ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಪಾಠಶಾಲೆಯ ಪ್ರತಿಭೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಅವರು ಆಶೀರ್ವಚನ ನೀಡಿ, ಶಾಲಾ ಪರಿಸರವು ಮಕ್ಕಳಿಗೆ ಕೇವಲ ಮಾಹಿತಿ ಸಂಗ್ರಹ, ಪರೀಕ್ಷೆ, ಅಂಕಗಳಿಸುವುದಕ್ಕೆ ಸೀಮಿತವಾಗುತ್ತಿದೆ ಆದ್ದರಿಂದ ಕೌಟುಂಬಿಕ ಪರಿಸರದಲ್ಲಿ ಮಕ್ಕಳಿಗೆ ಸಂಬಂಧಗಳ ಮಹತ್ವ, ಬದುಕಿನ ಮೌಲ್ಯಗಳನ್ನು ಪೋಷಕರು ಮಕ್ಕಳೊಂದಿಗೆ ಸಮಯ ನೀಡಿ, ಮೊಬೈಲ್ ಮತ್ತು ಸಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮಾಡದಂಡ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಶಿಕ್ಷಕರು ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ ಅವರ ಜ್ಞಾನ ವಿಸ್ತಾರವಾಗುವಂತೆ ಮಾಡಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಹೆಚ್ಚು ಜ್ಞಾನವಂತರನ್ನಾಗಿ ಬೆಳೆಸುವುದರಿಂದ ಭವಿಷ್ಯ ಉಜ್ವಲವಾಗಿರುತ್ತದೆ. ಮಕ್ಕಳು ಜ್ಞಾನವಂತರಾಗಲು ಪೂರಕ ವಾತಾವರಣ ನಿರ್ಮಿಸಬೇಕಾಗಿದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರವಿಂದ ಆಯುರ್ವೇದ ಚಿಕಿತ್ಸಾಲಯದ ಖ್ಯಾತ ವೈದ್ಯರಾದ ಡಾ.ಸಿ.ಪಿ.ಪ್ರಶಾಂತ್ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೆಚ್ಚು ಪ್ರೋತ್ಸಾಹ ನೀಡಿ ಉತ್ತಮ ಚಾರಿತ್ರ್ಯವಂತರನ್ನಾಗಿಸಿ, ಶಿಸ್ತು ಸಂಸ್ಕಾರವಂತರನ್ನಾಗಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗುತ್ತದೆ. ಆಧುನಿಕ ಜೀವನ ಪದ್ಧತಿಯಲ್ಲಿ ಪ್ರತಿಜೀವಕ ಔಷಧಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು ಅದರ ದುಷ್ಪರಿಣಾಮ ಮತ್ತು ಅಡ್ಡ ಪರಿಣಾಮಗಳಿಂದಾಗಿ ರೋಗಿಗಳ ಸಂಖ್ಯೆ ಉಲ್ಭಣಿಸುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆತಾಲೂಕು ದೈಹಿಕ ಶಿಕ್ಷಣ ಪರೀವಿಕ್ಷಕರಾದ ಶಮಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು. ಅತಿಥಿಗಳಾಗಿ ಸಮಾಜ ಸೇವಕರು, ಜೆಮ್ಸ್ ಫೌಂಡೇಶನ್‌ನ ನಿರ್ದೇಶಕರಾದ ಟಿ.ಸಿ ಗಂಗಾಧರ್, ಕರ್ನಾಟಕ ಯಕ್ಷಗಾನ ಮಂಡಳಿ ಸದಸ್ಯರಾದ ಎ.ಆರ್ ಪುಟ್ಟಸ್ವಾಮಿ, ಪ್ರಗತಿಪರ ಕೃಷಿಕ ವಿ. ಮಲ್ಲೇನಹಳ್ಳಿಯ ಕಾಂತರಾಜು ಭಾಗವಹಿಸಿದ್ದರು. ಭಾರತೀಯ ಸೇನೆಯ ಯೋಧರಾದ ಗುರ್ಖಾರೆಜಿಮೆಂಟ್‌ನ ಇಂದ್ರ ಬಹದ್ದೂರ್ ಥಾಪಾ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ಧರಾಮಯ್ಯ, ಆಡಳಿತಾಧಿಕಾರಿಗಳಾದ ವಿ.ಬಿ. ಮಹಲಿಂಗಯ್ಯ, ಬೆಟ್ಟಯ್ಯ ನಾಗರಾಜು, ಸಿ.ಇ.ಓ ಕ್ಯಾಪ್ಟನ್ ಹರಿಪ್ರಸಾದ್, ಸಂಯೋಜಕರಾದ ಡಾ.ಎಲ್.ಎಂವೆಂಕಟೇಶ್, ದಕ್ಷಿಣಾಮೂರ್ತಿ, ನಿಜಿತ್, ಯತೀಶ್, ಟಿ.ಪಿ.ಯೋಗಾನಂದ ಪಿ.ಆರ್.ಓಗಳಾದ ಭರತ್, ತೀರ್ಥಪ್ರಸಾದ್, ಮುಖ್ಯ ಶಿಕ್ಷಕರಾದ ವಾಣಿ ಎಂ.ಎಸ್, ರಂಜಿತ್ ಮತ್ತು ಇತರರಿದ್ದರು. ಮಕ್ಕಳಿಂದ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.