ಪೇಜಾವರ ಶ್ರೀಗಳಿಗೆ ‘ಸನಾತನ ರತ್ನ’ ಬಿರುದು ಸಹಿತ ಸನ್ಮಾನ

KannadaprabhaNewsNetwork |  
Published : Apr 23, 2025, 12:36 AM IST
22ರತ್ನ | Kannada Prabha

ಸಾರಾಂಶ

ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಧರ್ಮಸಭೆಯಲ್ಲಿ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಂಕಿ ಪಂಚಾಲಯ್ಯ ದಂಪತಿ ಈ ಗೌರವವನ್ನು ಶ್ರೀಪಾದರಿಗೆ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಆಂಧ್ರಪ್ರದೇಶದ ನೆಲ್ಲೂರಿನ ಪ್ರತಿಷ್ಠಿತ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಹಾಲಂಡಿನ ಮಹರ್ಷಿ ವೇದಿಕ್ ಯುನಿವರ್ಸಿಟಿ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ‘ಸನಾತನ ರತ್ನ’ ಬಿರುದು ನೀಡಿ ಸಂಮಾನಿಸಲಾಗಿದೆ‌.

ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಧರ್ಮಸಭೆಯಲ್ಲಿ ಆದಿಶಂಕರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಂಕಿ ಪಂಚಾಲಯ್ಯ ದಂಪತಿ ಈ ಗೌರವವನ್ನು ಶ್ರೀಪಾದರಿಗೆ ಸಮರ್ಪಿಸಿದರು.

ಶ್ರೀಗಳ ಸರಳತೆ, ವಿದ್ವತ್ತು, ಸನಾತನ ಧರ್ಮ ರಕ್ಷಣೆಗಾಗಿ ನಿರಂತರವಾಗಿ ದೇಶಾದ್ಯಂತ ಸಂಚರಿಸುತ್ತಾ ಜಾಗೃತಿ ಕಾರ್ಯ ನಡೆಸುತ್ತಿರುವುದು, ಹಿಂದು ವಿರೋಧಿ ಕೃತ್ಯಗಳ ವಿರುದ್ಧ ಧ್ವನಿ, ಗೋರಕ್ಷಣೆ, ಪೇಜಾವರ ನೂರಾರು ಸಂಸ್ಥೆಗಳ ಯಶಸ್ವಿ ನಿರ್ವಹಣೆ, ಅಯೋಧ್ಯೆ ರಾಮ ಮಂದಿರದ ಟ್ರಸ್ಟಿಯಾಗಿ ಸಕ್ರಿಯ ಕರ್ತವ್ಯ ಮತ್ತು ರಾಮನ ಪ್ರತಿಷ್ಠಾಪನಾ ಕಾರ್ಯದಲ್ಲೂ ಮುಂಚೂಣಿಯ ಪಾತ್ರ ಹೀಗೆ ಸನಾತನ ಧರ್ಮ ಸಂರಕ್ಷಣೆಗಾಗಿ ಶ್ರೀಗಳು ನಡೆಸುತ್ತಿರುವ ಬಹುವಿಧದ ಕೈಂಕರ್ಯಗಳಿಗಾಗಿ ಈ ಗೌರವ ನೀಡಲಾಗಿದೆ ಎಂದು ಅಭಿವಂದನ ಬಿನ್ನವತ್ತಳೆಯಲ್ಲಿ ಉಲ್ಲೇಖಿಸಲಾಗಿದೆ.

ಹಿರಿಯ ವಿದ್ವಾಂಸ ಎ. ಹರಿದಾಸ ಭಟ್, ಪ್ರದ್ಯುಮ್ನಾಚಾರ್ಯ ಜೋಷಿ, ವೇಂಕಟೇಶಾಚಾರ್ಯ ಇದ್ದರು. ವಾಸುದೇವ ಭಟ್ ಪೆರಂಪಳ್ಳಿ ರೂಪಿಸಿದರು.

ಸಂಸ್ಥೆಯ ಅಧೀನದಲ್ಲಿರುವ ನೆಲ್ಲೂರು ಸಮೀಪದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಗುಡಿಯಲ್ಲಿ ಇತ್ತೀಚೆಗೆ ಶ್ರೀಗಳು ಶ್ರೀ ವೇಂಕಟೇಶ್ವರ ಸ್ವಾಮಿಯ ಪ್ರಾಣಪ್ರತಿಷ್ಠೆ ನೆರವೇರಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ