ಕನ್ನಡಪ್ರಭ ವಾರ್ತೆ ಹಲಗೂರು
ಬೆಳತೂರು ಗ್ರಾಮದಲ್ಲಿ ಜಯಸಿಂಹ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ, ಕ್ರಿಕೆಟ್, ಫುಟ್ ಬಾಲ್, ಬ್ಯಾಸ್ಕೆಟ್‌ಬಾಲ್ ನಂತಹ ಆಧುನಿಕ ಕ್ರೀಡೆಗಳಲ್ಲದೆ ಕಬಡ್ಡಿ, ಬುಗುರಿ, ಚಿನ್ನಿದಾಂಡು, ಲಗೋರಿ, ಅಗ್ಗ ಜಗ್ಗಾಟ ಮುಂತಾದ ಸಾಂಪ್ರದಾಯಿಕ ಆಟಗಳು ಸಹ ನಮ್ಮ ಗ್ರಾಮೀಣ ಕ್ರೀಡೆಗಳ ಒಂದು ಭಾಗವಾಗಿದೆ ಎಂದರು.
ಟೂರ್ನಿಯಲ್ಲಿ ಪ್ರಥಮ ಬಹುಮಾನವನ್ನು ಚನ್ನಪಟ್ಟಣ ತಾಲೂಕಿನ ಜಗದಾಪುರ ಇಲೆವೆನ್ 25 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡರು. ಬೆಳತೂರು ಜಯಸಿಂಹ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನ ಪಡೆದು 15 ಸಾವಿರ ರು. ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಇಲೆವೆನ್ಸ್ ತೃತೀಯ ಬಹುಮಾನ ಪಡೆಯಿತು.ಈ ವೇಳೆ ಗ್ರಾಪಂ ಸದಸ್ಯ ಬಿ.ಕೆ.ಪ್ರಕಾಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಹುಲ್ಲೆಗಾಲ ಎಂ.ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಕೃಷ್ಣಮೂರ್ತಿ, ಬಿ.ಕೆ.ಸೋಮಶೇಖರ್, ವೀರೇಶ್, ಶಿವಕುಮಾರ್, ಮನೋಜ್, ಶಿವಮೂರ್ತಿ, ಕೀರ್ತಿಕುಮಾರ್, ರಾಜಶೇಖರ್ ನಾಡಗೌಡ ನಾಗೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇಂದು ವಿದ್ಯುತ್ ವ್ಯತ್ಯಯಹಲಗೂರು: ಸಮೀಪದ ಗುಂಡಾಪುರ ಗೇಟ್ ಬಳಿ ಇರುವ 66/11 ಕೆ.ವಿ.ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜ.22 ರಂದು ಗುರುವಾರ ವಿದ್ಯುತ್ ಪರಿವರ್ತಕ ಬದಲಾವಣೆ ಕಾರ್ಯ ನಡೆಯಲಿದೆ. ಈ ಕಾರಣದಿಂದ ಹಲಗೂರು, ಲಿಂಗಪಟ್ಟಣ ದಳವಾಯಿ ಕೋಡಿಹಳ್ಳಿ, ಗುಂಡಾಪುರ, ಎಚ್.ಬಸಾಪುರ, ಕೊನ್ನಾಪುರ, ಬೆನಮನಹಳ್ಳಿ, ಕುಂತೂರು, ನಿಟ್ಟೂರು, ಎನ್.ಹಲಸಹಳ್ಳಿ, ತೊರೆಕಾಡನಹಳ್ಳಿ, ಸಾಗ್ಯ ಸರಗೂರು, ಬಸವನಹಳ್ಳಿ, ಎಚ್.ಬಸಾಪುರ, ಕೆಂಪಯ್ಯನದೊಡ್ಡಿ, ಚಿಲ್ಲಾಪುರ, ಒದು ಬಸಪ್ಪನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜ.22 ರಂದು ಗುರುವಾರ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಳವಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.