ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಚುನಾವಣೆಯ ಕಿರುಹೊತ್ತಿಗೆ ಅಥವಾ ಬಿತ್ತಿಪತ್ರಗಳ್ನು ಮುದ್ರಿಸಿ ಪ್ರಕಟಿಸುವಂತಿಲ್ಲ. ಮುದ್ರಣ ಮಾಡಿಸುವವರಿಂದ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿಸಿಕೊಳ್ಳಬೇಕು. ಪ್ರಕಟಿಸಿದ ಕರಪತ್ರ ಮತ್ತು ನಮೂನೆಯನ್ನು 24 ಗಂಟೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ, ಪಕ್ಷದ ಖರ್ಚು ವೆಚ್ಚಗಳ ಮಾಹಿತಿ ಮಹತ್ವದ್ದಾಗಿದೆ. ಚುನಾವಣೆ ಆಯೋಗವು ಗರಿಷ್ಠ ₹ 95 ಲಕ್ಷ ಖರ್ಚು ಮಾಡಲು ನಿಗದಿಪಡಿಸಿದೆ. ಮುದ್ರಕರು ಮುದ್ರಿತ ಪ್ರಕಟಣೆಯಲ್ಲಿ ಮುದ್ರಣ ಸ್ಥಳ, ಎಷ್ಟು ಪ್ರತಿ ಎಂಬುದನ್ನು ಪ್ರಕಟಿಸಬೇಕು. ಅದರ ವೆಚ್ಚವನ್ನು ಚೆಕ್, ಡಿಡಿ ಅಥವಾ ಫೋನ್ ಪೇ ಮೂಲಕ ಪಾವತಿ ಮಾಡಿಕೊಂಡು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ನಿಬಂಧನೆ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಮುದ್ರಣದ ವಿವರದಲ್ಲಿ ಶಾಂತಿಭಂಗ, ಭದ್ರತೆ, ಧಾರ್ಮಿಕ ನಿಂದನೆ, ವ್ಯಕ್ತಿಗತ ಅವಹೇಳನಕಾರಿ ಹೇಳಿಕೆಗಳು ಇರಬಾರದು. ಪ್ರಿಂಟ್ ಮಾಡುವ ಪೂರ್ವದಲ್ಲಿ ಅದರಲ್ಲಿರುವ ಎಲ್ಲ ವಿಷಯವನ್ನು ಕೂಲಂಕಶವಾಗಿ ಪರಿಶೀಲಿಸಿ ನಂತರ ಮುದ್ರಣ ಮಾಡಬೇಕು ಎಂದು ತಿಳಿಸಿದರು.