ಚಿಕ್ಕಮಗಳೂರುಸಂಧ್ಯಾ ಸುರಕ್ಷಾ, ವಿಧವಾ ವೇತನ ಮತ್ತು ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳ ವಾರ್ಷಿಕ ಆದಾಯ ಮಿತಿ ₹32 ಸಾವಿರ ದಿಂದ ₹1,20 ಲಕ್ಷಕ್ಕೆ ಏರಿಕೆ ಮಾಡಿದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಧಿಕ ಮಂದಿಗೆ ಪಿಂಚಣಿ ದೊರೆಯುವುದು ಅನುಮಾನ.
(ಸೂಕ್ತ ಫೋಟೋ ಬಳಸಿ)
- ಆದಾಯ ಮಿತಿ ₹1,20 ಲಕ್ಷಕ್ಕೆ ಏರಿಡಿದರೂ ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಧಿಕ ಮಂದಿಗೆ ಪಿಂಚಣಿ ಅನುಮಾನ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಂಧ್ಯಾ ಸುರಕ್ಷಾ, ವಿಧವಾ ವೇತನ ಮತ್ತು ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳ ವಾರ್ಷಿಕ ಆದಾಯ ಮಿತಿ ₹32 ಸಾವಿರ ದಿಂದ ₹1,20 ಲಕ್ಷಕ್ಕೆ ಏರಿಕೆ ಮಾಡಿದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 26 ಸಾವಿರಕ್ಕೂ ಅಧಿಕ ಮಂದಿಗೆ ಪಿಂಚಣಿ ದೊರೆಯುವುದು ಅನುಮಾನ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 1.83 ಲಕ್ಷ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳಿದ್ದಾರೆ. ಈ ಪೈಕಿ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿ ಅರ್ಹತೆ ಹೊಂದಿಲ್ಲದ ಹಾಗೂ ನಕಲಿ ದಾಖಲೆ ನೀಡಿ ಪಿಂಚಣಿ ಪಡೆಯಲಾಗುತ್ತಿದೆ ಎಂದು ಜಿಲ್ಲೆಯ ಸುಮಾರು 61 ಸಾವಿರಕ್ಕೂ ಅಧಿಕ ಪಿಂಚಣಿ ಫಲಾನುಭವಿಗಳನ್ನು ಸಂಶಯಾಸ್ಪದ/ ಸಂದೇಹಾಸ್ಪದ ಎಂದು ಗುರುತಿಸಿ ಪರಿಶೀಲನೆ ಕಾರ್ಯ ಆರಂಭಿಸಿತ್ತು.
ಸುಮಾರು 69.061 ಕಳೆದ ಮಾರ್ಚ್‌ನಿಂದ ಜಿಲ್ಲೆಯ ಸಂಶಯಾಸ್ಪದ ಪಿಂಚಣಿದಾರರಿಗೆ ನೋಟಿಸ್ ನೀಡುವ ಮೂಲಕ ಅಗತ್ಯ ದಾಖಲೆ ಸಲ್ಲಿಕೆ ಮಾಡಲು ಸೂಚಿಸಲಾಗಿತ್ತು. ಈ ಪೈಕಿ ಸುಮಾರು 10 ಸಾವಿರ ಮಂದಿ ಅಗತ್ಯ ದಾಖಲೆ ಸಲ್ಲಿಸಿ ಪಿಂಚಣಿ ಸ್ವೀಕರಿಸುತ್ತಿದ್ದಾರೆ. ಆದರೆ, ಬಹುತೇಕ ಸಂಶಯಾಸ್ಪದ ಪಿಂಚಣಿದಾರರ ಆದಾಯ ಮಿತಿ ₹32 ಸಾವಿರಕ್ಕಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೇ ಸ್ಥಗಿತಗೊಳಿಸಲಾಗಿತ್ತು.
ಈ ಸಮಸ್ಯೆ ರಾಜ್ಯಾದ್ಯಂತ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಿಂಚಣಿ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಏರಿಕೆ ಮಾಡಿ ಆದೇಶಿಸಿದೆ. ಆದರೂ ಸಾಕಷ್ಟು ಮಂದಿಗೆ ಪಿಂಚಣಿ ದೊರೆಯುವುದು ಅನುಮಾನವಾಗಿದೆ.
ಮಿತಿ ಏರಿಕೆಯಿಂದ 41 ಸಾವಿರ ಕುಟುಂಬಕ್ಕೆ ಲಾಭ
ರಾಜ್ಯ ಸರ್ಕಾರ ಕಳೆದ ಅಧಿವೇಶನದಲ್ಲಿ ಪಿಂಚಣಿದಾರ ಕುಟುಂಬದ ವಾರ್ಷಿಕ ಆದಾಯ ಮಿತಿ ₹32 ಸಾವಿದಿಂದ ₹1.20 ಲಕ್ಷ ಕ್ಕೆ ಹೆಚ್ಚಳ ಮಾಡಿ ಆದೇಶಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 41,258 ಪಿಂಚಣಿದಾರರಿಗೆ ಪಿಂಚಣಿ ಸೌಲಭ್ಯ ಮುಂದುವರಿಯಲಿದೆ.
ಪಿಂಚಣಿ ಮರು ಸ್ವೀಕಾರಕ್ಕೆ ಏನು ಮಾಡಬೇಕು?
ಕುಟುಂಬದ ಆದಾಯ ಮಿತಿ ₹1.20 ಲಕ್ಷ ಇರುವವರು ತಹಸೀಲ್ದಾರ್ ಕಚೇರಿಯಲ್ಲಿ ಆಧಾರ್ ಸಂಖ್ಯೆಯೊಂದಿಗೆ ಈ ಹಿಂದೆ ಪಡೆದ ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ನೀಡಿದರೆ, ಪಿಂಚಣಿ ಮರು ಪಾವತಿ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-- ಬಾಕ್ಸ್--
26 ಸಾವಿರ ಮಂದಿಗೆ ಪಿಂಚಣಿ ಕಟ್
ಒಟ್ಟು 26,224 ಮಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಪೈಕಿ ಬಹುತೇಕರು ಸುಳ್ಳು ವಯೋಮಿತಿ ದಾಖಲೆ ನೀಡಿ ವೃದ್ಧಾಪ್ಯ ವೇತನ ಪಡೆಯುತ್ತಿರುವುದು ಕಂಡು ಬಂದಿದೆ. ಉಳಿದಂತೆ ಪಿಂಚಣಿ ಪಡೆಯುವ ಸದಸ್ಯರ ಕುಟುಂಬಸ್ಥರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಎಪಿಎಲ್ ಕಾರ್ಡ್ ಹೊಂದಿರುವುದು ಕಂಡು ಬಂದಿದೆ. ಆದರೂ ಸೂಕ್ತ ದಾಖಲೆ ಸಲ್ಲಿಸಿದವರಿಗೆ ಪಿಂಚಣಿ ಮರುಸ್ಥಾಪನೆ ಆಗಲಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
-- ಕೋಟ್--
ಸಂಶಯಾಸ್ಪದ ಪಿಂಚಣಿದಾರರಿಗೆ ಈಗಾಗಲೇ ತಿಳುವಳಿಕೆ ಪತ್ರ ನೀಡಲಾಗಿದೆ. ₹1.20 ಲಕ್ಷ ಆದಾಯ ಮಿತಿಯಲ್ಲಿ ಇರುವ 41,258 ಮಂದಿಗೆ ಪಿಂಚಣಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಕಿ ಪ್ರಕರಣಗಳಲ್ಲಿ ಸೂಕ್ತ ದಾಖಲೆ ಸಲ್ಲಿಸಿದರೆ ಮುಂದುವರಿಸಲಾಗುತ್ತದೆ.
- ರಘು, ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಪಿಂಚಣಿ ವಿಭಾಗ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.