ಕನ್ನಡಪ್ರಭ ವಾರ್ತೆ, ತುಮಕೂರುಸಾಂಸ್ಕೃಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಾಡಿ ಸಂಸ್ಕೃತಿಯನ್ನು ಇನ್ನು ಹೆಚ್ಚು ಪ್ರಚುರ ಪಡಿಸಬೇಕು ಎಂದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಹೇಳಿದರು.
ತುಮಕೂರು ದಸರಾ ಮಹೋತ್ಸವ ಬಹು ಆಯಾಮಗಳ, ಬಹು ವೈವಿಧ್ಯಮಯವಾದ ಕಾರ್ಯಕ್ರಮ. ಕಿರಿಯರಿಗೆ, ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಹಿರಿಯರಿಗೆ ಹಾಗೂ ಎಲ್ಲ ವರ್ಗದವರಿಗೂ ಬೇಕಾದಂತಹ ವೈವಿಧ್ಯಮಯವಾದ ಆಚರಣೆಗಳು, ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಸಮಗ್ರವಾದ ದಸರಾ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.ಸಾಂಸ್ಕೃತಿಕ ದಸರಾಕ್ಕಾಗಿ ವೇದಿಕೆಯನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಜಿಲ್ಲೆಯ ಸುಮಾರು 3 ಸಾವಿರ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ 8 ದಿಗಳ ಕಾಲ ನರಸಿಂಹರಾಜು ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾ ತಂಡಗಳಿಗೆ ಅವಕಾಶ ನೀಡಲಾಗಿದ್ದು, 4 ದಿನಗಳಲ್ಲಿ 46 ಕಲಾ ತಂಡಗಳು, 1882 ಮಂದಿ ಕಲಾವಿದರು ಭಾಗವಹಿಸಿದ್ದಾರೆ. 8 ದಿನಗಳಲ್ಲಿ ಸುಮಾರು 9 ಸಾವಿರ ಕಲಾವಿದರು ತಮ್ಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಈ ಪೈಕಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಪ್ರತಿಷ್ಠಿತ ಶಾಸ್ತ್ರೀಯ ನೃತ್ಯ, ಭರತನಾಟ್ಯ, ಹರಿಕಥೆ, ಸುಗಮ ಸಂಗೀತ ಸೇರಿದಂತೆ ಹಳ್ಳಿ ಸೊಗಡಿನ ಎಲ್ಲ ಜಾನಪದ ಕಲಾ ಪ್ರಕಾರಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.