ಮಸ್ಕಿ: ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ. ಅಲ್ಲದೇ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ.ಚಂದ್ರಶೇಖರ್ ನಾಯಕ ಸೂಚನೆ ನೀಡಿದರು.
ಈಗಾಗಲೆ ಮಸ್ಕಿ ಕ್ಷೇತ್ರಕ್ಕೆ ಬೇಕಾಗುವ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಕಳಿಸಿದ್ದು ಅವುಗಳನ್ನು ಪರಿಶೀಲನೆ ಸಹ ನಡೆಸಲಾಗಿದೆ. ಯಾವುದಾರೂ ಇವಿಎಂ ಮಷಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡು ಬಂದರೆ ತಕ್ಷಣ ಸರಿಪಡಿಸುವ ಕೆಲಸ ಮಾಡಿ ಮತದಾನಕ್ಕೆ ಯಾವುದೇ ಅಡೆತಡೆ ಬಾರದಂತೆ ಮುಂಜಾಗೃತೆ ವಹಿಸಿ ಎಂದು ಸೂಚನೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಎಆರ್‌ಒ ಜಗದೀಶ್ ಗಂಗಣ್ಣನವರ್, ತಹಸೀಲ್ದಾರ್ ಅರಮನೆ ಸುಧಾ, ಶಿರಸ್ತೆದಾರ ಅಯ್ಯದ್ ಅಖ್ತರ್ ಅಲಿ ಸೇರಿದಂತೆ ಇತರರು ಇದ್ದರು.