ಬೆಳಗಾವಿ: ಯರಗಟ್ಟಿ ಪಟ್ಟಣ ಪಂಚಾಯತಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲು ಅಧಿಕಾರಿ, ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಶನಿವಾರ ಪಪಂ ಮುಂಭಾಗದಲ್ಲಿ ರೆಡ್ಡಿ ಸಮುದಾಯದ ಜನ ಅಹೋರಾತ್ರಿ ಧರಣಿ ನಡೆಸಿದರು.
ಸರ್ಕಾರದ ಆದೇಶ ಉಲ್ಲಂಘಿಸಿದು ಅಲ್ಲದೆ, ರೆಡ್ಡಿ ಸಮುದಾಯಕ್ಕೆ ಅವಮಾನಿಸಿರುವ ಪಟ್ಟಣ ಪಂಚಾಯತಿ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಅಲ್ಲದೆ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಕರೆದಿಲ್ಲ. ಜಯಂತಿ ಆಚರಿಸುವ ಬಗ್ಗೆ ನಿಕಾರಣೆ ಮಾಡಿದ್ದಾರೆ. ಒಂದು ಸಮುದಾಯ ಗುರಿಯಾಗಿಸಿಕೊಂಡು ಪಪಂ ಅಧಿಕಾರಿಗಳು ನಡೆ ತೀವ್ರ ಖಂಡನೀಯ ಎಂದು ಸಮುದಾಯ ಮುಖಂಡರು ಆಗ್ರಹಿಸಿದ್ದಾರೆ. ಪಪಂ ನಾಮ ನಿರ್ದೇಶನ ಸದಸ್ಯ ನಿಖಿಲ ಪಾಟೀಲ, ವೆಂಕಟೇಶ ದೇವರಡ್ಡಿ, ವಿಶಾಲಗೌಡ ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಗೀರಿಶ ಪಾಟೀಲ, ಗೋವಿಂದ ದೇವರಡ್ಡಿ, ನಾರಾಯಣ ಪಾಟೀಲ, ಸದಾನಂದ ಪಾಟೀಲ, ರಮೇಶ್ ಪಾಟೀಲ, ಕಿಟ್ಟು ತೊರಗಲ್, ಸಂತೋಷ ದೇವರಡ್ಡಿ, ಗಿರೀಶ ದೇವರಡ್ಡಿ ಇತರರಿದ್ದರು.