ತಂದೆ- ತಾಯಂದಿರರು ಮಕ್ಕಳ ಆರೋಗ್ಯ ಕಾಳಜಿ ವಹಿಸಲಿ: ಡಾ. ವಸಂತ ಕಲಾತಕರ

KannadaprabhaNewsNetwork |  
Published : May 29, 2025, 12:10 AM ISTUpdated : May 29, 2025, 12:11 AM IST
ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಡಾ. ವಸಂತ ಕಲಾತಕರ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳ ಆರೋಗ್ಯದ ಬಗ್ಗೆ ತಂದೆ- ತಾಯಂದಿರಿಗೆ ತಿಳಿವಳಿಕೆ ಮೂಡಿಸುವ ಕಾಳಜಿ ಬೇರೆಯವರಿಗೆ ಮಾದರಿಯಾಗಲಿ.

ಹಾವೇರಿ: ಮಾನವ ಸಮಾಜದಲ್ಲಿ ಪ್ರತಿಯೊಂದು ಮಗುವಿನ ಜೀವ ಮಹತ್ವದ್ದಾಗಿದ್ದು, ಅದನ್ನು ಕಾಪಾಡುವಲ್ಲಿ ಮಕ್ಕಳ ತಜ್ಞರ ಜವಾಬ್ದಾರಿ ಮುಖ್ಯವಾಗಿರುತ್ತದೆ ಎಂದು ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ನಾಗಪುರದ ಡಾ. ವಸಂತ ಕಲಾತಕರ ತಿಳಿಸಿದರು.ನಗರದ ವೈದ್ಯಕೀಯ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮತ್ತು ಡಾ. ರಾಜಕುಮಾರ ಮರೋಳ ಬರೆದಿರುವ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇಂತಹ ವಿಚಾರಸಂಕಿರಣಗಳ ಮೂಲಕ ವೈದ್ಯರು ಇತ್ತೀಚಿನ ಹೊಸ ತಂತ್ರಜ್ಞಾನದ ಬಳಕೆ ಹಾಗೂ ಸಂಶೋಧನೆಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವುದು ಅತ್ಯವಶ್ಯವಾಗಿದೆ. ಇಂತಹ ಸಮಾವೇಶಗಳು ಹಾಗೂ ವಿಚಾರಸಂಕಿರಣಗಳು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ನಡೆಯುತ್ತಿದ್ದವು. ಈಗ ಡಾ. ರಾಜಕುಮಾರ್ ಮರೋಳ ಹಾಗೂ ಹಾವೇರಿಯ ಇತರ ವೈದ್ಯರಿಂದ ಇಂತಹ ಪ್ರಯತ್ನ ಮಾಡಿರುವುದು ಪ್ರಶಂಸನಾರ್ಹ. ಮಕ್ಕಳ ಆರೋಗ್ಯದ ಬಗ್ಗೆ ತಂದೆ- ತಾಯಂದಿರಿಗೆ ತಿಳಿವಳಿಕೆ ಮೂಡಿಸುವ ಕಾಳಜಿ ಬೇರೆಯವರಿಗೆ ಮಾದರಿಯಾಗಲಿ ಎಂದರು.ಸಮಾವೇಶದಲ್ಲಿ ಮಕ್ಕಳಲ್ಲಿ ಬರುವ ಸಂಕ್ರಾಮಿಕ ರೋಗಗಳು ಹಾಗೂ ಅವುಗಳ ಕಾರಣಗಳು ಮತ್ತು ಪರಿಹಾರೋಪಾಯಗಳ ಕುರಿತು ನುರಿತ ವೈದ್ಯರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಸಮಾವೇಶ ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ತಜ್ಞರಿಗೆ ಮಹತ್ವದ್ದಾಗಿತ್ತು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಭಾಗಗಳಿಂದ 300ಕ್ಕೂ ಹೆಚ್ಚು ಮಕ್ಕಳ ತಜ್ಞರು ಹಾಗೂ ಬೇರೆ ಬೇರೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 90ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನೆಗಳ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.ಕಾರ್ಯಕ್ರಮದ ವಿಶೇಷತೆ ಹಾಗೂ ಅಚ್ಚು ಕಟ್ಟುತನದ ಬಗ್ಗೆ ಪ್ರಸ್ತಾಪಿಸಿ ಡಾ. ಭಾಸ್ಕರ್, ಡಾ. ಬಸವರಾಜ್, ಡಾ. ಯೋಗೇಶ್ ಪಾರಿಕ್, ಡಾ. ಆತನು ಭದ್ರಾ, ಡಾ. ಪ್ರದೀಪ್‌ಕುಮಾರ್ ಎಂ.ವಿ., ಡಾ. ಎಸ್.ವಿ. ಪಾಟೀಲ್ ಮಾತನಾಡಿದರು. ಕರ್ನಾಟಕ ಸಾಂಕ್ರಾಮಿಕ ರೋಗಗಳ ಘಟಕದ ಅಧ್ಯಕ್ಷ ಡಾ. ರಾಜಕುಮಾರ ಮರೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಸೋಯನ್ಸ್, ಡಾ. ಸಿ.ಆರ್. ಬಾಣಾಪುರಮಠ, ಡಾ. ಎಲ್.ಎಚ್. ಬಿದರಿ, ಡಾ. ರಘುನಾಥ್ ಸಿ.ಎನ್., ಡಾ. ಸುನಿತಾ ನಾಯಕ್, ಡಾ. ಪಿ.ಆರ್. ಹಾವನೂರ, ಡಾ. ಶ್ರೀನಾಥ್ ಮುಗಲಿ, ಡಾ. ಸಿದ್ದು ಚರಕಿ, ಡಾ. ಬಿ.ಆರ್. ಸಾಹುಕಾರ್, ಡಾ. ಅಂಜನ್ ಕುಮಾರ್ ಕೆ.ಟಿ., ಡಾ. ನವೀನ್ ಸಂಗೂರಮಠ, ಡಾ. ಲಕ್ಷ್ಮಿಪತಿ ಜಿ.ಎಚ್., ಡಾ. ಬಸವರಾಜ ಕೊಳ್ಳಿ ಮತ್ತಿತರರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ತಜ್ಞ ವೈದ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೇರೆ ಬೇರೆ ರಾಜ್ಯಗಳ ಕೊಲ್ಕತ್ತಾ, ಉದಯಪುರ, ನಾಗಪುರ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಶಿರಸಿ, ಹೊನ್ನಾವರ, ಕಾರವಾರ, ಕಲಬುರಗಿ, ವಿಜಯಪುರ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಗದಗ, ಧಾರವಾಡ ಮೊದಲಾದ ಸ್ಥಳಗಳಿಂದ ತಜ್ಞ ವೈದ್ಯರು ಭಾಗವಹಿಸಿದ್ದರು.ಡಾ. ಅಂಜು ಪ್ರಾರ್ಥಿಸಿದರು. ಡಾ. ಎಸ್.ಎಲ್. ಬಾಲೇಹೊಸೂರು ಸ್ವಾಗತಿಸಿದರು. ಡಾ. ಸುದೀಪ ಪಂಡಿತ್ ವಂದಿಸಿದರು. ಡಾ. ರೇಣುಕಾ ಮರೋಳ, ಡಾ. ಮೃಣಾಲ ಹಾಗೂ ಇಂಚರ ನಿರೂಪಿಸಿದರು. ಡಾ. ದೀಪಕ್ ಚಿರಡೋಣಿ ವರದಿ ಮಂಡಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ