ತಪಸ್ವಿಗಳ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ: ಮಾಜಿ ಶಾಸಕ ಪರಣ್ಣ ಮುನವಳ್ಳಿ

KannadaprabhaNewsNetwork |  
Published : Feb 20, 2024, 01:46 AM IST
ತಪಸ್ವಿಗಳ ಸ್ಮರಣೆಯಿಂದ  ಮನಸ್ಸಿಗೆ ನೆಮ್ಮದಿಃ ಪರಣ್ಣ ಮುನವಳ್ಳಿ | Kannada Prabha

ಸಾರಾಂಶ

ಆರಾಳದಲ್ಲಿ ನೆಲೆಸಿರುವ ತಪಸ್ವಿ ಶ್ರೀಗುರು ರುದ್ರಸ್ವಾಮಿ ತಾತಾನವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಶಿಲಾಮಂಟಪ ನಿರ್ಮಾಣಗೊಂಡಿರುವುದು ಸಂತಸ ತಂದಿದೆ.

ಗಂಗಾವತಿ: ಹಬ್ಬ ಹರಿದಿನಗಳು ಸೇರಿದಂತೆ ತಪಸ್ವಿಗಳ ಸ್ಮರಣೆ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲೂಕಿನ ಆರಾಳ ಗ್ರಾಮದಲ್ಲಿ ಗುರು ರುದ್ರಸ್ವಾಮಿ ತಾತನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾ ಮಂಟಪ್ಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆರಾಳದಲ್ಲಿ ನೆಲೆಸಿರುವ ತಪಸ್ವಿ ಶ್ರೀಗುರು ರುದ್ರಸ್ವಾಮಿ ತಾತಾನವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಶಿಲಾಮಂಟಪ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಇಂತಹ ತಪಸ್ವಿಗಳ ಸ್ಮರಣೆ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀ, ಬೃಹನ್ಮಠ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಶ್ರೀ, ಮೈನಳ್ಳಿ ಹಿರೇಮಠ ಸಿದ್ದೇಶ್ವರ ಶಿವಾಚಾರ್ಯ ಶ್ರೀ, ಬೃಹನ್ಮಠ ಸುಳೇಕಲ್ ಭುವನೇಶ್ವರಯ್ಯ ತಾತಾನವರು, ಬೃಹನ್ಮಠ ಅರಳಹಳ್ಳಿ ಗವಿಸಿದ್ದಯ್ಯ ತಾತಾನವರು ಅನೇಕ ಶರಣರು ಭಾಗವಹಿಸಿದ್ದರು. ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ದೇವಸ್ಥಾನದ ಕಮಿಟಿ ಅಧ್ಯಕ್ಷ ಭೀಮನಗೌಡ ಮಾಲಿಪಾಟೀಲ್, ಕಮಿಟಿಯ ಸದಸ್ಯರಾದ ವೀರೇಶಪ್ಪ ಡ್ಯಾಗಿ, ವಿರೂಪಾಕ್ಷಪ್ಪ ಗುಡುದೂರು, ಮಾನಪ್ಪ ನವಲಿ, ಚನ್ನವೀರಗೌಡ ಕೋರಿ, ತೋಟಪ್ಪ ನಾಯಕ, ಖಾಜಾಹುಸೇನ, ನಿಂಗಪ್ಪ, ಡ್ಯಾಗಿ, ಅಯ್ಯಣ್ಣ, ರಂಗಪ್ಪ ಈಳಗೇರ, ದಕ್ಷಿಣ ಮೂರ್ತಿ, ವೀರಯ್ಯಸ್ವಾಮಿ ಹಿರೇಮಠ, ಶ್ರೀಕಂಠಯ್ಯ ಹಿರೇಮಠ, ಸಂಗಯ್ಯಸ್ವಾಮಿ ಹಿರೇಮಠ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!