ಕನ್ನಡಪ್ರಭ ವಾರ್ತೆ ಮೈಸೂರು
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡ ನಿವಾರಣೆಗೆ ಸಂಗೀತ ಆಲಿಕೆ ಸಹಕಾರಿ ಎಂದರು.
ರೋಗಗಳಿಗೆ ಬಲಿಯಾಗುತ್ತಿದ್ದಾಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಇದರಿಂದ ಹಲವಾರು ರೆ. ಹೀಗಾಗಿ ಸಂಜೆ ಬಿಡುವಿನ ವೇಳೆ ಸಂಗೀತ ಆಲಿಸುವುದರಿಂದ ಮಾನಸಿಕವಾಗಿ ನೆಮ್ಮದಿ ಪಡೆದು, ಒತ್ತಡ ನಿವಾರಿಸಿಕೊಳ್ಳಬಹುದು ಎಂದರು.ಮೈಸೂರು ರಾಜಮಹಾರಾಜರ ಕಾಲದಿಂದಲೂ ಸಾಂಸ್ಕೃತಿಕ ನಗರಿ ಎಂದೇ ಹೆಸರುವಾಸಿ. ಇತ್ತೀಚಿನ ದಿನಗಳಲ್ಲಿ ನಾಗರಾಜ ಬೈರಿ ಅವರ ನೇತೃತ್ವದ ಸುಗಮ ಸಂಗೀತ ಪರಿಷತ್ ಹಲವಾರು ಮಂದಿಗೆ ವೇದಿಕೆ ಒದಗಿಸುವ ಮೂಲಕ ನಿಜವಾದ ಕಲಾಪೋಷಕ ಪಾತ್ರ ನಿರ್ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಚಲನಚಿತ್ರ ನಿರ್ಮಾಪಕ ಎಸ್.ಎ. ಶ್ರೀನಿವಾಸ್, ಕಲಾಪೋಷಕ ಕಾರ್ಪೋರೇಷನ್ ಮಂಜುನಾಥ್ ಮುಖ್ಯ ಅತಿಥಿಗಳಾಗಿದ್ದರು.
ಪಾವನಾ, ಪರಮೇಶ್, ರವಿರಾಜ್ ಹಾಸು, ನರಸಿಂಹಮೂರ್ತಿ,. ನಾಗೇಂದ್ರ, ತೇಜಾವತಿ, ಸುಮಾ ಅವರು ಗಾಯನ ಪ್ರಸ್ತುತಪಡಿಸಿದರು. ಅಜಯ್ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.