ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ತಾಲೂಕಿನ ಕುಂಟೋಜಿ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವದೇಗೋಳ ಗ್ರಾಮದ ಕೆರೆಯನ್ನು ವಿಬಿಜಿ-ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಜನರು ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು ಎಂದರು.
ವಿಬಿಜಿ-ರಾಮ್ ಜಿ ಯೋಜನೆ ಮಾಹಿತಿ:ನರೇಗಾ ಬದಲಾಗಿ ಜು. ೧ರಿಂದ ವಿಬಿಜಿ-ರಾಮ್ ಜಿ ಯೋಜನೆ ಜಾರಿಯಾಗಿದೆ. ಈ ಯೋಜನೆಯಲ್ಲಿ ಕೂಲಿಯ ಮೊತ್ತ ₹೩೮೨ ಆಗಿದೆ. ಒಂದು ಜಾಬ್ ಕಾರ್ಡ್ ಗೆ ವರ್ಷಕ್ಕೆ ೧೦೦ ದಿನಗಳ ಬದಲಾಗಿ ೧೨೫ ದಿನಗಳ ಕಾಲ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಗ್ರಾಮೀಣ ಜನರಿಗೆ ಕೆಲಸವಿಲ್ಲದೆ ಗುಳೆ ಹೋಗದಂತೆ ತಡೆಯಲು ಇದ್ದೂರಲ್ಲೇ ಉದ್ಯೋಗ ಖಾತ್ರಿ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಚೆನ್ನಾಗಿ ಕೆಲಸ ಮಾಡಿದರೆ ೧೨೫ ದಿನ ನಿಮಗೆ ಕೆಲಸ ನೀಡುತ್ತೇವೆ. ಸಮುದಾಯ ಕಾಮಗಾರಿಗಳ ಜೊತೆಗೆ ವಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಈ ಪ್ರಸ್ತಕ ವರ್ಷದ ಅನುಮೋಧನೆಗೊಂಡಿರುವ ಕ್ರಿಯಾಯೋಜನೆಯಲ್ಲಿ ವಯಕ್ತಿಕ ಕಾಮಗಾರಿಗಳ ಫಲಾನುಭವಿಗಳು ಕಾಮಗಾರಿ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭ ಗ್ರಾಪಂ ಕಾರ್ಯದರ್ಶಿ ರಾಜು ಗಾರಗಿ, ಸಮುದಾಯ ಆರೋಗ್ಯ ಇಲಾಖೆ ಅಧಿಕಾರಿ ಪರಮಾನಂದ ಹುನಗುಂದ, ವಿಜಯಲಕ್ಷ್ಮೀ ಪಾಟೀಲ, ಡಿಇಒ ಮುದಕಪ್ಪ ದೊಣ್ಣೆಗುಡ್ಡ, ಯಲ್ಲಪ್ಪ ಗೊರವರ, ಅನ್ನಪೂರ್ಣಾ ಹಿರೇಮಠ ಸೇರಿ ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.