ಗ್ಯಾರಂಟಿ ಯೋಜನೆಗೆ ಜನತೆ ಮೋಸ ಹೋಗಬೇಡಿ: ಮಾಜಿ ಸಚಿವ ಕಾರಜೋಳ

KannadaprabhaNewsNetwork | Published : May 1, 2024 2:05 AM

ಸಾರಾಂಶ

ಕಾಂಗ್ರೆಸ್ ಕೊಡುವ ಗ್ಯಾರಂಟಿ ಯೋಜನೆಗೆ ಜನರು ಮೋಸ ಹೋಗಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರಕಾಂಗ್ರೆಸ್ ಕೊಡುವ ಗ್ಯಾರಂಟಿ ಯೋಜನೆಗೆ ಜನರು ಮೋಸ ಹೋಗಬೇಡಿ. ದೇಶಕ್ಕೆ ಭದ್ರ ಬುನಾದಿ ನೀಡಿ ಭವಿಷ್ಯ ನಿರ್ಮಿಸುವುದೇ ಪ್ರಧಾನಿ ಮೋದಿ ಗ್ಯಾರಂಟಿಯಾಗಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ಮತ ನೀಡಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಮೋದಿಯವರ ಕೈ ಬಲಪಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದ ದೇಸಾಯಿವಾಡೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮತಯಾಚನೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹತ್ತು ವರ್ಷದ ಆಡಳಿತದಲ್ಲಿ ಭಯೋತ್ಪಾದನೆಗೆ ಕಡಿವಾಣ ಹಾಕಿದ್ದಾರೆ. ಕಾಂಗ್ರೆಸ್‌ನವರು ದಲಿತರಿಗೆ, ಮುಸ್ಲಿಮರಿಗೆ ಉದ್ಯೋಗ ನೀಡದೆ ಕೇವಲ ವೋಟ್‌ ಬ್ಯಾಂಕ್‌ ಮಾಡಿಕೊಂಡು ದೇಶವನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಶುದ್ಧ ಸುಳ್ಳು ಭರವಸೆ ನೀಡಿದೆ. ಇದರ ಬಗ್ಗೆ ಜನರು ಜಾಗೃತಿಯಿಂದ ಇರಬೇಕು ಎಂದು ಹೇಳಿದರು.

ಮುಧೋಳ ಮತಕ್ಷೇತ್ರ ಮತದಾರರ ಋಣ ಸಾಕಷ್ಟಿದೆ. ಚಿತ್ರದುರ್ಗದ ಜೊತೆಗೆ ಮುಧೋಳ ಕ್ಷೇತ್ರವನ್ನು ಮತ್ತೆ ಬಿಜೆಪಿ ಮಡಿಲಿಗೆ ಬರುವವರೆಗೂ ತಾವು ವಿಶ್ರಮಿಸುವುದಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮಾತನಾಡಿ, ಭಾರತ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಮೋದಿಯವರೇ ಕಾರಣ. ಬಿಜೆಪಿಗೆ ಮತ ಹಾಕುವ ಮೂಲಕ ಪ್ರಗತಿಗೆ ಬೆಂಬಲಿಸಬೇಕು. ರಾಷ್ಟ್ರದ ಪ್ರತಿ ವರ್ಗಕ್ಕೂ ಒಂದಿಲ್ಲೊಂದು ಸೌಲಭ್ಯ ತಲುಪಿಸಿದ್ದು, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಮೋದಿಯವರನ್ನು ಪ್ರಧಾನಿ ಮಾಡಲು ಅಧಿಕ ಮತಗಳಿಂದ ನನ್ನನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗಪ್ಪ ಕಾತರಕಿ, ಕಲ್ಲಪ್ಪಣ್ಣ ಸಬರದ, ಲೋಕಣ್ಣ ಕತ್ತಿ, ನಾಗಪ್ಪ ಅಂಬಿ, ಆರ್.ಟಿ. ಪಾಟೀಲ, ರಾಜು (ನಾರಾಯಣ) ಯಡಹಳ್ಳಿ, ಎಚ್.ಎನ್. ವಜ್ಜರಮಟ್ಟಿ, ಎಂ.ಎಂ. ವಿರಕ್ತಮಠ, ವಿ.ಎಂ. ತೆಗ್ಗಿ, ಬಿ.ಎಲ್. ಬಬಲಾದಿ, ವಿರೇಶ ಪಂಚಕಟ್ಟಿಮಠ, ಶಿವಪ್ಪ ಚೌಧರಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಆನಂದ ಹವಳಖೋಡ, ರಾಜುಗೌಡ ಪಾಟೀಲ, ಪರಮಾನಂದ ಟೊಪಣ್ಣವರ, ಸಿದ್ದರಾಮಪ್ಪ ದೇಸಾಯಿ, ಅರುಣ ಮುಧೋಳ, ವಿನೋದ ಘೋರ್ಪಡೆ, ಜಾಕೀರ ಅತ್ತಾರ, ರಮೇಶ ದೇವರಡ್ಡಿ ಅಪಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Share this article