ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯ ವೃದ್ಧಿಸಿಕೊಳ್ಳಿ: ಮಲ್ಲಿಕಾರ್ಜುನ್

KannadaprabhaNewsNetwork |  
Published : Oct 26, 2025, 02:00 AM IST
24ಕೆಎಂಎನ್ ಡಿ19 | Kannada Prabha

ಸಾರಾಂಶ

ಕ್ರೀಡೆ ದೈಹಿಕ ಕಸರತ್ತು, ಅನೇಕ ಹಳ್ಳಿಗಾಡಿನ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಸರಿಯಾದ ಪ್ರಚಾರ, ಮಾರ್ಗದರ್ಶನದ ಕೊರತೆಯಿಂದ ಅಂಥ ಪ್ರತಿಭೆಗಳು ಹಳ್ಳಿಗಳಲ್ಲಿಯೇ ಕಮರಿ ಹೋಗುವುದರ ಜೊತೆಗೆ ಮೊಬೈಲ್, ಟಿವಿಯಿಂದ ಇಂದಿನ ಗ್ರಾಮೀಣ ಭಾಗದ ಯುವಕರು ಕ್ರೀಡೆ ಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಯುವ ಜನತೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗ್ರಾಮದ ಸ್ನೇಹಜೀವಿ ಯುವಕರ ಬಳಗ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ನೈತಿಕತೆ ವೃದ್ಧಿಯಾಗುತ್ತದೆ ಎಂದರು.

ಬುದ್ಧಿಶಕ್ತಿ ಹೆಚ್ಚಿಸಬಲ್ಲ ಅನೇಕ ಗ್ರಾಮೀಣ ಆಟಗಳು ಮರೆಯಾಗುತ್ತಿವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಯುವಕರು ನಾಯಕತ್ವ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಿ ರೂಪುಗೊಳ್ಳಲು ನೆರವಾಗತ್ತದೆ ಎಂದರು.

ಕ್ರೀಡೆ ದೈಹಿಕ ಕಸರತ್ತು, ಅನೇಕ ಹಳ್ಳಿಗಾಡಿನ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಸರಿಯಾದ ಪ್ರಚಾರ, ಮಾರ್ಗದರ್ಶನದ ಕೊರತೆಯಿಂದ ಅಂಥ ಪ್ರತಿಭೆಗಳು ಹಳ್ಳಿಗಳಲ್ಲಿಯೇ ಕಮರಿ ಹೋಗುವುದರ ಜೊತೆಗೆ ಮೊಬೈಲ್, ಟಿವಿಯಿಂದ ಇಂದಿನ ಗ್ರಾಮೀಣ ಭಾಗದ ಯುವಕರು ಕ್ರೀಡೆ ಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮದ ಹಿರಿಯ ಮುಖಂಡ ದೇವರಸೆಗೌಡ, ಗ್ರಾಪಂ ಮಾಜಿ ಅಧ್ಯಕ್ಷ ದರ್ಶನ್, ಬಂಡಿಹೊಳೆ ಸ್ನೇಹಜೀವಿ ಯುವಕರ ಬಳಗದ ಸದಸ್ಯರಾದ ವೃಥ್ವಿಕ್, ದಿಲೀಪ್, ಚೇತನ್, ಗಗನ್, ಕಾರ್ತೀಕ, ಬೈರ, ಯುವರಾಜ್ ಸೇರಿದಂತೆ ಉಪಸ್ಥಿತರಿದ್ದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ, ಸಂಸ್ಕೃತಿ ಉಳಿಸಿ: ಬಿ.ವಿ.ನಂದೀಶ್

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳಿಗೆ ಸಂಸ್ಕಾರ ಕಲಿಸಿ ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್ ತಿಳಿಸಿದರು.

ನಗರದ ಪಿಇಎಸ್ ವಿಜ್ಞಾನ ಕಾಲೇಜಿನ ಆವರಣದಲ್ಲಿ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆ ವತಿಯಿಂದ ನಡೆದ ಹರ್ಷಿತ ನಾಗೇಶ್ ಅವರ ಭರತನಾಟ್ಯ ರಂಗ ಪ್ರವೇಶ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಇಲ್ಲದ ಅಥವಾ ಅನಾಥಾಶ್ರಮದಲ್ಲಿ ಬೆಳೆಯುವಂತಹ ಮಕ್ಕಳ ಸ್ಥಿತಿಗತಿಗಳನ್ನು ನಾವು ನೋಡಿದ್ದೇವೆ. ಇಂತಹ ಕೆಲ ಮಕ್ಕಳು ಅಪರಾಧ ಕೃತ್ಯಗಳಲ್ಲೂ ಭಾಗಿಗಳಾಗಿರುವುದನ್ನು ಕಂಡಿದ್ದೇವೆ. ಆದ್ದರಿಂದ ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸುವ ಮೂಲಕ ನಮ್ಮ ಸಂಸ್ಕೃತಿ ಅವರಿಗೆ ತಿಳಿಸಿ ಅದನ್ನು ಪಾಲಿಸುವಂತೆ ಮಾಡಬೇಕು ಎಂದರು.

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಕಾರ್‍ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕಲಾಪ್ರತಿಭೆಗಳು ಹೊರ ಜಗತ್ತಿಗೆ ಪಾದಾರ್ಪಣೆ ಮಾಡಬೇಕು ಎಂದು ಸಲಹೆ ನೀಡಿದರು.

ಭರತನಾಟ್ಯ ಪ್ರಕಾರದಲ್ಲಿ ಇಲಾಖೆ ವತಿಯಿಂದ ಕಲಾಪ್ರತಿಭೋತ್ಸವ ಸ್ಪರ್ಧಾ ಕಾರ್‍ಯಕ್ರಮ ಜಾರಿಗೊಳಿಸಿದೆ. ವಯಸ್ಸಿಗೆ ತಕ್ಕಂತೆ ಕಲಾ ಸ್ಪರ್ಧೆ ಮಾಡುತ್ತಿದ್ದೇವೆ. ಜಿಲ್ಲಾ ಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟದವರೆಗೂ ಪ್ರತಿನಿಧಿಸಲು ಅವಕಾಶ ಇದೆ. ಇದನ್ನು ಭರನಾಟ್ಯ ಕಲಾವಿದರು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್, ನಟರಾಜ ಕಲಾನಿಕೇತನ ಸಂಸ್ಥಾಪಕ ನಿರ್ದೇಶಕ ವಿದ್ವಾನ್ ಪ್ರಕಾಶ್ ಎಸ್. ಅಯ್ಯರ್, ಬೆಂಗಳೂರಿನ ನೃತ್ಯ ಗಂಗೋತ್ರಿ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ (ಪ್ರದರ್ಶನ ಕಲಾ ವಿಭಾಗ) ಎ.ಎಸ್. ಸುಧೀರ್‌ಕುಮಾರ್, ನಾಟ್ಯ ವಿದುಷಿ ಕೆ.ಎಸ್. ಶೈಲಾಭಾಗವಹಿಸಿದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ