ಧ್ಯಾನದಿಂದ ನೆಮ್ಮದಿ ಜೀವನ: ಅರುಣಾದೇವಿ

KannadaprabhaNewsNetwork |  
Published : Mar 10, 2025, 12:18 AM IST
ಕಾರಟಗಿಯ ೨೩ನೇ ವಾರ್ಡಿನ ದೇವಿಕ್ಯಾಂಪಿನ ದೇವಿ ಬಿರೇಶ್ವರ ಗುಡ್ಡದ ಮೇಲಿನ ನೂತನ ಪೀರಮಿಡ್ ಧ್ಯಾನದಲ್ಲಿ ಶುಕ್ರವಾರ ವಿಶ್ವಮಹಿಳಾ ದಿನದ ನಿಮಿತ್ಯ ಪೌರಕಾರ್ಮಿಕರಿಗೆ ಕುಂಕುಮ ಅರಿಷಣೆ ಸೀರೆ ನೀಡಿ ಗೌರವಿಸಲಾಯಿತು.==೦== | Kannada Prabha

ಸಾರಾಂಶ

ಧ್ಯಾನದಿಂದ ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯ ಪಡೆಯುತ್ತೇವೆ.

ಕಾರಟಗಿ: ಕೇವಲ ಯೋಗಿಗಳು ಮತ್ತು ಸನ್ಯಾಸಿಗಳು ಅಷ್ಟೇ ಧ್ಯಾನ ಮಾಡುವುದಿಲ್ಲ, ಸಾಮಾನ್ಯರು ಸಹ ಒತ್ತಡದ ಜೀವನದಿಂದ ತಪ್ಪಿಸಿ ನೆಮ್ಮದಿ ಜೀವನ, ಚೈತನ್ಯಯುಕ್ತ ದಿನಚರಿ, ಸಾದಾ ಚಟುವಟಿಕೆಗಳಿಂದ ಸಕಾರಾತ್ಮಕವಾಗಿರಲು ಧ್ಯಾನದ ಅಗತ್ಯವಾಗಿದೆ ಎಂದು ಪುರಸಭೆ ಸದಸ್ಯೆ ಜಿ.ಅರುಣಾದೇವಿ ಹೇಳಿದರು.

ಇಲ್ಲಿನ ೨೩ನೇ ವಾರ್ಡ್‌ನ ದೇವಿಕ್ಯಾಂಪಿನ ದೇವಿ ಬಿರೇಶ್ವರ ಗುಡ್ಡದಲ್ಲಿ ನೂತನ ಪೀರಮಿಡ್ ಧ್ಯಾನದಲ್ಲಿ ವಿಶ್ವಮಹಿಳಾ ದಿನಾಚರಣೆ ನಿಮಿತ್ತ ಪುರಸಭೆ ಮಹಿಳಾ ಕಾರ್ಮಿಕರಿಗೆ ಧ್ಯಾನದ ಮಹತ್ವ ಕುರಿತು ತಿಳಿಸಿದರು.

ಧ್ಯಾನದಿಂದ ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯ ಪಡೆಯುತ್ತೇವೆ. ಧ್ಯಾನ ಖಿನ್ನತೆ ಮತ್ತು ಆತಂಕದಿಂದ ಪರಿಸ್ಥಿತಿ ಸರಳವಾಗಿ ಎದುರಿಸುತ್ತದೆ. ಮುಖ್ಯವಾಗಿ ಧ್ಯಾನ ನಿಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ತ್ವರಿತ ಪರಿಹಾರ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇದರ ಪ್ರಯೋಜನೆ ಪಡೆಯಲು ಸಾಕಷ್ಟು ಪ್ರಯತ್ನ ಬೇಕು. ಆರಂಭಿಕ ದಿನಗಳಲ್ಲಿ ನಿಮ್ಮ ಆಲೋಚನೆ ದೂರವಿಡಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ನಿಮಗೆ ಕಷ್ಟವಾಗುತ್ತದೆ. ಧ್ಯಾನ ಮಾಡುವಾಗ ಇದು ಕಾಲ ಕಳೆದಂತೆ ಸರಿಹೋಗುತ್ತದೆ. ಗಮನ ಬೇರೆಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಮ್ಮ ಉಸಿರಾಟದ ಮೇಲೆ ಗಮನ ಗರಿಸಿ. ಧ್ಯಾನ ಮಾಡಲು ನೀವು ಯಾವಾಗ ರೆಡಿ ಇರುತ್ತೀರೋ ಅದೇ ಸೂಕ್ತ ಸಮಯ, ನಿಮ್ಮ ಕೆಲಸ ಕಾರ್ಯ, ಒತ್ತಡಗಳಿಲ್ಲದ ಸಮಯದಲ್ಲಿ ಧ್ಯಾನ ಮಾಡಬಹುದು. ಆದರೆ, ಒಮ್ಮೆ ಒಂದು ಸಮಯದಲ್ಲಿ ಧ್ಯಾನ ಮಾಡಿದರೆ, ಅದೇ ಸಮಯಕ್ಕೆ ಧ್ಯಾನ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಜೀವನ ಒಂದು ಭಾಗವಾಗುವಂತೆ ಮಾಡಿಕೊಳ್ಳಿ ಎಂದರು.

ಹೆಜ್ಜೆ ಸಂಘಟನೆ ಅಧ್ಯಕ್ಷೆ ಡಾ. ಶಿಲ್ಪಾ ದಿವಟರ್ ಮಾತನಾಡಿ, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ನಮ್ಮ ಪಟ್ಟಣ ಸ್ವಚ್ಛವಾಗಿಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸ್ವಚ್ಛ ಪಟ್ಟಣ ಎಂದು ಗುರುತಿಸಿ ಕೊಳ್ಳುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದೆ. ಪ್ರತಿ ದಿನ ಸರಿಯಾದ ಸಮಯಕ್ಕೆ ಪಟ್ಟಣ ಸ್ವಚ್ಛಗೊಳಿಸಲು ಸಜ್ಜಾಗುತ್ತಾರೆ. ಇದಕ್ಕೆ ನಾಗರಿಕರು, ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು. ಮಹಿಳಾ ಪೌರ ಕಾರ್ಮಿಕರ ಬರಿಗೈಯಲ್ಲಿ ಕೆಲಸ ಮಾಡದೆ, ಗ್ಲೌಸ್, ಗಮ್ ಬೂಟ್ ಧರಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದರೊಂದಿಗೆ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು.

ನಮ್ಮಂಥ ಪೌರಕಾರ್ಮಿಕರಿಗೆ ಸನ್ಮಾನಿಸಿ,ಅರಿಷಣ ಕುಂಕಮ ಕೊಟ್ಟು, ಸೀರೆ ಕಣ ನೀಡಿ ಗೌರವಿಸಿದ ಈ ಕ್ಷಣ ನಮಗೆ ಅತ್ಯಂತ ಖುಷಿ ನೀಡಿದೆ ಎಂದು ಕಣ್ಣಲ್ಲಿ ಆನಂದ ಭಾಷ್ಪ ತುಂಬಿಕೊಂಡು ಮಹಿಳಾ ಪೌರಕಾರ್ಮಿಕರು ಭಾವುಕರಾದರು.

ಈ ವೇಳೆ ಪುರಸಭೆ ಸದಸ್ಯೆ ಸುಪ್ರಿಯಾ ಅರಳಿ, ಸುಮಿತ್ರಾ, ರಾಜಲಕ್ಷ್ಮೀ, ಜಡಿಯಪ್ಪ ಸಾಲುಗುಂದಿ, ವಿಜಯಕುಮಾರ ಗಂಗಾವತಿ, ರವಿಶಂಕರ್ ಯರಡೋಣಾ, ಮಾರುತಿ ಈಳಿಗೇರ್, ರಮೇಶ್, ಎಚ್.ಜಿ.ಶೇಖರ್, ಕೆ.ಹನುಮಂತ ಪೂಜಾರಿ, ಹೊನ್ನೂರಪ್ಪ, ಬಸವರಾಜ ಸಿಂಗಪುರ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''