ಲಕ್ಷ್ಮೇಶ್ವರ: ನವರಾತ್ರಿ ಉತ್ಸವದಲ್ಲಿ ದುರ್ಗಾ ದೇವಿಯ ಆರಾಧನೆ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ ಹೇಳಿದರು.
ದುರ್ಗಾ ದೌಡ್ ಕಾರ್ಯಕ್ರಮ ಭಾನುವಾರ ಬೆಳಗ್ಗೆ 5:30ಕ್ಕೆ ಕೆಮ್ಮಮ್ಮ ದೇವಿ ದೇವಸ್ಥಾನದಿಂದ ಪ್ರಾರಂಭಗೊಂಡು ಮ್ಯಾಗೇರಿ ಓಣಿಯ ದುರ್ಗಮ್ಮನ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಈ ವೇಳೆ ಗುರುನಾಥ ದಾನಪ್ಪನವರ, ವಿರುಪಾಕ್ಷಪ್ಪ ಪಡಗೇರಿ, ಸಿದ್ದಪ್ಪ ಪೂಜಾರ, ಸಿದ್ದಪ್ಪ ಬನ್ನಿ,ಶಂಕರ ಬಾಳಿಕಾಯಿ, ಮಹೇಶ ಲಿಂಬಯಸ್ವಾಮಿಮಠ, ನೀಲಪ್ಪ ಕರ್ಜಕ್ಕಣ್ಣವರ, ಸಿದ್ದಪ್ಪ ದುರಗಣ್ಣವರ, ಮಹೇಶ ಹೊಗೆಸೊಪ್ಪಿನ, ಗಂಗಾಧರ ಮೆಣಸಿನಕಾಯಿ, ತಿಪ್ಪಣ್ಣ ಸಂಶಿ, ದಸರಾ ಸಮಿತಿ ಅಧ್ಯಕ್ಷ ದೇವಪ್ಪ ಗಡೆದ, ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ರಾಜು ಅರಳಿ, ರವಿ ಲಿಂಗಶೆಟ್ಟಿ, ಪ್ರಶಾಂತ ಪೋತದಾರ, ಕೊರದಾಳ, ರಾಜೇಶ್ವರಿ ದಾನಪ್ಪನವರ, ಪೋತುದಾರ, ನಾಗರತ್ನ ನಾಗಲೋಟಿ ಸೇರಿದಂತೆ ಅನೇಕರು ಇದ್ದರು.