ಎಲ್ಲ ಧರ್ಮದವರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು: ರಾಜಣ್ಣ ಕರೆ

KannadaprabhaNewsNetwork |  
Published : Feb 21, 2024, 02:00 AM IST
ತಾಲೂಕಿನ ಹೊಸಕೆರೆಯಲ್ಲಿ  ಶ್ರೀಮಹೇಶ್ವರಿ ಅಮ್ಮನವರ ದೇಗುಲ ಟ್ರಸ್ಟ್‌ನಿಂದ ಆಯೋಜಿಸಿದ್ದ ಶ್ರೀಮಹೇಶ್ವರಿ ಅಮ್ಮನವರ ನೂತನ ದೇವಸ್ಥಾನ ಪ್ರಾರಂಭತ್ಸೋವ ಮತ್ತು ಶಿಲಾಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭಾಗವಹಿಸಿ ದೇವರ ಕೃಫೆಗೆ ಪಾತ್ರರಾದರು.  | Kannada Prabha

ಸಾರಾಂಶ

ಸಮಾಜದ ಎಲ್ಲ ಧರ್ಮದ ಜಾತಿ, ಧರ್ಮ ಪಂಥದವರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಗೌರವಿಸಬೇಕು. ಪರಪಂರೆಯನ್ನು ಮೈಗೂಡಿಸಿಕೊಂಡು ತಾರತಮ್ಯವಿಲ್ಲದ ಹೊಸ ಸಮಾಜ ರೂಪಿಸಬೇಕು. ಒಗ್ಗಟ್ಟಿನಲ್ಲಿ ಪ್ರಗತಿಯ ಬಲವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆಯಿತ್ತರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಸಮಾಜದ ಎಲ್ಲ ಧರ್ಮದ ಜಾತಿ, ಧರ್ಮ ಪಂಥದವರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಗೌರವಿಸಬೇಕು. ಪರಪಂರೆಯನ್ನು ಮೈಗೂಡಿಸಿಕೊಂಡು ತಾರತಮ್ಯವಿಲ್ಲದ ಹೊಸ ಸಮಾಜ ರೂಪಿಸಬೇಕು. ಒಗ್ಗಟ್ಟಿನಲ್ಲಿ ಪ್ರಗತಿಯ ಬಲವಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕರೆಯಿತ್ತರು.

ತಾಲೂಕಿನ ಮಿಡಿಗೇಶಿ ಹೋಬಳಿ ಹೊಸಕೆರೆಯಲ್ಲಿ ಶ್ರೀಮಹೇಶ್ವರಿ ಅಮ್ಮನವರ ದೇವಸ್ಥಾನ ಟ್ರಸ್ಟ್‌ ವತಿಯಿಂದ ಶ್ರೀಮಹೇಶ್ವರಿ ಅಮ್ಮನವರ ನೂತನ ದೇಗುಲ ಪ್ರಾರಂಭೋತ್ಸವ ಮತ್ತು ಶಿಲಾಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲರೂ ಸಮರ್ಥರು, ಸಾಧನೆಯ ಹಾದಿಯಲ್ಲಿ ಸಾಗಬೇಕು. ಕೆಲವರು ಧರ್ಮದ ಹೆಸರಲ್ಲಿ ರಾಜಕೀಯ ಸಲ್ಲದು, ಯಾವ ಧರ್ಮವೂ ಯಾವುದೇ ರಾಜಕಾರಣಿಗಳ ಸ್ವತ್ತಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾತ್ಮಕವಾಗಿ ಎಲ್ಲ ಜನರಿಗೂ ಹಕ್ಕು ಮತ್ತು ಕರ್ತವ್ಯಗಳಿವೆ. ಆದರೆ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ, ಒಂದೇ ಸಮುದಾಯ್ಕಕೆ ಧರ್ಮವನ್ನು ಸೀಮಿತಗೊಳಿಸುವುದು ಬೇಡ, ರಾಷ್ಟ್ರಕವಿ ಕುವೆಂಪುರವರು ಮನುಜ ಮತ ವಿಶ್ಪಪಥ ಎಂದು ವಿಶ್ವ ಕುಟುಂಬದ ಪರಿಕಲ್ಪನೆ ನೀಡುವ ಯಾವುದೇ ಸಮುದಾಯಗಳ ಪರವಾಗಿ ಇರಲಿಲ್ಲ. ಎಲ್ಲ ಧರ್ಮಗಳನ್ನು ಸರಿ ಸಮಾನಾಗಿ ಕಂಡು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಣ್ಮಿಸುವ ಮೂಲಕ ಜನರ ಒಳಿತಿಗೆ ಶ್ರಮಿಸಿದ್ದರು.

ಇದಕ್ಕೂ ಮೊದಲು ಅವರಗಲ್ಲು ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನ, ಹೊಸಕೆರೆ ಗ್ರಾಪಂ ಆವರಣದಲ್ಲಿ ಭಾರತ್‌ ನಿರ್ಮಾಣ ಸೇವಾ ಕೇಂದ್ರದ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು.

ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಶಿಧರ್‌, ಉಪವಿಭಾಗಾಧಿಕಾರಿ ಶಿವಪ್ಪ, ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ತಾಪಂ ಇಒ ಲಕ್ಷ್ಮಣ್‌, ಜಿ.ಜೆ. ರಾಜಣ್ಣ, ಎಂ.ಎಸ್‌. ಮಲ್ಲಿಕಾರ್ಜುನಯ್ಯ, ತುಂಗೋಟಿ ರಾಮಣ್ಣ, ಗೋಪಾಲಯ್ಯ, ಅಯೂಬ್‌, ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಚಿರಂಜೀವಿ, ಸದಸ್ಯರಾದ ಉಮಾ, ದಿವ್ಯಾ, ರಂಗಪ್ಪ, ರಂಗನಾಥ್‌, ಹೊಂಬಾಳೇಗೌಡ, ಮಾಜಿ ಅಧ್ಯಕ್ಷ ದೇವರಾಜು, ಎಚ್‌.ವಿ. ಲೋಕೇಶ್‌, ಗೋವಿಂದರಾಜು, ವಕೀಲರಾದ ಎಚ್‌.ವಿ. ಮಂಜುನಾಥ್‌ ಹಾಗೂ ನಾಗರಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!