ಉಡುಪಿ: ಉಡುಪಿಯಲ್ಲಿ 18 ರಂದು ಸರ್ವಜ್ಞ ಪೀಠಾರೋಹಣ ಮಾಡಲಿರುವ, ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣಕ್ಕೆ ಆಗಮಿಸಿದರು.ಶ್ರೀಗಳನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ನೇತೃತ್ವದಲ್ಲಿ ಹಾರ, ಫಲವಸ್ತು, ಪಾದಕಾಣಿಕೆ ನೀಡಿ ಗೌರವಿಸಲಾಯಿತು. ಸ್ವಾಮೀಜಿ ಅವರು ಸಂಸ್ಥೆಯ ಚಟುವಟಿಕೆ ಮೆಚ್ಚಿ ಹರಸಿದರು.ಕಳೆದ ವಾರ ಪುರಂದರದಾಸರ ಹಾಡನ್ನು ಹಾಡುತ್ತ, ನೃತ್ಯ ಮಾಡಿ, ವರ್ಲ್ಡ್ ಬುಕ್ ಆಫ್ ಗಿನ್ನೆಸ್ ನಲ್ಲಿ ದಾಖಲೆಗೈದ, ಹೆಜ್ಜೆ ಗೆಜ್ಜೆ ಸಂಸ್ಥೆಯ ವಿದುಷಿ ದೀಕ್ಷಾ ರಾಮಕೃಷ್ಣ ಇವರನ್ನು ಸ್ವಾಮೀಜಿ ಯಕ್ಷಗಾನ ಕಲಾರಂಗ ವತಿಯಿಂದ ಅಭಿನಂದಿಸಿ, ಅನುಗ್ರಹಿಸಿದರು.