ತಂದೆ-ತಾಯಿಗಳ ಪೋಷಣೆ ಮಕ್ಕಳ ಜವಾಬ್ದಾರಿ-ವಿಪ ಸದಸ್ಯ ಸಂಕನೂರ

KannadaprabhaNewsNetwork | Published : Apr 16, 2025 12:39 AM

ಸಾರಾಂಶ

ಭಾರತೀಯ ಸಂಸ್ಕೃತಿ ತನ್ನದೇಯಾದ ಮಹತ್ವ ಮತ್ತು ವಿಶಿಷ್ಟತೆ ಹೊಂದಿದೆ. ಈ ಸಂಸ್ಕೃತಿಯ ಪ್ರಕಾರ ತಂದೆ-ತಾಯಿ ದೇವರಾಗಿದ್ದಾರೆ, ಅವರನ್ನು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ಗದಗ: ಭಾರತೀಯ ಸಂಸ್ಕೃತಿ ತನ್ನದೇಯಾದ ಮಹತ್ವ ಮತ್ತು ವಿಶಿಷ್ಟತೆ ಹೊಂದಿದೆ. ಈ ಸಂಸ್ಕೃತಿಯ ಪ್ರಕಾರ ತಂದೆ-ತಾಯಿ ದೇವರಾಗಿದ್ದಾರೆ, ಅವರನ್ನು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಎಸ್. ಮುಳಗುಂದ ನೇತೃತ್ವದಲ್ಲಿ ಸೋಮವಾರ ಸಂಜೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ 134ನೇ ಜಯಂತಿ ಅಂಗವಾಗಿ ಶಿವರತ್ನ ವೃದ್ಧಾಶ್ರಮದ ವಯೋವೃದ್ಧ ಹಿರಿಯ ನಾಗರಿಕರಿಗೆ ವಿವಿಧ ಬಗೆಯ ಹಣ್ಣು ಹಂಪಲು ಕಿಟ್ ವಿತರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಕ್ಕಳಿಂದ ದೂರವಾಗಿರುವ ವಯೋವೃದ್ಧ ಹಿರಿಯ ನಾಗರಿಕರಿಗೆ ವೃದ್ಧಾಶ್ರಮಗಳು ಆಶ್ರಯ ತಾಣಗಳಾಗಿವೆ. ಕುಟುಂಬದಿಂದ ದೂರಾಗಿರುವ ವಯೋವೃದ್ಧ ಹಿರಿಯ ನಾಗರಿಕರ ಸೇವೆಯಲ್ಲಿ ನಿರತರಾಗಿರುವ ಮಾಜಿ ನಗರಾಧ್ಯಕ್ಷ ಶಿವಪ್ಪ ಮುಳಗುಂದ ನಿಸ್ವಾರ್ಥ ಜನ ಸೇವೆ ಇಂದಿನ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.

134 ವರ್ಷಗಳ ಹಿಂದೆ ಜಾತಿ ತಾರತಮ್ಯ, ಜಾತಿ ಸಂಘರ್ಷದ ವಿರುದ್ಧ ತಮ್ಮ ಜ್ಞಾನ ಬಲದ ಮೂಲಕ ನಿರಂತರ ಹೋರಾಟ ನಡೆಸಿ ತಮ್ಮ ನಾಯಕತ್ವ ಗುಣದಿಂದ ವಿಶ್ವದೆತ್ತರಕ್ಕೆ ಬೆಳೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಜಯಂತಿ ವಯೋವೃದ್ಧ ಮತ್ತು ಹಿರಿಯ ನಾಗರಿಕರ ಸಮ್ಮುಖದಲ್ಲಿ ಆಚರಿಸಿದ್ದು ಸ್ತುತ್ಯಾರ್ಹ ಕಾರ್ಯಕ್ರಮವಾಗಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ ಲಂಡನ್ನಿನ ಗ್ರಂಥಾಲಯದಲ್ಲಿ ಅಧ್ಯಯನ ನಿರತರಾದಾಗ ಟೆಲಿಗ್ರಾಂ ಬಂದಿತು, ಅದನ್ನು ಓದಿದ ಅಂಬೇಡ್ಕರ್‌ ಮೌನಕ್ಕೆ ಶರಣಾದರು, ಪಕ್ಕದಲ್ಲಿದ್ದ ಸ್ನೇಹಿತನೋರ್ವ ಏಕೆ ಮೌನರಾದಿರಿ ಎಂದು ಅಂಬೇಡ್ಕರಗೆ ಪ್ರಶ್ನಿಸಿಸಿದರು. ಇಲ್ಲ ಭಾರತದಲ್ಲಿ ನನ್ನ ಮಗ ಮರಣ ಹೊಂದಿದ್ದಾನೆ, ಹಾಗಾದರೆ ತಾವೂ ಭಾರತಕ್ಕೆ ಹೊರಡಿ ಅಂದಾಗ ಇಲ್ಲ ನಾನು ಭಾರತಕ್ಕೆ ಹಿಂತಿರುಗಿದರೇ ಲಕ್ಷಗಟ್ಟಲೇ ಮಕ್ಕಳು ಸಾಯುತ್ತಾರೆ ಎಂದೇಳಿ ಅವರಿಗಾಗಿ ಅಧ್ಯಯನ ಮಾಡಲೇಬೇಕು ಎನ್ನುವ ಮೂಲಕ ತಮ್ಮ ನೋವು ಬದಿಗೊತ್ತಿದರು. ವಿಶ್ವ ಪರ್ಯಟನ ನಡೆಸಿ ಎಲ್ಲೂ ಇರದ ಐತಿಹಾಸಿಕ ಸಂವಿಧಾನ ರಚಿಸಿದರು. ಶೋಷಿತರು, ದಲಿತರು ಮುಖ್ಯವಾಹಿನಿಗೆ ಇನ್ನೂ ಬಂದಿಲ್ಲ ಎಂದು ಸಂವಿಧಾನದ ಅವಧಿಯನ್ನು ಮಾಜಿ ಪ್ರಧಾನಿ ದಿ.ಅಟಲ ಬಿಹಾರಿ ವಾಜಪೇಯಿ ವಿಸ್ತರಿಸಿದ್ದಾರೆ, ಅಲ್ಲದೇ ಅವರ ಜೀವಮಾನ ಸಾಧನೆ ಗುರುತಿಸಿದ ಬಿಜೆಪಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯ ಮೂಲಕ ಗೌರವಿಸಿದೆ ಎಂದರು.

ಅಖಿಲ ಕರ್ನಾಟಕ ಮೋಚಿಗಾರ ಸಂಘದ ರಾಜ್ಯಾಧ್ಯಕ್ಷ ಶಿವಪ್ಪ ಮುಳಗುಂದ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ ತಮ್ಮ ವೈಯಕ್ತಿಕ ಬದುಕು ಪಣಕ್ಕಿಟ್ಟು ಶೋಷಿತ ಮತ್ತು ದಲಿತ ಸಮುದಾಯವನ್ನು ಮುಖ್ಯವಾಹಿನಿಗೆ ಕರೆ ತರಲು ತಮ್ಮ ಇಡಿ ಜೀವನ ಸವಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಎಸ್.ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿಜೆಪಿ ಪ್ರಮುಖರಾದ ನಾಗರಾಜ ಕುಲಕರ್ಣಿ, ಸುರೇಶ ಮರಳಪ್ಪನವರ, ದೇವೆಂದ್ರಪ್ಪ ಗೋಟೂರ, ಮಂಜುನಾಥ ತಳವಾರ, ಶ್ರೀಕಾಂತ ದೊಡ್ಡಮನಿ, ಎಂ.ಎ. ಸಂಗನಾಳ, ವಿಲಾಸ್ ಕೊಪ್ಪಳ, ಶಂಕರ ಮುಳಗುಂದ, ಬಸವರಾಜ ಹುಣಶಿಮರದ ಸೇರಿದಂತೆ ಹಲವರಿದ್ದರು.

Share this article