ವಿಕಲಚೇತನರು ಸರ್ಕಾರ ಯೋಜನೆ ಸದುಪಯೋಗಿಸಿಕೊಳ್ಳಿ: ಶಾಸಕ ಉದಯ್

KannadaprabhaNewsNetwork |  
Published : Dec 04, 2024, 12:30 AM IST
3ಕೆಎಂಎನ್ ಡಿ14 | Kannada Prabha

ಸಾರಾಂಶ

ಮದ್ದೂರು ಕ್ಷೇತ್ರದಲ್ಲಿ ಇಂಧನ ಚಾಲಿತ ತ್ರಿಚಕ್ರ ವಾಹನ ಕೋರಿ ಅನೇಕ ಅರ್ಜಿಗಳು ಬಂದಿವೆ. ಸದ್ಯಕ್ಕೆ 18 ಫಲಾನುಭವಿಗಳನ್ನು ಆಯ್ಕೆ ಮಾಡಿ ತ್ರಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಬೇರೆಬೇರೆ ಮೂಲಗಳಿಂದ ವಾಹನಗಳನ್ನು ವಿತರಿಸಲು ಚಿಂತನೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಕಲಚೇತನರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ 18 ಮಂದಿ ಅರ್ಹ ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿ, ಸರ್ಕಾರ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಇವುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಕಾರ್ಯಾನ್ಮುಖರಾಗಬೇಕು ಎಂದರು.

ಮದ್ದೂರು ಕ್ಷೇತ್ರದಲ್ಲಿ ಇಂಧನ ಚಾಲಿತ ತ್ರಿಚಕ್ರ ವಾಹನ ಕೋರಿ ಅನೇಕ ಅರ್ಜಿಗಳು ಬಂದಿವೆ. ಸದ್ಯಕ್ಕೆ 18 ಫಲಾನುಭವಿಗಳನ್ನು ಆಯ್ಕೆ ಮಾಡಿ ತ್ರಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಬೇರೆಬೇರೆ ಮೂಲಗಳಿಂದ ವಾಹನಗಳನ್ನು ವಿತರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಈ ವೇಳೆ ತಾಪಂ ಇಒ ರಾಮಲಿಂಗಯ್ಯ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಪುಟ್ಟಸ್ವಾಮಿ, ಸರ್ವೋದಯ ವಿಕಲಚೇತನರ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ, ಮುಖಂಡರಾದ ಸಿ.ಕೆ.ಕೃಷ್ಣ, ರವಿ, ರಾಜಣ್ಣ, ಅಭಿಷೇಕ್, ಬೋರೇಗೌಡ, ಆನಂದ ಕುಮಾರ ಇದ್ದರು.

ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡದೆ ವಂಚನೆ: ಬಿ.ಪಿ.ಅಪ್ಪಾಜಿ ಬೂದನೂರು

ಮಂಡ್ಯ :

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡದೇ ವಂಚಿಸಲಾಗುತ್ತಿದೆ. ಸರ್ಕಾರ ಕೂಡಲೇ ರೈತರಿ ನ್ಯಾಯ ಒದಗಿ, ಕೃಷಿ ಕ್ಷೇತ್ರ ಉಳಿಯಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯ ಅನುಕೂಲ ಒದಗಿಸಬೇಕು ಎಂದು ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆಗೆ ಸರಿಯಾದ ಬೆಲೆ ಸಿಗದೇ ಸರ್ಕಾರದಿಂದ ನೀಡಲಾಗುತ್ತಿದ್ದ ಅನುಕೂಲಗಳು ಕಡಿತವಾಗಿದ್ದರಿಂದ ರೈತರು ಕೃಷಿ ಬಿಟ್ಟು ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು, ಆಯ್ದ ಜನಪ್ರತಿನಿಧಿಗಳು ರೈತಪರ ಕೆಲಸ ಮಾಡಬೇಕು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಪಣಕನಹಳ್ಳಿ ವೆಂಕಟೇಶ್ ಮಾತನಾಡಿ, ಸರ್ಕಾರ ಜನ ಕಲ್ಯಾಣ ಹೆಸರಿನಲ್ಲಿ ಸಮಾವೇಶ ಮಾಡುತ್ತಿದೆ. ಸರ್ಕಾರ ರೈತರಿಗೆ ನೀಡಲಾಗುತ್ತಿದ್ದ ಅನುಕೂಲಗಳ ಪೈಕಿ ಶೇ.80ರಷ್ಟನ್ನು ಕಸಿದುಕೊಂಡಿದೆ. ರೈತರಿಂದ ಕಸಿಯಲಾದ ಸವಲತ್ತುಗಳನ್ನು ಹಿಂದಿರುಗಿಸಿ ಇರುವ ಸಮಸ್ಯೆ ಬಗೆಹರಿಸಲು ಚಿಂತಿಸಬೇಕು ಎಂದರು.

ರೈತರ ಪರ ನಿರ್ಧಾರ ಕೈಗೊಳ್ಳದೇ ಜನ ಕಲ್ಯಾಣ ಸಮಾವೇಶ ಮಾಡುತ್ತೀರಿ. ಇದು ಹೀಗೆ ಮುಂದುವರೆದರೆ ರೈತರ ಬದುಕು ಇನ್ನಷ್ಟು ಕಷ್ಟವಾಗಲಿದೆ. ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಚ್ಯುತನ್, ಕಾರ್ಯಕಾರಿಣಿ ಸದಸ್ಯ ಶಿವಣ್ಣ ಹೊಳಲು, ಮಂಡ್ಯ ತಾಲೂಕು ಅಧ್ಯಕ್ಷ ಜಯರಾಮು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ