ಎಚ್‌ಐವಿ ಸೋಂಕಿನ ಬಗ್ಗೆ ಜನರು ಜಾಗೃತರಾಗಬೇಕು: ನ್ಯಾ.ಆರ್.ಮಹೇಶ್

KannadaprabhaNewsNetwork |  
Published : Dec 03, 2024, 12:34 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ಏಡ್ಸ್ ಸೋಂಕಿ ಅಸುರಕ್ಷತೆ ಲೈಂಗಿಕ ಕ್ರಿಯೆ, ಬಳಕೆ ಮಾಡಿದ ವೈದ್ಯಕೀಯ ಸರಕುಗಳನ್ನು ಬಳಕೆ ಮಾಡುವುದರಿಂದ, ಸೋಂಕಿತ ವ್ಯಕ್ತಿ ರಕ್ತದಾನ ಮಾಡುವುದರಿಂದ ಹರಡುತ್ತದೆ. ಸೋಂಕಿ ವೈರಸ್ ದೇಹದ ಒಳಗೆ ಇರುವುದರಿಂದ ಈ ವೈರಸ್ ಗಾಳಿಯಿಂದ ಹರಡುವುದಲ್ಲ. ಸಾರ್ವಜನಿಕರು ಸೋಂಕಿತ ವ್ಯಕ್ತಿಗಳಿಗೆ ಧೈರ್ಯ ತುಂಬುವುದರ ಜತೆಗೆ ಸಹಾನೂಬೂತಿ ತೋರಬೇಕಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಚ್‌ಐವಿ ಸೋಂಕು ಮಾರಕ ಕಾಯಿಲೆ. ಸಾರ್ವಜನಿಕರು ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತರಾಗಬೇಕು ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಏಡ್ಸ್ ರೋಗವು ಒಂದು ವೈರಸ್‌ನಿಂದ ಹರಡು ಕಾಯಿಲೆ. ಸಾಕಷ್ಟು ಮಂದಿ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1988 ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ ಎಂದು ಘೋಷಿಸಿ ಅಲ್ಲಿಂದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಏಡ್ಸ್ ಸೋಂಕಿ ಅಸುರಕ್ಷತೆ ಲೈಂಗಿಕ ಕ್ರಿಯೆ, ಬಳಕೆ ಮಾಡಿದ ವೈದ್ಯಕೀಯ ಸರಕುಗಳನ್ನು ಬಳಕೆ ಮಾಡುವುದರಿಂದ, ಸೋಂಕಿತ ವ್ಯಕ್ತಿ ರಕ್ತದಾನ ಮಾಡುವುದರಿಂದ ಹರಡುತ್ತದೆ. ಸೋಂಕಿ ವೈರಸ್ ದೇಹದ ಒಳಗೆ ಇರುವುದರಿಂದ ಈ ವೈರಸ್ ಗಾಳಿಯಿಂದ ಹರಡುವುದಲ್ಲ ಎಂದರು.

ಸಾರ್ವಜನಿಕರು ಸೋಂಕಿತ ವ್ಯಕ್ತಿಗಳಿಗೆ ಧೈರ್ಯ ತುಂಬುವುದರ ಜತೆಗೆ ಸಹಾನೂಬೂತಿ ತೋರಬೇಕಾಗಿದೆ. ಇಂತಹ ಜಾಗೃತಿ ಕಾರ್‍ಯಕ್ರಮಗಳ ಮೂಲಕ ಸೋಂಕು ಹರಡದಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಸಿವಿಲ್ ನ್ಯಾಯಾಧೀಶೆ ಬಿ. ಪಾರ್ವತಮ್ಮ ಮಾತನಾಡಿ, ಏಡ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಕಾರ್‍ಯಕ್ರಮ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೆ ಸೋಂಕು ಕಡಿಮೆಯಾಗಬೇಕು, ಆದರೆ, ಸೋಂಕು ಹೆಚ್ಚುತ್ತಿರುವುದು ವಿಷಾಧಕರ ಸಂಗತಿ, ಇನ್ನಾದರು ಸಾರ್ವಜನಿಕರು ಜಾಗೃತರಾಗಬೇಕು ಎಂದರು.

ಟಿಎಚ್‌ಒ ಡಾ.ಸಿ.ಎ.ಅರವಿಂದ್ ಮಾತನಾಡಿ, ಆರೋಗ್ಯ ಇಲಾಖೆಯೂ ಏಡ್ಸ್ ಕಾಯಿಲೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಶಾಲಾ-ಕಾಲೇಜು, ಗ್ರಾಪಂಗಳಲ್ಲಿ ಕರಪತ್ರಗಳ ಹಂಚಿಕೆ, ಜಾಗೃತಿ ಕಾರ್‍ಯಕಮ ನಡೆಸುತ್ತಿದ್ದೇವೆ. ಸೋಂಕಿತರು ಕಾಯಿಲೆ ಬಗ್ಗೆ ಗುಪ್ತ ಸಮಾಲೋಚನೆ ನಡೆಸಲು ಆಸ್ಪತ್ರೆಯ ಆಪ್ತ ಸಹಾಯಕರನ್ನು ನಿಯೋಜಿಸಲಾಗಿದೆ ಎಂದರು.

ಕಾರ್‍ಯಕ್ರಮದ ಬಳಿಕ ನ್ಯಾಯಾಲಯದ ಆವರಣದಿಂದ ಆಸ್ಪತ್ರೆಯವರೆಗೆ ಏಡ್ಸ್ ಜಾಗೃತಿ ಜಾಥಾ ನಡೆಸಿದರು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ಕಾಳೇಗೌಡ, ನ್ಯಾಯಾಧೀಶರಾದ ಬಾಬು, ಕಿಶೋರ್‌ಕುಮಾರ್, ಪದ್ಮ, ವಕೀಲರ ಸಂಘದ ಕಾರ್‍ಯದರ್ಶಿ ಕೆ.ಎನ್. ನಾಗರಾಜು, ಸಬ್ ಇನ್ಸ್‌ಪೆಕ್ಟರ್ ಉಮೇಶ್, ಹೆಲ್ತ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಸೇರಿ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ