ಬಂದ್‌ಗೆ ನೀರಸ ಪ್ರತಿಕ್ರಿಯೆ 15ಕ್ಕೂ ಹೆಚ್ಚು ಜನ ವಶಕ್ಕೆ

KannadaprabhaNewsNetwork |  
Published : Mar 23, 2025, 01:34 AM IST
22ಕೆಡಿವಿಜಿ9-ದಾವಣಗೆರೆಯಲ್ಲಿ ಬಂದ್ ವೇಳೆ ಬಸ್ಸು ಸಂಚಾರಕ್ಕೆ ಅಡ್ಡಿಪಡಿಸಿದವರಿಗೆ ಎಚ್ಚರಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ. ...............22ಕೆಡಿವಿಜಿ10-ದಾವಣಗೆರೆಯಲ್ಲಿ ಬಂದ್ ವೇಳೆ ಬಸ್ಸು ಸಂಚಾರಕ್ಕೆ ಅಡ್ಡಿಪಡಿಸಿದ ಕನ್ನಡ ಪರ ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು. ..............22ಕೆಡಿವಿಜಿ11-ದಾವಣಗೆರೆಯಲ್ಲಿ ಬಂದ್ ವೇಳೆ ಬಸ್ಸು ಸಂಚಾರಕ್ಕೆ ಅಡ್ಡಿಪಡಿಸಿದ ಕನ್ನಡ ಪರ ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.................22ಕೆಡಿವಿಜಿ12-ದಾವಣಗೆರೆಯಲ್ಲಿ ಬಂದ್ ವೇಳೆ ಬಸ್ಸು ಸಂಚಾರಕ್ಕೆ ಅಡ್ಡಿಪಡಿಸಿದ ಕನ್ನಡ ಪರ ಸಂಘಟನೆ ಮುಖಂಡರು, ಕಾರ್ಯಕರ್ತರ ಬಲವಂತದ ರಸ್ತೆ ತಡೆ, ಬಂದ್ ಬೇಡವೆಂದು ಮನವೊಲಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ. | Kannada Prabha

ಸಾರಾಂಶ

ಎಂಇಎಸ್ ಸಂಘಟನೆ ನಿಷೇಧಿಸಲು, ಮರಾಠ ಪುಂಡರ ಹಾವಳಿಗೆ ಅಂತ್ಯ ಹಾಡುವಂತೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರ, ಜಿಲ್ಲೆಯಲ್ಲಿ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಲವಂತದಿಂದ ಬಸ್‌ ತಡೆಗೆ ಮುಂದಾಗಿದ್ದ 15ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆಎಂಇಎಸ್ ಸಂಘಟನೆ ನಿಷೇಧಿಸಲು, ಮರಾಠ ಪುಂಡರ ಹಾವಳಿಗೆ ಅಂತ್ಯ ಹಾಡುವಂತೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರ, ಜಿಲ್ಲೆಯಲ್ಲಿ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಲವಂತದಿಂದ ಬಸ್‌ ತಡೆಗೆ ಮುಂದಾಗಿದ್ದ 15ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು. ನಗರದ ಶ್ರೀ ಜಯದೇವ ವೃತ್ತ ಸೇರಿದಂತೆ ಪ್ರಮುಖ, ವೃತ್ತ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತಲ್ಲದೇ, ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳೇ ಗಸ್ತು ತಿರುಗುತ್ತಾ ಎಲ್ಲಿಯೂ ಅಹಿತಕರ ಘಟನೆ, ಬಲವಂತದ ಬಂದ್ ಆಗದಂತೆ ನಿಗಾ ವಹಿಸಿದ್ದರು. ಬಸ್ಸು ಇತರೆ ವಾಹನ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ಬೆಳಿಗ್ಗೆಯಿಂದಲೇ ಜಯದೇವ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ ಇತರೆ ಪ್ರಮುಖ ವೃತ್ತಗಳಲ್ಲಿ ಕನ್ನಡ ಸಂಘಟನೆಗಲ ಒಕ್ಕೂಟ, ಕನ್ನಡ ಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಹೋರಾಟ ಶುರುವಾಗಿತ್ತು. ಆದರೆ, ಹೋರಾಟಕ್ಕೆ ಜನರೂ ಬೆಂಬಲಿಸಿದರಲ್ಲದೇ, ಯಾವೊಂದು ಸಂಘಟನೆಯವರಾಗಲೀ, ಪ್ರತಿಭಟನಾಕಾರರಾಗಲೀ ಯಾವುದೇ ಅಂಗಡಿ ಮುಗ್ಗಟ್ಟು ವ್ಯವಹಾರಕ್ಕೆ ಅಡ್ಡಿಪಡಿಸದೇ ಶಾಂತಿ, ಸುವ್ಯವಸ್ಥಿತವಾಗಿ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮಾತನಾಡಿದ ಕನ್ನಡ ಪರ ಸಂಘಟನೆಗಳ ಮುಖಂಡರು, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು, ಮರಾಠಿ ಭಾಷಿಗ ಕೆಲವರು ನಡೆಸುತ್ತಿರುವ ಪುಂಡಾಟಿಕೆ ಮಟ್ಟ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಕರ್ನಾಟಕ ಬಸ್ಸು ಚಾಲಕರು, ನಿರ್ವಾಹಕರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು, ರಾಜ್ಯದ ವಾಹನಗಳ ಮೇಲೆ ಮಸಿ ಸುರಿಯುವಂತಹ ಹೀನಮನಸ್ಥಿತಿ ಮೆರೆಯುತ್ತಿರುವ ದುರಂಹಕಾರಿ ಪುಂಡರ ಹಾವಳಿ ತಡೆಗೆ ತಕ್ಷಣ ಎಂಇಎಸ್ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಎಲ್ಲಾ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಒಕ್ಕೂಟ ಕರೆ ನೀಡಿತ್ತು. ಅಲ್ಲದೇ, ದಾವಣಗೆರೆ ಜಿಲ್ಲಾ ಕೇಂದ್ರದ ಮಾರುಕಟ್ಟೆಪ್ರದೇಶವು ಶನಿವಾರ ಮಧ್ಯಾಹ್ನದ ನಂತರ ಎಂದಿನಂತೆ ರಜಾ ಇರುತ್ತಿತ್ತು. ಬಂದ್ ನೆಪಕ್ಕಾದರೂ ಬೆಳಿಗ್ಗೆಯಿಂದಲೇ ವ್ಯಾಪಾರ, ವಹಿವಾಟು ಬಂದ್ ಆಗಬಹುದೆಂಬ ಹೋರಾಟಗಾರರ ನಿರೀಕ್ಷೆಯೂ ಹುಸಿಯಾಗಿತ್ತು. ಎಂದಿನಂತೆ ಬೆಳಿಗ್ಗೆಯಿಂದಲೇ ಅಂಗಡಿಗಳು, ವ್ಯಾಪಾರಿ ಪ್ರದೇಶದಲ್ಲಿ ವ್ಯಾಪಾರ, ವಹಿವಾಟು ಮುಂದುವರಿದಿದ್ದುದು ಕಂಡು ಬಂದಿತು.

ಆಟೋ ರಿಕ್ಷಾ, ಸರಕು ಸಾಗಾಣಿಕೆ ವಾಹನ, ಟ್ರ್ಯಾಕ್ಟರ್‌, ಕೆಎಸ್ಸಾರ್ಟಿಸಿ ಬಸ್ಸು, ಖಾಸಗಿ ಬಸ್ಸು ಸೇರಿದಂತೆ ವಾಹನ ಸಂಚಾರ ಎಂದಿನಂತೆ ಇತ್ತು. ಕೆಲ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿ, ಬಂದ್‌ಗೆ ಸ್ಪಂದಿಸುವಂತೆ ಮನವಿ ಮಾಡುತ್ತಾ ಸಾಗಿದ್ದವು. ಮತ್ತೆ ಕೆಲ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದವು. ಇನ್ನೊಂದಿಷ್ಟು ಆಟೋ ರಿಕ್ಷಾ ಸಂಘಟನೆಗಳು, ಹೊಟೆಲ್ ಮಾಲೀಕರ ಸಂಘಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಆದರೆ, ಆಟೋ ರಿಕ್ಷಾ, ಸಕರು ಸಾಗಾಣಿಕೆ ವಾಹನ, ಬಸ್ಸು ಸಂಚಾರ ಸಹಜವಾಗಿತ್ತು.

ಹಾಲು, ಹಣ್ಣು, ಸೊಪ್ಪು, ತರಕಾರಿ, ಔಷಧಿ ಅಂಗಡಿಗಳು, ಬ್ಯಾಂಕ್, ಖಾಸಗಿ ಸಂಸ್ಥೆ, ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ನಾಲ್ಕನೇ ಶನಿವಾರವಾಗಿದ್ದರಿಂದ ಸರ್ಕಾರಿ ರಜೆ ಇದ್ದುದರಿಂದ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳು ಸಹ ರಜೆ ಇದ್ದೆವು. ಬಂದ್ ಎಂಬ ಕಾರಣಕ್ಕೆ ಗ್ರಾಮೀಣ ಭಾಗಕ್ಕೆ ಕೆಲಸಕ್ಕೆ ಹೋಗಬೇಕಾದವರು, ಖಾಸಗಿ ಸಂಸ್ಥೆಗಳ ನೌಕರರು ಬಸ್ಸು ಸೇವೆ ಇಲ್ಲವೆಂದು ಕೆಲಸಕ್ಕೆ ಕೈಕೊಟ್ಟ ನಿದರ್ಶನಗಳೂ ಇವೆ. ನಾಲ್ಕನೇ ಶನಿವಾರ ಇದ್ದುದರಿಂದ, ಇಂದಿನಿಂದ ಐಪಿಎಲ್ ಪಂದ್ಯಾವಳಿ ಸಹ ಶುರುವಾಗಿದ್ದರಿಂದ, ನಾಳೆ ಭಾನುವಾರ ಎಂಬ ಕಾರಣಕ್ಕೆ ಅನೇಕರು ಮನೆಯಿಂದ ಹೊರಗೆ ಬರಲು ಮನಸ್ಸು ಸಹ ಮಾಡಲಿಲ್ಲ.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ