ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಸೋಮವಾರ ಕೃಷಿ ಭವನದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ 35 ನೇ ಜೇಸಿ ಸಪ್ತಾಹ - 2024 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. 1ವಾರದ ಜೇಸಿ ಸಪ್ತಾಹದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳು ವಂತೆ ಆಟೋಟ ಸ್ಪರ್ಧೆ ನಡೆಯುತ್ತಿದೆ. ಶಾಲಾ, ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯುತ್ತಿರುವುದರಿಂದ ಸಾರ್ವಜನಿಕರು ಹಾಗೂ ಜೇಸಿ ಸಂಸ್ಥೆ ಪದಾಧಿಕಾರಿಗಳ ಸಂಬಂಧ ವೃದ್ಧಿಸಲಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಎಚ್.ಆರ್.ದಿನೇಶ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಜೇಸಿ ಸಪ್ತಾಹ ಎಂದರೆ ಹಬ್ಬದ ವಾತಾವರಣ ಸೃಷ್ಠಿಯಾಗುತ್ತದೆ. ಸೆಪ್ಟಂಬರ್ ತಿಂಗಳಲ್ಲಿ ದೇಶದ ಎಲ್ಲಾ ಕಡೆ ಜೇಸಿ ಸಪ್ತಾಹ ನಡೆಯಲಿದೆ. 18 ವರ್ಷ ತುಂಬಿದ ಯುವಕರು ಜೇಸಿ ಸಂಸ್ಥೆ ಸದಸ್ಯರಾಗಬಹುದು. ಜೇಸಿ ಸೇರಿದ ಯುವಕರಲ್ಲಿ ವ್ಯಕ್ತಿತ್ವ ವಿಕಸನ ಆಗಲಿದೆ. ಜೇಸಿಯಿಂದ ಕಲಿಯುವುದು ಬಹಳ ಇದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಮುಂದಿನ 1 ವಾರದಲ್ಲಿ ವಿಭಿನ್ನ ರೀತಿ ಕಾರ್ಯಕ್ರಮಗಳು ನಡೆಯಲಿದೆ. ಬಿಸಿಲು,ಮಳೆಯಲ್ಲೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರನ್ನು ಇಂದು ಸನ್ಮಾನಿಸಿದ್ದೇವೆ. 7 ದಿನಗಳ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಕೆ. ಗಂಗಾಧರ್ ಮಾತನಾಡಿ, ಜೇಸಿ ಪೂರ್ವಾಧ್ಯಕ್ಷರ ಸಹಕಾರದಿಂದ ಜೇಸಿ ಸಂಸ್ಥೆ ಬೆಳವಣಿಗೆ ಹೊಂದಿದೆ. ಜೇಸಿ ಸಂಸ್ಥೆ ಒಂದು ಕುಟುಂಬ ಇದ್ದಂತೆ. ಜೇಸಿ ಅಧ್ಯಕ್ಷರಾದವರು ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ರೂಪಿಸುತ್ತಾರೆ ಎಂದರು.