ಬಿಸಿಲಿನ ಆರ್ಭಟಕ್ಕೆ ತತ್ತರಿಸಿದ ಜನರು

KannadaprabhaNewsNetwork |  
Published : Apr 19, 2026, 03:15 AM IST
ಕಕಕಕಕ | Kannada Prabha

ಸಾರಾಂಶ

ಬಿಸಿಲು ಎಲ್ಲರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನ ಆರ್ಭಟ ಈಗ 40 ಡಿಗ್ರಿ ಸೆಲ್ಸಿಯಸ್‌ಗೆ ಬಂದು ನಿಂತಿದೆ. ಹೊರಗಡೆ ಕಾಲಿಟ್ಟರೆ ಉಷ್ಣಮಯ ವಾತಾವರಣ. ಹೀಗಾಗಿ ಮಕ್ಕಳು, ವೃದ್ಧರು, ವಯಸ್ಸಿನವರು ಕೂಡ ಹೊರಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ವಾತಾವರಣ ಇರುವುದರಿಂದ ಸಹಜವಾಗಿ ವ್ಯಾಪಾರ, ವಹಿವಾಟಿನ ಮೇಲೆಯೂ ಅಷ್ಟೇ ಪರಿಣಾಮ ಬೀರಿದೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಬಿಸಿಲು ಎಲ್ಲರನ್ನು ಹೈರಾಣಾಗಿಸಿದೆ. ಸುಡು ಬಿಸಿಲಿನ ಆರ್ಭಟ ಈಗ 40 ಡಿಗ್ರಿ ಸೆಲ್ಸಿಯಸ್‌ಗೆ ಬಂದು ನಿಂತಿದೆ. ಹೊರಗಡೆ ಕಾಲಿಟ್ಟರೆ ಉಷ್ಣಮಯ ವಾತಾವರಣ. ಹೀಗಾಗಿ ಮಕ್ಕಳು, ವೃದ್ಧರು, ವಯಸ್ಸಿನವರು ಕೂಡ ಹೊರಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ವಾತಾವರಣ ಇರುವುದರಿಂದ ಸಹಜವಾಗಿ ವ್ಯಾಪಾರ, ವಹಿವಾಟಿನ ಮೇಲೆಯೂ ಅಷ್ಟೇ ಪರಿಣಾಮ ಬೀರಿದೆ.

ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನರು ಕೂಡ ಹೆಚ್ಚಾಗಿ ಹೊರ ಬರಲು ಯೋಚಿಸುವಂತಾಗಿದೆ. ಕೇವಲ ಮುದ್ದೇಬಿಹಾಳ ಪಟ್ಟಣ ಮಾತ್ರವಲ್ಲ, ತಾಲೂಕಿನ ಬಹುತೇಕ ಗ್ರಾಮಗಳು ಮತ್ತು ಹೋಬಳಿಗಳಲ್ಲಿಯೂ ಇಷ್ಟೇ ಪ್ರಖರತೆಯ ವಾತಾವರಣ ನಿರ್ಮಾಣಗೊಂಡಿದೆ. ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಪಪೂ ಕಾಲೇಜುಗಳಿಗೆ ರಜೆ ಇರುವುದರಿಂದ ಸಹಜವಾಗಿ ಮಕ್ಕಳಿಗೆ ಬೇಸಿಗೆ ಝಳ ತಟ್ಟಿಲ್ಲ. ಆದರೆ, ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಿಸಿಲಿನ ಝಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.ಬಸ್ಸಿನಲ್ಲಿ ಪ್ರಯಾಣವೇ ದುಸ್ತರ:

ವಿಜಯಪುರ, ತಾಳಿಕೋಟೆ, ಇತ್ತ ಬಾಗಲಕೋಟೆ, ಕಲಬುರ್ಗಿ, ಬೀದರ್‌, ಯಾದಗಿರಿ, ಬೆಳಗಾವಿ ಸೇರಿದಂತೆ ಬಹುತೇಕ ಭಾಗಗಳಿಂದ ಮುದ್ದೇಬಿಹಾಳಕ್ಕೆ ಪ್ರಯಾಣಿಸುವವರು ಸಂಖ್ಯೆ ಸಾಕಷ್ಟು ಜನರಿದ್ದಾರೆ. ಮಾತ್ರವಲ್ಲ, ಸುತ್ತಮುತ್ತಲ ಗ್ರಾಮಗಳ ಜನರು, ರೈತರು ತಮ್ಮ ವ್ಯಾಪಾರ ವಹಿವಾಟು, ಮಾರಾಟಕ್ಕೆ ಮುದ್ದೇಬಿಹಾಳದ ಪಟ್ಟಣವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಹೀಗಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಜನರಿಗೆ ಬಿಸಿಲ ಧಗೆ ಸಾಕಷ್ಟು ತೊಂದರೆ ಮಾಡಿಕೊಟ್ಟಿದೆ. ಬಸ್ಸಿನಲ್ಲಿ ಪ್ರಯಾಣ ಬೆಳೆಸುವವರಂತೂ ಹೈರಾಣಾಗಿ ಹೋಗಿದ್ದಾರೆ. ಬೇಸಿಗೆಯಲ್ಲಿ ಬಸ್ಸಿನಲ್ಲಿ ಪ್ರಯಾಣವೇ ದುಸ್ತರ ಎಂಬಂತೆ ಅವರಿಗೆ ಭಾಸವಾಗುತ್ತಿದೆ. ಹೀಗಾಗಿ ದೂರದ ಊರಿನಿಂದ ಬರುವುದು ಲೇಸು. ಆದರೆ, ಸುಡು ಬಿಸಿಲಿನಲ್ಲಿ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುವುದು ತೀವ್ರ ಕಷ್ಟಕರ ಎನ್ನುತ್ತಾರೆ ಪ್ರಯಾಣಿಕರು. ತಂಪು ಪಾನೀಯಗಳಿಗೆ ಮೊರೆ:

ಸಹಜವಾಗಿ ಬೇಸಿಗೆ ಬಂತೆಂದರೆ ದೇಹವನ್ನು ತಂಪಾಗಿಸಲು ತಂಪು ಪಾನೀಯಗಳಿಗೆ ಜನರು ಮೊರೆ ಹೋಗುವುದು ಸಹಜ. ಆದರೆ, ತಂಪು ಪಾನೀಯಗಳನ್ನು ಎಲ್ಲವನ್ನು ಬಳಸುವುದು ಕೂಡ ಆರೋಗ್ಯಕರವಲ್ಲ ಎಂಬುದು ವೈದ್ಯರ ಸಲಹೆ. ಸಾಮಾನ್ಯವಾಗಿ ಇಂತಹ ವಾತಾವರಣದಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದರಿಂದ ಸಹಜವಾಗಿ ದೇಹಕ್ಕೆ ಹೆಚ್ಚು ತಂಪು ಬೇಕಾಗುತ್ತದೆ ಎನಿಸುತ್ತದೆ. ಆದ್ದರಿಂದ ಜನರು ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ.ಕಾಯಿಲೆಗಳ ಬಗ್ಗೆ ಇರಲಿ ಎಚ್ಚರ:

ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುವುದರಿಂದ ಮತ್ತು ನೀರಿನ ಕೊರತೆಯಿಂದ ಕೆಲವು ಕಾಯಿಲೆಗಳು ಸಾಮಾನ್ಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅದರಿಂದಲೂ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಆಹಾರ ಸೇವಿಸುವ ಬದಲು ಅಲ್ಪ ಪ್ರಮಾಣದ ಆಹಾರ ಸೇವನೆ ಕೂಡ ಉತ್ತಮ. ಏಕೆಂದರೆ ಬಿಸಿಲಿನ ಹೊಡೆತಕ್ಕೆ ನಿರ್ಜಲೀಕರಣ ಸಹಜವಾಗಿ ಬರುತ್ತದೆ. ನಿರ್ಜಲೀಕರಣ ಉಂಟಾದರೆ, ತಲೆಸುತ್ತು, ಸುಸ್ತು, ಬಾಯಾರಿಕೆ, ಮೂರ್ಛೆ, ಹೆಚ್ಚು ಜ್ವರ ಕಾಣಿಸುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಬಿಸಿಲಿನಲ್ಲಿ ಹೆಚ್ಚು ಹೊತ್ತು ಇರುವುದು ಕೂಡ ಇದಕ್ಕೆ ಕಾರಣವಾಗುತ್ತದೆ. ಹೀಗಾಗಿ ಬಿಸಿಲಿನಿಂದ ಹೆಚ್ಚು ರಕ್ಷಣೆ ಪಡೆಯುವುದು ಒಳಿತು. ಇದರ ಜತೆಗೆ ಡೆಂಘೀ, ಬೆವರು ಸಾಲೆ, ಫಂಗಲ್ ಇನ್ಫೆಕ್ಷನ್ (ಬೆವರಿನಿಂದ ಕಂಕುಳು, ತೊಡೆಸಂದು ಭಾಗದಲ್ಲಿ ತುರಿಕೆ) ಆಗುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಬೇಸಿಗೆ ಹೋಗುವವರಿಗೆ ಎಚ್ಚರದಿಂದ ಇರುವುದು ಸೂಕ್ತ.ಬೇಸಿಗೆ ವೇಳೆ ಏನು ಮಾಡಬೇಕು?

- ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ, ಎಳನೀರು, ಮಜ್ಜಿಗೆ ಹೆಚ್ಚಾಗಿ ಸೇವಿಸಿ

- ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಟೋಪಿ, ಕೊಡೆ, ಕಾಟನ್ ಬಟ್ಟೆ ಬಳಸಿ

- ಹೊರಗಿನ ತಂಪು ಪಾನೀಯ, ಕಟ್ ಹಣ್ಣು, ಬೀದಿ ಬದಿ ಆಹಾರವನ್ನು ತ್ಯಜಿಸಿ.

- ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ಸೊಳ್ಳೆ ಉದ್ಭವವಾಗದಂತೆ ನೋಡಿಕೊಳ್ಳಿ.

- ದಿನಕ್ಕೆ 2 ಬಾರಿ ಸ್ನಾನ ಮಾಡಿ, ಸ್ವಚ್ಛವಾಗಿರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಕ್ಕೇರಿ ಚಂದ್ರಶೇಖರ ಶ್ರೀಗೆ ಜೀವಮಾನ ಸಾಧನೆ ಪ್ರಶಸ್ತಿ
ಹಲ್ಮಿಡಿ ಶಾಸನದ ಪ್ರತಿಕೃತಿ ಮರುಸ್ಥಾಪನೆ ಮುಖಂಡರ ಸಲಹೆ