ಮಾರಗೌಡನಹಳ್ಳಿ ಪ್ರೌಢಶಾಲೆಯಲ್ಲಿ ಸಂಸತ್ ಚುನಾವಣೆ: ಕೆ.ವಿ.ಮದನ್ ಸಿಎಂ..!

KannadaprabhaNewsNetwork |  
Published : Jul 09, 2025, 12:20 AM IST
2ಕೆಎಂಎನ್ ಡಿ20 | Kannada Prabha

ಸಾರಾಂಶ

ಹಲಗೂರು ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶೈಕ್ಷಣಿಕ ಸಾಲಿನ ಸಂಸತ್ ಚುನಾವಣೆಯಲ್ಲಿ ಕೆ.ವಿ.ಮದನ್ ಮುಖ್ಯಮಂತ್ರಿಯಾಗಿ, ಇಂದು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶೈಕ್ಷಣಿಕ ಸಾಲಿನ ಸಂಸತ್ ಚುನಾವಣೆಯಲ್ಲಿ ಕೆ.ವಿ.ಮದನ್ ಮುಖ್ಯಮಂತ್ರಿಯಾಗಿ, ಇಂದು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಈಚೆಗೆ ನಡೆದ ಶಾಲಾವರಣದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಿದರು. 18 ವಿದ್ಯಾರ್ಥಿಗಳು ಗೆದ್ದು ಮಂತ್ರಿ ಮಂಡಲ ರಚನೆ ಮಾಡಲಾಯಿತು.

10 ನೇ ತರಗತಿ ವಿದ್ಯಾರ್ಥಿ ಕೆ.ವಿ.ಮದನ್ ಮುಖ್ಯಮಂತ್ರಿಯಾಗಿ, ವಿದ್ಯಾರ್ಥಿನಿ ಇಂದು ಉಪಮುಖ್ಯಮಂತ್ರಿಯಾಗಿ, ಪಿ.ವಿನಯ್ ವಿಪಕ್ಷ ನಾಯಕರಾಗಿ ನೇಮಕವಾದರು. ಉಳಿದಂತೆ ಶಿಕ್ಷಣ ಮಂತ್ರಿಯಾಗಿ ಬಿಂದುಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಲತಾ ಎಚ್.ಎಂ, ಹಣಕಾಸು ಮಂತ್ರಿ ನಿತೀನ್ ಬಿ.ಎನ್, ಮಹಿಳಾ ಮತ್ತು ಮಕ್ಕಳ ಮಂತ್ರಿ ಜಾನವಿ, ಕ್ರೀಡಾ ಮಂತ್ರಿಯಾಗಿ ವೇಣು, ಮಹೇಂದ್ರ, ಚಂದನ್.ಎಚ್.ಎಸ್, ವಿಜ್ಞಾನ ಮತ್ತು ತಂತ್ರಜ್ಞಾನ ಅಕ್ಷತಾ ಜೆ.ಶೆಟ್ಟಿ, ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿ ಲಿಖಿತ್, ಬಿ.ಎಸ್.ಅನುಷ್ಕ, ದೀಕ್ಷಿತ್ ಗೌಡ, ತೋಟಗಾರಿಕೆ ಮಂತ್ರಿಗಳಾಗಿ ವಿನಯ್, ಚೇತನ್ ಕೆ.ಆರ್, ಅಪೂರ್ವ ಎಂ.ಎಸ್, ಪ್ರವಾಸೋದ್ಯಮ ಸಚಿವರಾಗಿ ಶರತ್ ಗೌಡ ಬಿ.ಆರ್, ನೀರಾವರಿ ಮಂತ್ರಿಗಳಾಗಿ ವಿಜಯಲಕ್ಷ್ಮಿ, ನಿಖಿಲ್ ಗೌಡ ಎಸ್.ಪಿ, ವಾರ್ತಾಮಂತ್ರಿಯಾಗಿ ಲೇಖನ ಎನ್, ಸ್ವಚ್ಛತಾ ಮಂತ್ರಿಗಳಾಗಿ ಅಮೃತ್ ಎಸ್,ಯಶವಂತ್.ಕೆ, ರುಚಿತಾ ವೈ.ಎಸ್, ಆರೋಗ್ಯ ಮಂತ್ರಿಯಾಗಿ ಸ್ನೇಹ, ಗ್ರಂಥಾಲಯ ಮಂತ್ರಿಯಾಗಿ ದೀಕ್ಷಾ, ದರ್ಶನ್ ಗೆ ಖಾತೆ ಹಂಚಿಕೆ ಮಾಡಲಾಯಿತು.

ಮಂತ್ರಿಮಂಡಲದ ಎಲ್ಲಾ ಸಂಪುಟ ದರ್ಜೆ ಸಚಿವರಿಗೆ ಪ್ರಭಾರಿ ಮುಖ್ಯಶಿಕ್ಷಕರು, ಶಾಲಾ ಸಂಸತ್ ನ ರಾಜ್ಯಪಾಲರಾದ ಕೆ.ನಿಂಗೇಗೌಡರು ಪ್ರಮಾಣ ವಚನ ಬೋಧಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಸಮಾಜವಿಜ್ಞಾನ ಶಿಕ್ಷಕರಾದ ಸಿ.ಶಿವಣ್ಣ, ಹನುಮಯ್ಯ ಎನ್.ಡಿ ಹಾಗೂ ಬಸಂತ್ ಕುಮಾರ್ ಕರ್ತವ್ಯ ನಿರ್ವಹಿಸಿದರು.

ಮತಗಟ್ಟೆ ಚುನಾವಣಾಧಿಕಾರಿಗಳಾಗಿ ಶಾಲೆ ಹಿರಿಯ ಶಿಕ್ಷಕರಾದ ಕೆ.ಎಂ.ಬಸವರಾಜು,ಡಿ.ಪಿ.ಮಹೇಶ್, ಕೃಷ್ಣಸ್ವಾಮಿ, ಸಿದ್ದರಾಜು, ಶಾಂತಮ್ಮ, ಮಂಜುಳ, ಬಿ.ಎಸ್.ಮಹೇಶ್ ಕುಮಾರ್, ಕಾವ್ಯ, ಸಹನಾ, ಅಶ್ವಿನಿ, ಯಾಸ್ಮಿನ್ ತಾಜ್, ಸ್ವರ್ಣಲತಾ ಇತರರು ಭಾಗವಹಿಸಿದ್ದರು.

PREV