ಯುದ್ಧ ವಿಮಾನಗಳ ಸದ್ದಿಗೆ ಜನರಲ್ಲಿ ತಲ್ಲಣ!

KannadaprabhaNewsNetwork |  
Published : Mar 26, 2026, 02:00 AM IST
ಹುಬ್ಬಳ್ಳಿಯಲ್ಲಿ ಹಾರಾಟ ನಡೆಸಿದ ತರಬೇತಿ ಯುದ್ಧ ವಿಮಾನಗಳು. | Kannada Prabha

ಸಾರಾಂಶ

ಕೊಲ್ಲಿ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಯಾವ ದೇಶದ ಮೇಲೆ ಯಾರು ದಾಳಿ ನಡೆಸುತ್ತಾರೆ ಎಂಬ ಆತಂಕ ಮನೆ ಮಾಡಿದೆ. ಇದರ ನಡುವೆಯೇ ಹುಬ್ಬಳ್ಳಿಯಲ್ಲಿ ಬುಧವಾರ ತರಬೇತಿ ಯದ್ಧ ವಿಮಾನಗಳ ಹಾರಾಟದಿಂದ ಜನತೆ ಆತಂಕಕ್ಕೆ ಒಳಗಾದರು.

ಹುಬ್ಬಳ್ಳಿ:

ಕೊಲ್ಲಿ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಯಾವ ದೇಶದ ಮೇಲೆ ಯಾರು ದಾಳಿ ನಡೆಸುತ್ತಾರೆ ಎಂಬ ಆತಂಕ ಮನೆ ಮಾಡಿದೆ. ಇದರ ನಡುವೆಯೇ ಹುಬ್ಬಳ್ಳಿಯಲ್ಲಿ ಬುಧವಾರ ತರಬೇತಿ ಯದ್ಧ ವಿಮಾನಗಳ ಹಾರಾಟದಿಂದ ಜನತೆ ಆತಂಕಕ್ಕೆ ಒಳಗಾದರು.

ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಗೋವಾ ಸೇರಿದಂತೆ ವಿವಿಧೆಡೆಯಿಂದ ಯುದ್ಧ ವಿಮಾನಗಳು ಇಲ್ಲಿಗೆ ಆಗಮಿಸಿ ಸಿಬ್ಬಂದಿಗೆ ತರಬೇತಿ ನೀಡುತ್ತವೆ. ಅದೇ ರೀತಿ ಬೆಳಗ್ಗೆ 10ರಿಂದ 11ರ ಸುಮಾರಿಗೆ ಹೆಚ್ಚಿನ ಶಬ್ದ ಹೊರಹೊಮ್ಮಿಸುವ ಯುದ್ಧ ವಿಮಾನಗಳ ಹಾರಾಟ ನಡೆದಿದೆ. ಈ ಸದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ನಿತ್ಯ ವಿಮಾನ‌ ನಿಲ್ದಾಣಗಳ ಅಕ್ಕ-ಪಕ್ಕದ ಪ್ರದೇಶಗಳ ಜನರಿಗೆ ವಿಮಾನ ಹಾರಾಟ ನೋಡುವುದು ಸಾಮಾನ್ಯ. ಆದರೆ, ಇಂದು ಏಕಾಏಕಿ ಯುದ್ಧ ವಿಮಾನಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸುವ ಮೂಲಕ ಜನರಲ್ಲಿ ಗೊಂದಲದ ವಾತಾವರಣವನ್ನೂ ಸೃಷ್ಟಿಸಿದ್ದವು.

3 ವಿಮಾನ ಹಾರಾಟ:

ಮೂರು ಯುದ್ಧ ವಿಮಾನಗಳು ಗೋಪನಕೊಪ್ಪ, ಕೇಶ್ವಾಪುರ, ನೆಹರುನಗರ, ಸುಳ್ಳ ರಸ್ತೆ, ಉಣಕಲ್ ಸೇರಿದಂತೆ ನಗರಾದ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿದವು.

ಪ್ರಾಯೋಗಿಕ ಹಾರಾಟ:

ಈ ಕುರಿತಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ ಮಾಹಿತಿ ‌ನೀಡಿ, ಗೋವಾ ಎಟಿಸಿಯಿಂದ ಹುಬ್ಬಳ್ಳಿಗೆ ಪ್ರಾಯೋಗಿಕ ಮೂರು ಯುದ್ಧ ವಿಮಾನಗಳು ತರಬೇತಿಗಾಗಿ ಹಾರಾಟ ನಡೆಸಿವೆ. ಮಧ್ಯಪ್ರಾಚ್ಯಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೂ ಹಾಗೂ ಈ ವಿಮಾನಗಳ ಹಾರಾಟಕ್ಕೂ ಸಂಬಂಧವಿಲ್ಲ. ಇದು ಪ್ರತಿ ತಿಂಗಳು‌‌ ಹಾಗೂ ಎರಡು ತಿಂಗಳಿಗೊಮ್ಮೆ ಪ್ರಾಯೋಗಿಕವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ: ಡಾ.ಸಿ.ಸೋಮಶೇಖರ್
ಮದ್ದೂರು ನಗರಸಭೆ: 1.15 ಕೋಟಿ ರು. ಉಳಿತಾಯ ಬಜೆಟ್ ಮಂಡನೆ