ಪೋಷಕರು ಮಕ್ಕಳ ಆರೋಗ್ಯ ಕಾಳಜಿ ವಹಿಸಲಿ: ಕೆ.ಎ. ಹಾದಿಮನಿ

KannadaprabhaNewsNetwork |  
Published : Aug 13, 2026, 02:30 AM IST
ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲಾಯಿತು. | Kannada Prabha

ಸಾರಾಂಶ

19 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿ, ಜಂತುರಹಿತ ಮಕ್ಕಳು ಆರೋಗ್ಯವಂತ ಮಕ್ಕಳನ್ನಾಗಿಸುವಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ.

ರೋಣ: ಬಯಲು ಮಲ ವಿಸರ್ಜನೆ ದಿಸೆಯಿಂದ ಮತ್ತು ಪರಿಸರದ ಅಶುಚಿತ್ವದಿಂದ ಮಕ್ಕಳಲ್ಲಿ ಜಂತುಹುಳು ಸೋಂಕು ಸರ್ವೇಸಾಮಾನ್ಯವಾಗಿದ್ದು, ಜಂತುಹುಳು ಸೋಂಕು ನಿವಾರಣೆಗೆ ಔಷಧ ಲಭ್ಯವಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.

ಪಟ್ಟಣದ ವಿ .ಎಫ್. ಪಾಟೀಲ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಅಬ್ಬಿಗೇರಿ ಇವರ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ‌ ಮಾತನಾಡಿದರು.

ಮಗು ದೀರ್ಘಕಾಲದಿಂದ ಜಂತುಹುಳುಗಳನ್ನು ಹೊಂದಿದ್ದರೆ ರಕ್ತಹೀನತೆ, ಅಪೌಷ್ಟಿಕತೆ, ಹಸಿವಾಗದೆ ಇರುವುದು, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ಏಕಾಗ್ರತೆ ಕಲಿಕಾ ಸಾಮರ್ಥ್ಯ ಕುಂಠಿತಗೊಳ್ಳುವುದು. ಆದ್ದರಿಂದ 19 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿ, ಜಂತುರಹಿತ ಮಕ್ಕಳು ಆರೋಗ್ಯವಂತ ಮಕ್ಕಳನ್ನಾಗಿಸುವಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಕ್ಯೂ.ಎಂ. ಕಾಸಿದ್ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳು ತರಗತಿಯ ಪಠ್ಯಕ್ರಮದಲ್ಲಿ ಓದಿದಂತೆ ಬಯಲು ಮಲವಿಸರ್ಜನೆಯಿಂದ ಟೈಫಾಯಿಡ್ ವಾಂತಿಭೇದಿ, ಕಾಲರಾ ಕರುಳುಬೇನೆ ಜಂತುಹುಳು ಕಾಮಾಲೆ ಪೋಲಿಯೋದಂತಹ ರೋಗಗಳು ಕಲುಷಿತ ವಾತಾವರಣ, ನೀರಿನಿಂದ ಹರಡುತ್ತವೆ ಎಂದರು.

ಆರೋಗ್ಯ ಇಲಾಖೆಯ ಲಕ್ಷ್ಮಿ ಪಟ್ಟಣಶೆಟ್ಟಿ, ಶಾಂತಮ್ಮ ಬಿ. ಪ್ರಜ್ವಲ್ ನಾಯಕ ಇದ್ದರು.

ಇಂದಿನಿಂದ ವಿಶ್ವಾರಾಧ್ಯರ ಮೂರ್ತಿಗೆ ಶ್ರಾವಣದಲ್ಲಿ ಪೂಜೆ

ಗದಗ: ನಗರದ ಮಸಾರಿ ಭಾಗದಲ್ಲಿಯ ಸೂಡಿಯ ಜುಕ್ತಿಹಿರೇಮಠದ ಶಾಖಾಮಠವಾದ ವಿಶ್ವಾರಾಧ್ಯ ಮಂದಿರದ ವಿಶ್ವಾರಾಧ್ಯ ಲಿಂಗೋದ್ಭವ ಮೂರ್ತಿಗೆ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಆ. 13ರಿಂದ ಸೆ. 11ರ ವರೆಗೆ ಮಹಾರುದ್ರಾಭಿಷೇಕ ಬಿಲ್ವಾರ್ಚನೆ ಕಾರ್ಯಕ್ರಮ ಬೆಳಗ್ಗೆ 6.30 ರಿಂದ 8.30ರ ವರೆಗೆ ಪ್ರತಿದಿನ ನಡೆಯುವುದು ಎಂದು ಶ್ರೀಮಠದ ಕಾರ್ಯದರ್ಶಿ ಶರಣಬಸಯ್ಯ ಜುಕ್ತಿಹಿರೇಮಠ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಜನರಲ್ಲಿ ಎಚ್‌ಐವಿ ಜಾಗೃತಿ ಅಗತ್ಯ: ಡಾ. ಚಿದಾನಂದ ಸಂಜು
ಪೊನ್ನಣ್ಣರಿಗೆ ಸಂಪುಟ ದರ್ಜೆ ಸ್ಥಾನ: ಕೊಡಗಿನಲ್ಲಿ ಸಂಭ್ರಮ