ಕನ್ನಡಪ್ರಭ ವಾರ್ತೆ ಶಿರಾ
ಅವರು ತಾಲೂಕಿನ ಚಿಕ್ಕ ಹುಲಿಕುಂಟೆ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯ ಭಾನುವಾರ ಆಯೋಜಿಸಿದ್ದ ಶಿವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸನ್ನು ಸೀಮಿತದಲ್ಲಿ ಇಟ್ಟುಕೊಂಡು, ಸಾಂಸಾರಿಕ ಜೀವನದಿಂದ ಉದ್ಧಾರದ ಕಡೆ ಮುನ್ನಡೆಯಲು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ರಾಜಯೋಗಿ ಬಿ.ಕೆ. ಶಾಂತಿ ಮಾತನಾಡಿ, ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡದ ಕಾರಣ, ಸಮಾಜ ಸರಿ ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ದೈವತ್ವ ಮತ್ತು ಆಧ್ಯಾತ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮುನ್ನಡೆಸುವುದೇ ನಮ್ಮ ಮೂಲ ಉದ್ದೇಶ. ಸ್ವಾರ್ಥವಿಲ್ಲದೆ ಕೆಲಸ ಮಾಡುವ, ಪ್ರತಿಫಲ ಬಯಸದೆ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಲು ಆಧ್ಯಾತ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾಪಂ ಸದಸ್ಯ ರವಿಕುಮಾರ್, ಬೆಸ್ಕಾಂ ಎಇಇ ಶಾಂತಕುಮಾರ್, ಹನುಮಂತರಾಯಪ್ಪ, ನಿವೃತ್ತ ಶಿಕ್ಷಕ ಶಿವರಾಂ, ಜ್ಯೋತಿ, ಶಿಕ್ಷಕ ಚಂದ್ರಣ್ಣ, ಮುಖಂಡ ರಂಗನಾಥ್ ಸೇರಿ ಹಲವರು ಹಾಜರಿದ್ದರು.