ಧಾರವಾಡ:
ಈ ವೇಳೆ ಜಿಲ್ಲಾಧ್ಯಕ್ಷೆ ಭುವನ ಬಳ್ಳಾರಿ ಮಾತನಾಡಿ, ಕಳೆದ ಒಂಭತ್ತು ವರ್ಷಗಳಿಂದ ಸಂಬಳ ಕೇವಲ ₹ 1500 ಮಾತ್ರ ಹೆಚ್ಚಳವಾಗಿದೆ. ಇದರಿಂದಾಗಿ ಬೆಲೆ ಏರಿಕೆಯ ಹೊಡೆತಕ್ಕೆ ಸಿಕ್ಕು ಈ ಬಡ ತಾಯಂದಿರ ಕುಟುಂಬಗಳು ಬೀದಿ ಪಾಲಾಗುವಂತಾಗಿದೆ. ವಿವಿಧ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಗಣನೀಯವಾಗಿ ವೇತನ ಹೆಚ್ಚಿಸಲಾಗಿದೆ. ಆದರೆ, ರಾಜ್ಯದಲ್ಲಿ ದುಡಿದ ವೇತನವೂ ಕೂಡ ಸರಿಯಾಗಿ ದೊರೆಯುತ್ತಿಲ್ಲ. ಕಳೆದ ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಮತ್ತು ಗೌರವಧನ ನಿಗದಿತ ಅವಧಿಯಲ್ಲಿ ಸಿಗದೇ ಸಂಕಷ್ಟದಲ್ಲಿ ಇರುವರು ಎಂದು ಬೇಸರ ವ್ಯಕ್ತಪಡಿಸಿ, ರಾಜ್ಯದ ಗೌರವಧನ ಹಾಗೂ ಕೇಂದ್ರದ ಪ್ರೋತ್ಸಾಹಧನ ಒಟ್ಟಿಗೆ ಸೇರಿಸಿ ಕನಿಷ್ಠ ₹ 15,000 ನಿಗದಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಮಸ್ತ ಆ್ಯಪ್ ಮತ್ತು ಇನ್ನಿತರೆ ಯಾವುದೇ ಮೊಬೈಲ್ ಆ್ಯಪ್‌ನ್ನು ಪ್ರಸ್ತುತ ಸ್ವರೂಪದಲ್ಲಿ ಮೊಬೈಲ್‌ಗೆ ಅಳವಡಿಸಿಕೊಂಡು ಕಾರ್ಯನಿರ್ವಹಿಸುವುದು ಆಶಾ ಕಾರ್ಯಕರ್ತೆಯರಿಗೆ ಕಷ್ಟ ಸಾಧ್ಯ. ಆಶಾ ಕಾರ್ಯಕರ್ತೆಯರು ತಾಂತ್ರಿಕತೆಗೆ ವಿರೋಧಿಗಳಲ್ಲ. ಆದರೆ, ಮೂಲಭೂತ ಸೌಕರ್ಯಗಳೇ ಇಲ್ಲದೆ ಕೇವಲ ಆ್ಯಪ್ ಮೂಲಕ ಕೆಲಸ ಮಾಡಿ ಎಂದು ಒತ್ತಡ ಹೇರುವುದು ಸರಿಯಲ್ಲ ಎಂದರು.ಜಿಲ್ಲಾ ಉಪಾಧ್ಯಕ್ಷೆ ಭಾರತಿ ಶೆಟ್ಟರ್ ಮಾತನಾಡಿದರು. ಪ್ರತಿಭಟನೆಯ ಸರೋಜ ಮಡಿವಾಳರ, ನಂದಾ ದೊಡ್ಡಮನಿ, ಸ್ವಪ್ನಾ ಸುಳ್ಳದ, ರಾಜೇಶ್ವರಿ ಕೋರಿ, ಮಂಜುಳಾ ಸಿದ್ದರೆಡ್ಡಿ, ಶಾರದಾ ತಾವರಗೇರಿ, ಭಾರತೀ ಶೆಟ್ಟರ್, ಲಲಿತಾ ವಾಲಿಕಾರ, ಶೋಭಾ ದೂರದಮಠ, ಸವಿತಾ ಮಜ್ಜಿಗಿ, ಮಂಜುಳಾ ಬಡಿಗೇರ ಇದ್ದರು.