿಳಿದ ಶಾಸಕ ಬಿ ಪಿ ಹರೀಶ್ ನಂದಿಗುಡಿ ಶಾಲೆಗೆ ಭೇಟಿ ನೀಡಿ ಪೋಷಕರಿಗೆ ಮನವೊಲಿಸಿ ಶಿಕ್ಷಣ ಮಂತ್ರಿ ಮಧುಬಂಗಾರಪ್ಪನವರ ಜತೆ ಚರ್ಚಿಸಿ ಹೆಚ್ಚುವರಿ ಶಿಕ್ಷಕರು ವಗಾವಣೆಯಾಗಲಿ ನಂತರ ನಿಯೋಜನೆ ಮಾಡೋಣ ಎಂದಾಗ ಪೋಷಕರು ತಮ್ಮ ಪ್ರತಿಭಟನೆ ವಾಪಾಸ್ ಪಡೆದರು. ಮಕ್ಕಳು ಮಧ್ಯಾಹ್ನ ಶಾಲೆಗೆ ಆಗಮಿಸಿ ಬಿಸಿಯೂಟ ಸವಿದರು. ಗ್ರಾಮದ ಕೆಂಚವೀರಯ್ಯ, ಎಸ್‌ಡಿಎಂಸಿ ಪದಾಧಿಕಾರಿಗಳಾದ ಸುನೀತಾ, ಬಸವನಗೌಡ, ನಂದಿನಿ, ಉಷಾ, ಲೀಲಾವತಿ, ನೇತ್ರಾ, ಲತಾ, ಗ್ರಾಮಸ್ಥರು ಇದ್ದರು.ಚಿತ್ರ-೪: ಮಲೇಬೆನ್ನೂರಿನ ನಂದಿಗುಡಿ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸಿದರು.