ನರಗುಂದ:ಪ್ರಸಕ್ತ ವರ್ಷ ನರಗುಂದ ವಿಧಾನಸಭಾ ಮತಕ್ಷೇತ್ರದ ಕೆಲವು ಗ್ರಾಮೀಣ ಭಾಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಪಂ ಪಿಡಿಒ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸದ್ಯ ಈ ಮತ ಕ್ಷೇತ್ರದಲ್ಲಿ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಎನ್‌ಆರ್‌ಜಿ ಯೋಜನೆಯಲ್ಲಿ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಪ್ರಾರಂಭವಾಗಿದೆ. ಹಾಗಾಗಿ ಉದ್ಯೋಗಕ್ಕೆ ಬರುವ ಕೂಲಿ ಕಾರ್ಮಿಕರಗಿ ಶುದ್ಧ ನೀರು ಕೊಡಬೇಕು, ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದು ಕಾರ್ಮಿಕರಿಗೆ ಎನು ಸಮಸ್ಯೆದಾಗದ ಹಾಗೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ನಮ್ಮ ಮತಕ್ಷೇತ್ರದ ತಾಪಂ ಅಧಿಕಾರಿಗಳು ಮಲಪ್ರಭಾ ಜಲಾಶಯದಿಂದ ಕಾಲುವೆ ಮತ್ತು ಮಲಪ್ರಭ ನದಿಗೆ ನೀರು ಬಿಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಿ. ನಾನು ಕೂಡ ಪತ್ರ ಬರೆದು ಜಲಾಶಯದಿಂದ ನೀರು ಬಿಡಲು ತಿಳಿಸುತ್ತೇನೆಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ತಾಲೂಕು ಆರೋಗ್ಯ ಅಧಿಕಾರಿ ಡಾ.ರೇಣುಕಾ ಕೊರವನವರ, ರೋಣ ತಹಸೀಲ್ದಾರ್ ನಾಗರಾಜ ಕೆ., ಗದಗ ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಡಾ. ನಾಗರಾಜ, ಚಂದ್ರಶೇಖರ ಕುಂದಕೂರ, ಮಲ್ಲಯ್ಯ, ಸಂತೋಷಕುಮಾರ ಪಾಟೀಲ, ಹಾದಿಮನಿ, ಪುರಸಭೆ ಮುಖ್ಯಧಿಕಾರಿ ಸಂತೋಷ ಬ್ಯಾಳಿ, ಎಲ್ಲಾ ಗ್ರಾಪಂ ಪಿಡಿಓ, ತೋಟಗಾರಿಕೆ, ಪಶು ಸಂಗೋಪನ, ಹೆಸ್ಕಾಂ, ಇಲಾಖೆ ಅಧಿಕಾರಿಗಳು ಇದ್ದರು.