ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಕೆ

KannadaprabhaNewsNetwork |  
Published : Feb 02, 2025, 01:04 AM IST
31ೆಕೆಕೆಡಿಯು3. | Kannada Prabha

ಸಾರಾಂಶ

ಕಡೂರು, ಪರಿಶಿಷ್ಠ ಜಾತಿ, ಉಪ ಜಾತಿಗಳಿಗೆ ನ್ಯಾಯ ಸಮ್ಮತ ಒಳಮೀಸಲಾತಿ ಸಿಗಲು ಪೂರಕವಾಗಿ ವರದಿ ಸಲ್ಲಿಸುವಂತೆ ತಾಲೂಕು ಮಾದಿಗ ಸಮಾಜ, ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ದಲಿತ ಸಂಘಟನೆಗಳ ಸದಸ್ಯರು ಶುಕ್ರವಾರ ಬೆಂಗಳೂರಿನಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅದ್ಯಕ್ಷ ನ್ಯಾಯಮೂರ್ತಿ ನಾಗಮೋಹನ್ ದಾಸ್ ಗೆ ಮನವಿ ಸಲ್ಲಿಸಿದರು.

ಮಾದಿಗ ಸಮಾಜದಿಂದ ನ್ಯಾ.ನಾಗಮೋಹನ್ ದಾಸ್ ಗೆ ಕೋರಿಕೆ

ಕನ್ನಡಪ್ರಭ ವಾರ್ತೆ, ಕಡೂರು

ಪರಿಶಿಷ್ಠ ಜಾತಿ, ಉಪ ಜಾತಿಗಳಿಗೆ ನ್ಯಾಯ ಸಮ್ಮತ ಒಳಮೀಸಲಾತಿ ಸಿಗಲು ಪೂರಕವಾಗಿ ವರದಿ ಸಲ್ಲಿಸುವಂತೆ ತಾಲೂಕು ಮಾದಿಗ ಸಮಾಜ, ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ದಲಿತ ಸಂಘಟನೆಗಳ ಸದಸ್ಯರು ಶುಕ್ರವಾರ ಬೆಂಗಳೂರಿನಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅದ್ಯಕ್ಷ ನ್ಯಾಯಮೂರ್ತಿ ನಾಗಮೋಹನ್ ದಾಸ್ ಗೆ ಮನವಿ ಸಲ್ಲಿಸಿದರು.

ಈ ಕುರಿತು ಕರ್ನಾಟಕ ಬ್ಲೂ ಆರ್ಮಿ ಮಾದಿಗರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಜನ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರಿದ್ದಾರೆ. ಪರಿಶಿಷ್ಟ ಜಾತಿ, ಉಪಜಾತಿ ಮಾದಿಗರಾದ ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾಗಿ, ಶಿಕ್ಷಣ, ಉದ್ಯೋಗ, ರಾಜಕೀಯ, ಪ್ರಾತಿನಿಧಿತ್ವ, ಸ್ವಯಂ ಉದ್ಯೋಗ ಕೃಷಿಗೆ ಸಂಭಂಧಿಸಿದ ಆಸ್ತಿ ಎಲ್ಲದರಲ್ಲೂ ಹಿಂದುಳಿದಿದ್ದೇವೆ. ಯಾವ ರೀತಿ ನೋಡಿದರೂ ನಮ್ಮ ಸಮುದಾಯದ ಜನರಿಗೆ ಸಿಗುವ ಸೌಕರ್ಯಗಳ ಪ್ರಮಾಣ ಬಹಳ ಕಡಿಮೆ ಇದೆ. ಸದಾಶಿವ ಆಯೋಗದ ವರದಿ ಪ್ರಕಾರ ಒಳ ಮೀಸಲಾತಿಗೆ ಬರುವ ಉಪ ಜಾತಿಗಳಾದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಕೆಲ ಜಿಲ್ಲೆಗಳಲ್ಲಿ ಮಾತ್ರ ಇವೆ. ಈ ಎಲ್ಲದರ ವಾಸ್ತವತೆ ಪರಿಗಣಿಸಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಯದಾಯಕ್ಕೆ ಒಳಮೀಸಲಾತಿ ಪಾಲು ಶೇ.6.5 ದೊರೆಯಲು ಪೂರಕವಾಗಿ ವರದಿ ನೀಡುವಂತೆ ಕೋರಿದರು.

ಮಾದಿಗ ಸಮಾಜದ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಗಂಗರಾಜು ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಸರ್ಕಾರಕ್ಕೆ ಪೂರಕ ವರದಿ ಸಲ್ಲಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ನಂಬಿಕೆ ನಮ್ಮ ಸಮಾಜದಲ್ಲಿದೆ ಎಂದರು.

ಇದೇ ಸಂಧರ್ಭದಲ್ಲಿ ಬೀರೂರು ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಜಿ.ಮೈಲಾರಪ್ಪ, ಕೆದಿಗೆರೆ ಚಂದ್ರಪ್ಪ, ಮಲ್ಲೇಶ್ವರದ ತಿಮ್ಮಯ್ಯ, ಬಳ್ಳೇಕೆರೆ ಸಂತೋಷ್ ಮತ್ತಿತರರು ಇದ್ದರು.

31ಕೆಕೆಡಿಯು3.

ಪರಿಶಿಷ್ಠ ಜಾತಿ,ಉಪ ಜಾತಿಗಳಿಗೆ ಒಳಮೀಸಲಾತಿ ಪೂರಕವಾಗಿ ವರದಿ ಸಲ್ಲಿಸುವಂತೆ ತಾಲೂಕು ಮಾದಿಗ ಸಮಾಜ, ಮಾದಿಗ ಶ್ರೇಯೋಭಿವೃದ್ಧಿ ಟ್ರಸ್ಟ್ ಮತ್ತು ವಿವಿಧ ದಲಿತ ಸಂಘಟನೆಗಳ ಸದಸ್ಯರು ಬೆಂಗಳೂರಿನಲ್ಲಿ ಏಕಸದಸ್ಯ ವಿಚಾರಣಾ ಆಯೋಗದ ಅದ್ಯಕ್ಷ ನ್ಯಾ. ನಾಗಮೋಹನ್ ದಾಸ್ ಅವರಿಗೆ ಮನವಿ ಸಲ್ಲಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು