ಐಐಟಿ ಜೆಇಇ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳ ಸಾಧನೆ

KannadaprabhaNewsNetwork |  
Published : May 25, 2024, 01:31 AM IST
24ಕೆಜಿಎಲ್12ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯ ವಿದ್ಯಾಥಿ೯ಗಳು ಐಐಟಿ, ಜೆಇಇ ಮೆನ್ಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಜೆಇಓ ಅಡ್ವಾನ್ಸ್ ಪರೀಕ್ಷೆಗೆ ಅಹ೯ತೆ ಹೊಂದಿದ ಹಿನ್ನೆಲೆ ವಿದ್ಯಾಥಿ೯ಗಳನ್ನು ಅಬಿನಂದಿಸಲಾಯಿತು. ಜಿ ಎಸ್ ಎಂ ಪ್ರಸಾದ್, ಗಿರಿರಾಜನ್, ಶ್ರೀಮತಿ ವಿನುತ, ಶ್ಯಾಮ್ ಇನ್ನಿತರಿದ್ದರು  | Kannada Prabha

ಸಾರಾಂಶ

ಇತ್ತೀಚೆಗೆ ನಡೆದ ಐಐಟಿ, ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯ ಏಳು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ನಡೆದ ಐಐಟಿ, ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯ ಏಳು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 2023-24 ನೇ ಸಾಲಿನ ಪ್ರತಿಷ್ಠಿತ ಐಐಟಿ, ಜೆಇಇ ಪ್ರವೇಶಕ್ಕೆ ನಡೆಯುವ ಪರೀಕ್ಷೆಯಲ್ಲಿ ಕಾಲೇಜಿನ ಆರ್. ಜೀವಿತ. ಮನೋಜ್, ಅಭಿಸಾಗರ್, ಶೋಭಿತ, ಸ್ಪೂರ್ತಿ, ರಕ್ಷಿತ, ಪ್ರತೀಕ್ಷಾ, ಅರುಣ್, ಆ್ಯರೋನ್ ಎಂಬ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಐಐಟಿ, ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಿಎಸ್ಎಂ ಪ್ರಸಾದ್ ಅಭಿನಂದಿಸಿ ಮಾತನಾಡಿದರು.

ಲಯನ್ಸ್ ಸಂಸ್ಥೆ ಕಡಿಮೆ ದರದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಬಾರಿ ನಮ್ಮ ಕಾಲೇಜಿನ 9 ವಿದ್ಯಾರ್ಥಿಗಳು ಐಐಟಿ, ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುವುದು ಹೆಮ್ಮೆ ತಂದಿದೆ. ಇಂದು ಕಾರ್ಯಕ್ರಮದಲ್ಲಿ 7 ಮಂದಿಯನ್ನು ಅಭಿನಂದಿಸಲಾಗಿದೆ. ಇದೇ ರೀತಿ ಮುಂದಿನ ಪರೀಕ್ಷೆಗಳಲ್ಲೂ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಗೈದು ಪೋಷಕರು ಹಾಗೂ ಕಲಿಸಿದ ಗುರುಗಳಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಎಂದರು.ಸಂಸ್ಥೆಯ ವಿದ್ಯಾರ್ಥಿಗಳು 10ನೇ ತರಗತಿ ಹಾಗೂ ಪಿಯುಸಿ ವಿಭಾಗದಲ್ಲೂ ಈ ಬಾರಿ ಉತ್ತಮ ಫಲಿತಾಂಶ ಗಳಿಸಿದ್ದಾರೆ, ಕಳೆದ ಬಾರಿ 2022, 23ನೇ ಸಾಲಿನಲ್ಲಿ ನಮ್ಮ ಸಂಸ್ಥೆಯ ರಮಿತ್ ಗೌಡ ಎಂಬ ವಿದ್ಯಾರ್ಥಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‍ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.ಇದೇ ವೇಳೆ ಉಪನ್ಯಾಸಕ ಶ್ಯಾಮ್ ಕುಮಾರ್ ಮಾತನಾಡಿ, ರಮಿತ್ ಗೌಡ ಸಾಧನೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉದಾಹರಣೆಯಾಗಬೇಕು ಎಂದರು. ಸಾಧಕ 9 ಮಂದಿ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ತೇರ್ಗಡೆಹೊಂದುವ ಮೂಲಕ ಸಂಸ್ಥೆಗೆ ಹಾಗೂ ಪೋಷಕರಿಗೆ ಕೀರ್ತಿ ತರುವ ವಿಶ್ವಾಸ ನನಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಗಿರಿರಾಜನ್, ಪ್ರಾಂಶುಪಾಲೆ ವಿನುತ, ಉಪನ್ಯಾಸಕರಾದ ಪ್ರಸನ್ನಕುಮಾರ್, ಸ್ಮೀಫನ್ ಪುಷ್ಪರಾಜ್, ಪವನ್ ರಾಜು, ಹರೀಶ್ ಇತರರಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ