ತೆರಿಗೆ ಸಂಗ್ರಹ ಕಾರ್ಯವನ್ನು ಜವಾಬ್ಧಾರಿಯುತವಾಗಿ ನಿರ್ವಹಿಸಿ: ಡಿಸಿ

KannadaprabhaNewsNetwork |  
Published : Feb 13, 2024, 12:46 AM IST
12ಕೆಪಿಆರ್‌ಸಿಆರ್02: | Kannada Prabha

ಸಾರಾಂಶ

ರಾಯಚೂರು ನಗರಸಭೆ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಬಜೆಟ್ ತಯಾರಿ ಕುರಿತ ಪೂರ್ವಭಾವಿ ಸಭೆಯು ಡಿಸಿ ಎಲ್‌.ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ನಗರಸಭೆಯಿಂದ ತೆರಿಗೆ ಸಂಗ್ರಹಿಸುವಲ್ಲಿ ಅಧಿಕಾರಿಗಳು ಬೇಜವಬ್ಧಾರಿತನ ವಹಿಸದೇ, ತೆರಿಗೆ ಸಂಗ್ರಹ, ಬಾಡಿಗೆ ಸಂಗ್ರಹ, ಕಟ್ಟಡ ಪರವಾನಿಗೆ, ವ್ಯಾಪಾರ ಪರವಾನಿಗೆ ನೀಡುವಲ್ಲಿ. ಶ್ರಮ ವಹಿಸುವಂತೆ ನಗರಸಭೆ ಆಡಳಿತಾಧಿಕಾರಿಗಳೂ ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಸೂಚನೆ ನೀಡಿದರು.

ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ನಗರಸಭೆಯ 2024-25ನೇ ಸಾಲಿನ ಬಜೆಟ್ ತಯಾರಿಸಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ನಗರದ ಅಭಿವೃದ್ಧಿಗಾಗಿ ನಗರಸಭೆಗೆ ಆದಾಯದ ಅವಶ್ಯಕತೆಯಿದ್ದು, ಸರ್ಕಾರದ ಅನುಧಾನದ ಜೊತೆಗೆ ನಗರಸಭೆಯ ಕಂದಾಯ ಸಂಗ್ರಹಣೆಯು ಬಹುಮುಖ್ಯವಾಗಿರುತ್ತದೆ. ಆದ್ದರಿಂದ ತೆರಿಗೆ ಸಂಗ್ರಹಣೆಗೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ನಗರದಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಹಾಗೂ ಸ್ವಚ್ಛತೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಗರಸಭೆಯಿಂದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು. ನಗರದಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯ ಕಾರ್ಯದೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಸೇರಿದಂತೆ ವಿವಿಧ ವಾರ್ಡ್ ಗಳ ನಗರಸಭೆ ಸದಸ್ಯರು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿವಿಧ ಅನುದಾನದ ಅಂದಾಜು

ನಗರಸಭೆ ಲೆಕ್ಕಾಧಿಕಾರಿಗಳು ಮಾಹಿತಿ, 15 ನೇ ಹಣಕಾಸು ಮುಕ್ತ ಅನುದಾನಕ್ಕಾಗಿ ₹5.20 ಕೋಟಿ, 15ನೇ ಹಣಕಾಸು ನಿರ್ಬಂದಿತ ಅನುದಾನಕ್ಕಾಗಿ ₹7.80 ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನಕ್ಕಾಗಿ ₹5 ಕೋಟಿ, ಎಸ್‌ಎಫ್‌ಸಿ ಎಸ್‌ಸಿ, ಎಫ್‌ಸಿ ಅನುದಾನಕ್ಕಾಗಿ ₹1 ಕೋಟಿ, ಎಸ್‌ಎಫ್‌ಸಿ ಡಿಎಸ್‌ಪಿ ಅನುದಾನಕ್ಕಾಗಿ ₹50 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನಕ್ಕಾಗಿ ₹25 ಲಕ್ಷ, 15ನೇ ಹಣಕಾಸು ಎಂಪಿಸಿ ಅನುದಾನಕ್ಕಾಗಿ 4.15 ಕೋಟಿ ಹಾಗೂ ಎಸ್‌ಬಿಎಂ 2 ಅನುದಾನಕ್ಕಾಗಿ ₹2.73 ಕೋಟಿ ಅನುದಾನ ಅಂದಾಜು ಬರಬಹುದು ಎಂದು ಸಭೆಗೆ ಮಾಹಿತಿ ನೀಡಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ