ಪೋಷಕರ ಮಹಾಸಭೆ, ಮಕ್ಕಳ ಕಲರವ

KannadaprabhaNewsNetwork |  
Published : Nov 15, 2025, 01:15 AM IST
 ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರು ಸಂಕಲ್ಪ ಮಾಡಿದರು. | Kannada Prabha

ಸಾರಾಂಶ

ಮಲೇಬೆನ್ನೂರು ಪಟ್ಟಣ ಮತ್ತು ಹೋಬಳಿ ಭಾಗಗಳಲ್ಲಿ ಸರ್ಕಾರದ ಸೂಚನೆಯಂತೆ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಲ್ಲಿ ಪೋಷಕರ ಬೋಧಕರ ಮಹಾಸಭೆ ಶುಕ್ರವಾರ ಜರುಗಿತು.

- ಮಲೇಬೆನ್ನೂರು ಪಟ್ಟಣ, ಹೋಬಳಿ ಭಾಗಗಳಲ್ಲಿ ಕಾರ್ಯಕ್ರಮ

- - -

ಮಲೇಬೆನ್ನೂರು: ಪಟ್ಟಣ ಮತ್ತು ಹೋಬಳಿ ಭಾಗಗಳಲ್ಲಿ ಸರ್ಕಾರದ ಸೂಚನೆಯಂತೆ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಲ್ಲಿ ಪೋಷಕರ ಬೋಧಕರ ಮಹಾಸಭೆ ಶುಕ್ರವಾರ ಜರುಗಿತು.

ಇಲ್ಲಿಗೆ ಸಮೀಪದ ಕುಂಬಳೂರಿನ ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಜವಾಹರ ಲಾಲ್ ನೆಹರೂ ಜಯಂತಿ ಆಚರಣೆಯಲ್ಲಿ ನೆಹರೂ ಕುರಿತು ಶಿಕ್ಷಕ ವೇದಮೂರ್ತಿ ಮಾತನಾಡಿದರು. ಉಪನ್ಯಾಸಕ ತೆಲಿಗಿ ಮಂಜುನಾಥ್ ಮಾತನಾಡಿ, ಮಕ್ಕಳು ಯಾರನ್ನು ಗೌರವಿಸಬೇಕು, ಯಾವುದನ್ನು ತಿರಸ್ಕರಿಸಬೇಕು ಎಂಬುದು ಜಾಣ್ಮೆಯಿಂದ ನಿರ್ಧರಿಸಬೇಕು. ಮುಖ್ಯವಾಗಿ ನಯ- ವಿನಯ ಇರಬೇಕು ಎಂದರು.

ಸಿಡಿಸಿ ಸದಸ್ಯ ಸದಾನಂದ ಮಾತನಾಡಿ, ಸರ್ಕಾರಿ ಶಾಲೆ- ಕಾಲೇಜು ಸಾರ್ವಜನಿಕ ಆಸ್ತಿಯಾಗಿವೆ. ಕೆಲವು ವರ್ಷಗಳಿಂದ ಯಾರೋ ಕಿಡಿಗೇಡಿಗಳು ಸಿಂಟೆಕ್ಸ್ ಟ್ಯಾಂಕ್‌, ಪೈಪ್, ಸಸಿಗಳು, ಗ್ಲಾಸ್ ಒಡೆಯವುದು, ಗಲೀಜು ಮಾಡುವುದು ಮಾಡಿದ್ದಾರೆ. ಈ ರೀತಿ ಹಾಳು ಮಾಡಲಿಕ್ಕೆ ಅಧಿಕಾರವಿಲ್ಲ. ಅಂಥವರು ಒಂದಲ್ಲ ಒಂದು ಬಾರಿ ಜೈಲಿಗೆ ಹೋಗುತ್ತಾರೆ ಎಂದು ಎಚ್ಚರಿಸಿದರು.

ಮುಖ್ಯ ಶಿಕ್ಷಕ ಗೋವಿಂದಪ್ಪ, ಪ್ರಾಚಾರ್ಯ ಹನುಮಂತಯ್ಯ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ, ಶಿಕ್ಷಕ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಕರಿಬಸಪ್ಪ, ಮಾಜಿ ಅಧ್ಯಕ್ಷ ಪರಮೇಶ್ವರಪ್ಪ, ಸಿಡಿಸಿ ಸದಸ್ಯರಾದ ಬಿ.ರಮೇಶ್, ಎನ್.ಕಲ್ಲೇಶ್, ಸಾಲಿ ಹನುಮಂತಪ್ಪ, ಚಂದ್ರಪ್ಪ, ಜಯಣ್ಣ ಹಾಗೂ ಬೆರಳೆಣಿಕೆಯ ಪೋಷಕರು ಇದ್ದರು.

ಆರಂಭದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಪೋಷಕರು ಬರುವ ಕಾರಣಕ್ಕೆ ಶಾಲಾ- ಕಾಲೇಜನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಸಿಹಿ ಊಟದ ವ್ಯವಸ್ಥೆಯೂ ಇತ್ತು. ಪೋಷಕರ ಸಭೆಯನ್ನು ಸಮೀಪದ ಧುಳೆಹೊಳೆ, ಕಡರನಾಯ್ಕನಹಳ್ಳಿ, ಹಾಲಿವಾಣ ಗ್ರಾಮದ ಶಾಲೆಗಳಲ್ಲಿ ಏರ್ಪಡಿಸಲಾಗಿತ್ತು.

- - -

-ಚಿತ್ರ-೧:

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರು ಸಂಕಲ್ಪ ಮಾಡಿದರು.

PREV

Recommended Stories

ದೇಶದ ಭವಿಷ್ಯಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ
ತಿಮ್ಮಕ್ಕನಿಗೆ ಮಕ್ಕಳ ಕೊರಗು ನೀಗಿಸಿದ ಸಾಲು ಮರಗಳು