ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಗುರುವಾರ ರೈತ ಸ್ವಾಭಿಮಾನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದನದ ಒಳಗೆ ಯಾರ್ಯಾರು ಸ್ಟಿಂಗ್ ಬಗ್ಗೆ ಮಾತನಾಡಿದ್ದಾರೆ, ಸ್ವಪಕ್ಷದ ಹಿರಿಯ ಸಚಿವರೇ, ಬಹಳಷ್ಟು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿರುವ ಹಿರಿಯರು ಆತಂಕ ವ್ಯಕ್ತಪಡಿಸಿರುವುದು ದಾಖಲೆ ಸಮೇತ ಸದನದ ಒಳಗೆ ಇದೆ. ಇದನ್ನು ನಾನು ಹೇಳುವುದಕ್ಕಿಂತ ಜನರಿಗೇ ಬಿಟ್ಟು ಬಿಡೋಣ. ಸ್ಟಿಂಗ್ ಮಾಡ್ತಾರೆ, ಸಚಿವರು ಹುಷಾರಾಗಿರಿ ಎಂದು ಸ್ವತಃ ಸರ್ಕಾರದಲ್ಲಿರುವವರೇ ಹೇಳುತ್ತಾರೆ ಅಂದರೆ, ಸರ್ಕಾರದ ಒಳಗಡೆ ಏನೋ ನಡೆಯುತ್ತಿದೆ ಎಂದರ್ಥ. ಜನಕ್ಕೆ ಅನುಕೂಲ ಮಾಡುವುದನ್ನು ಬಿಟ್ಟು, ತಮಗೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಅಂಗಳದಲ್ಲೇ ಗುಪ್ತಚರ ಇಲಾಖೆ ಇದೆ. ಸರ್ಕಾರ ಅವರದ್ದು, ಗುಪ್ತಚರ ಇಲಾಖೆ ಯಾರ ಹತ್ತಿರ ಇದೆ ಎಂಬುದನ್ನು ಅವರೇ ಹೇಳಬೇಕು, ನಾವು ಹೇಳಲು ಆಗುತ್ತಾ? " ಎಂದು ಪ್ರಶ್ನಿಸಿದರು.
₹೨೫೦೦ ಪರಿಹಾರದಿಂದ ರೈತರ ಕಣ್ಣೀರು ಒರೆಸಲು ಸಾಧ್ಯನಾ:ರಾಜ್ಯ ಸರ್ಕಾರ ರೈತರಿಗೆ ೨೫೦೦ ರು. ಪರಿಹಾರ ಕೊಡ್ತೀನಿ ಅಂತ ಹೇಳಿ ತಿಂಗಳುಗಳೇ ಕಳೆದಿವೆ. ಇಲ್ಲಿಯವರೆಗೂ ಸರ್ಕಾರಿ ಆದೇಶವೇ ಆಗಿಲ್ಲ. ಈ ೨೫೦೦ ರು. ಯಾವಾಗ ಬರುತ್ತೆ? ಯಾವ ಕಾಲಕ್ಕೆ ಬರುತ್ತೆ? ಕೇವಲ ೨೫೦೦ ರೂಪಾಯಿಯಿಂದ ರೈತರ ಕಣ್ಣೀರನ್ನು ಒರೆಸಲು ಸಾಧ್ಯನಾ? ಇದನ್ನು ಸರ್ಕಾರ ಆಲೋಚನೆ ಮಾಡಬೇಕು. ಕೇವಲ ಘೋಷಣೆಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಆಗಲ್ಲ. ಪರಿಹಾರ ಘೋ?ಣೆ ಮಾಡಿದ ಮಾತ್ರಕ್ಕೆ ರೈತರ ಸಂಕ? ಪರಿಹಾರ ಆಗಲ್ಲ ಎಂದು ಕಿಡಿಕಾರಿದರು.ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಎಂದು ಹೇಳಿ ಸರ್ಕಾರ ನುಣುಚಿಕೊಳ್ಳುವುದು ಬೇಡ. ಪ್ರತಿ ವರ್ಷವೂ ಎನ್‌ಡಿಆರ್‌ಎಫ್ ಕಡೆಯಿಂದ ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ ೩೭೦೦ ಕೋಟಿ ರಾಜ್ಯದ ಜನರಿಗೆ ಬರಲೇಬೇಕು, ಬರುತ್ತೆ. ಯುಪಿಎ ಮತ್ತು ಎನ್‌ಡಿಎ ಅವಧಿಯನ್ನು ಲೆಕ್ಕ ಮಾಡಿದರೆ, ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ನಮ್ಮ ನಾಡಿಗೆ ೫% ಗಿಂತ ಕಡಿಮೆ ಹಣ ಬಂದಿದೆ. ಎನ್‌ಡಿಎ ಬಂದ ನಂತರ ಅದು ೧೬% ರೀಚ್ ಆಗಿದೆ. ಹಾಗಾಗಿ ಸುಮ್ಮನೆ ಕೇಂದ್ರದ ಕಡೆ ಬೆಟ್ಟು ತೋರಿಸುವುದು ಬೇಡ. ತಮ್ಮ ಲೋಪವನ್ನು ಮುಚ್ಚಿಟ್ಟುಕೊಂಡು, ಎನ್‌ಡಿಆರ್‌ಎಫ್ ಹಣ ಬಂದ ಮೇಲೆ ಕೊಡ್ತೀವಿ ಅನ್ನೋದು ಸರಿಯಲ್ಲ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ತಂಡ ಬರ ಅಧ್ಯಯನ ಮಾಡುತ್ತಿದೆ. ಅದನ್ನು ನೆಪ ಮಾಡಿಕೊಂಡು ನುಣುಚಿಕೊಳ್ಳದೆ, ಮೊದಲು ರೈತರನ್ನು ಕಾಪಾಡುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.ಮುಂದಿನ ಮಾರ್ಚ್ ಅಂತ್ಯದೊಳಗೆ ಮೇಕೆದಾಟು ಯೋಜನೆ ಆರಂಭಿಸುತ್ತೇವೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಇಂಡಿ ಮೈತ್ರಿಕೂಟದಲ್ಲಿ ಡಿಎಂಕೆ ಜೊತೆ ತಮಿಳುನಾಡಿನಲ್ಲಿ ಇವರು ಅಲೈಯನ್ಸ್ ಪಾರ್ಟ್ನರ್ ಆಗಿದ್ದಾರೆ. ಈಗ ಹೊಸದಾಗಿ ನಟ ವಿಜಯ್ ಜೊತೆ ಹೋಗಿ ಐದಾರು ಸೀಟ್ ತಗೊಂಡು ಅಲ್ಲೂ ಪಾರ್ಟ್ನರ್ ಆಗಿದ್ದಾರೆ. ಹಾಗಾದರೆ ಮೇಕೆದಾಟು ಯೋಜನೆಯನ್ನು ತಡೆದಿರುವವರು ಯಾರು? ಮೇಕೆದಾಟು ಯೋಜನೆ ಆದರೆ ಈ ಭಾಗದ ರೈತರಿಗೆ ಅನುಕೂಲ ಆಗುತ್ತೆ ಅಂದಾಗ ಧಾರಾಳವಾಗಿ ಮಾಡಲಿ. ಅದಕ್ಕೆ ಬೇಕಾದ ಎನ್‌ಓಸಿ ಕೊಡಿಸಲಿ, ಹಿಡಿದುಕೊಂಡಿರುವವರು ಯಾರು? ಎಂದು ಸವಾಲು ಹಾಕಿದರು. ಈಗ ನಾವು ರೈತ ಸ್ವಾಭಿಮಾನ ಯಾತ್ರೆಯನ್ನು ಮುಂದಿಟ್ಟುಕೊಂಡು ರೈತರ ಬಳಿ ಹೋಗುತ್ತಿದ್ದೇವೆ. ಜಿ.ಪಂ, ತಾ.ಪಂ ಚುನಾವಣೆ ಬಗ್ಗೆ ನಮಗೂ ರಿಪೋರ್ಟ್ ಬಂದಿದೆ, ಗೆಜೆಟ್ ನೋಟಿಫಿಕೇಷನ್ ಇವತ್ತೇ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮುಂದಿನ ಯಾವುದೇ ಚುನಾವಣೆ ಇರಬಹುದು, ನಾವು ಎನ್‌ಡಿಎ ಜೊತೆಗೂಡಿ ಫೈಟ್ ಮಾಡ್ತೀವಿ. ಎನ್‌ಡಿಎ ಒಟ್ಟಾಗಿ, ಒಗ್ಗಟ್ಟಾಗಿ ಇರುತ್ತೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ದುಡಿಯುತ್ತಾರೆ. ನಾವು ಯಾವತ್ತಿನಿಂದಲೂ ಚುನಾವಣೆಗೆ ರೆಡಿ ಇದ್ದೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.