- ಶಿಕಾರಿಪುರ ತಾ. ಅಂಬಾರಗೊಪ್ಪದ ವಿಕಲಚೇತನ ಗೌರಮ್ಮ ರುದ್ರಪ್ಪ
- ದೇಶ- ವಿದೇಶಗಳಲ್ಲಿನ ಸಾಧನೆಗೆ 60ಕ್ಕೂ ಅಧಿಕ ಪ್ರಶಸ್ತಿ, ಪುರಸ್ಕಾರ, ಮೆಡಲ್ ಪಡೆದಿರುವ ಸಾಧಕಿ
- ಈ ಗೆಲವಿಗೆ ಪ್ರೇರಣೆಯಾದ ದೇಶದ ಮಹಾಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಭ್ರಮ- - -
ಶಿಕಾರಿಪುರ: ತಾಲೂಕಿನ ಅಂಬಾರಗೊಪ್ಪ ಗ್ರಾಮದ ವಿಕಲಚೇತನ ಗೌರಮ್ಮ ರುದ್ರಪ್ಪ ಶನಿವಾರ ಥೈಲ್ಯಾಂಡ್‌ನಲ್ಲಿ ಯುನೈಟೆಡ್ ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಫೆಡರೇಷನ್ ವತಿಯಿಂದ ಆಯೋಜಿಸಲಾಗಿದ್ದ 80 ಕೆ.ಜಿ.ಯವರ ವಿಭಾಗದ ಪಂಜ ಕುಸ್ತಿಯಲ್ಲಿ ಭರ್ಜರಿ ಗೆಲವು ಸಾಧಿಸಿ ಭಾರತದ ಕೀರ್ತಿ ಪತಾಕೆಯನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಗೆಲುವಿನ ಬಗ್ಗೆ ಸಂಭ್ರಮ ಹಂಚಿಕೊಂಡ ಗೌರಮ್ಮ, ಪಂಜ ಕುಸ್ತಿಯಲ್ಲಿ ಈಗಾಗಲೇ ದೇಶ- ವಿದೇಶಗಳಲ್ಲಿ 60ಕ್ಕೂ ಅಧಿಕ ಪ್ರಶಸ್ತಿ ಪುರಸ್ಕಾರ ಮೆಡಲ್ ಪಡೆದಿದ್ದೇನೆ. ಈಗ ಥೈಲ್ಯಾಂಡ್ ಪಂದ್ಯದಲ್ಲಿನ ಸಾಧನೆ ಅತ್ಯಂತ ಸಂತಸ ತಂದಿದೆ. ಈ ಸಾಧನೆಗೆ ದೇಶದ ಜನತೆ, ಹಿತೈಷಿಗಳ ಹಾರೈಕೆ ಬಹುಮುಖ್ಯ ಕಾರಣವಾಗಿದ್ದು, ದೇಶದ ಮಹಾಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಈ ಕುರಿತು ಅಖಿಲ ಭಾರತ ವೀರಶೈವ ರಾಜ್ಯ ಕಾರ್ಯಕಾರಣಿ ಸದಸ್ಯ ಎನ್.ವಿ. ಈರೇಶ್ ಪ್ರತಿಕ್ರಿಯಿಸಿದ್ದು, ಈಶ್ವರ್ ಫೌಂಡೇಶನ್ ವತಿಯಿಂದ ಗೌರಮ್ಮ ಅವರಿಗೆ ಸಾಧ್ಯವಾದ ಧನಸಹಾಯ ಜತೆಗೆ ವಸ್ತ್ರನೀಡಿ ಪ್ರೋತ್ಸಾಹಿಸಲಾಗಿತ್ತು. ಗೌರಮ್ಮ ಪ್ರಶಸ್ತಿ ಗೆಲ್ಲುವ ಮೂಲಕ ದೇಶ, ರಾಜ್ಯ, ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಥೈಲ್ಯಾಂಡ್‌ನಲ್ಲಿ ಅರ್ಹ ಗೆಲವು ಸಾಧಿಸಿ ತಾಯ್ನಾಡಿಗೆ ವಾಪಸಾಗುವಾಗ ಅತ್ಯಂತ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ತಿಳಿಸಿದರು.
- - --2ಕೆಎಸ್.ಕೆಪಿ3:
ಥೈಲ್ಯಾಂಡ್‌ನಲ್ಲಿ ನಡೆದ ಪಂಜ ಕುಸ್ತಿಯಲ್ಲಿ ವಿಕಲಾಂಗಚೇತನೆ ಗೌರಮ್ಮ ಭರ್ಜರಿ ಗೆಲವು ಸಾಧಿಸಿ ಸಂಭ್ರಮಿಸಿದರು.