ಚಿಕ್ಕೋಡಿ ಜಿಲ್ಲೆಗಾಗಿ ಹೈಕೋರ್ಟ್‌ ನ್ಯಾಯಮೂರ್ತಿಗೆ ಮನವಿ

KannadaprabhaNewsNetwork |  
Published : Feb 19, 2024, 01:33 AM IST
ಪೋಟೋ : 18ಸಿಕೆಡಿ1ಚಿಕ್ಕೋಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಚಿಕ್ಕೋಡಿ ವಕೀಲರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಹೈಕೋರ್ಟ್ ನ್ಯಾಯಾಧೀಶರಾದ ಸಚಿನ ಮಗದುಮ್ಮ, ಕೆ. ಎಸ್. ಹೇಮಲೇಖಾ, ಅನಿಲ ಕಟ್ಟಿ, ಕಲ್ಮೇಶ ಕಿವಡ ಉಪಸ್ಥಿತರಿದ್ದರು.  | Kannada Prabha

ಸಾರಾಂಶ

ಚಿಕ್ಕೋಡಿಗೆ 300 ವರ್ಷಗಳ ಇತಿಹಾಸ ಇದೆ. ಇಲ್ಲಿನ ನ್ಯಾಯಾಲಯದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ ಅವರು ವಾದ ಮಾಡಿದ್ದಾರೆ. ಈ ನೆಲ ಅಂಬೇಡ್ಕರ್‌ ಅವರ ಸ್ಪರ್ಶದಿಂದ ಪವಿತ್ರವಾಗಿದೆ. ದುರ್ಬಲರು ಮತ್ತು ಬಡವರಿಗೆ ನ್ಯಾಯ ಒದಗಿಸುವ ಕೆಲಸ ಇಲ್ಲಿನ ನ್ಯಾಯವಾದಿಗಳು ಮಾಡಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿಗೆ 300 ವರ್ಷಗಳ ಇತಿಹಾಸ ಇದೆ. ಇಲ್ಲಿನ ನ್ಯಾಯಾಲಯದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ ಅವರು ವಾದ ಮಾಡಿದ್ದಾರೆ. ಈ ನೆಲ ಅಂಬೇಡ್ಕರ್‌ ಅವರ ಸ್ಪರ್ಶದಿಂದ ಪವಿತ್ರವಾಗಿದೆ. ದುರ್ಬಲರು ಮತ್ತು ಬಡವರಿಗೆ ನ್ಯಾಯ ಒದಗಿಸುವ ಕೆಲಸ ಇಲ್ಲಿನ ನ್ಯಾಯವಾದಿಗಳು ಮಾಡಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ ಹೇಳಿದರು.

ಭಾನುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಚಿಕ್ಕೋಡಿ ವಕೀಲರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಅವರು, . ವಕೀಲರು ಕಡಿಮೆ ಅವಧಿಯಲ್ಲಿ ಪ್ರಕರಣಗಳನ್ನು ಮುಗಿಸಿ, ನ್ಯಾಯ ಒದಗಿಸಬೇಕು. ಚಿಕ್ಕೋಡಿ ಜಿಲ್ಲಾ ನ್ಯಾಯಾಲಯಕ್ಕಾಗಿ ಜನಸಂಖ್ಯೆ ಆಧಾರದ ಮೇಲೆ ವರದಿ ಸಲ್ಲಿಸಿದರೆ, ನ್ಯಾಯಾಂಗ ಸಮಿತಿ ಅನುಮೋದಿಸಬಹುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ಇದೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆ ವಿಭಜನೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಘೋಷಣೆ ಮಾಡಲಿಲ್ಲ. ಬೈಲಹೊಂಗಲ, ಗೋಕಾಕ್‌ನವರು ಜಿಲ್ಲೆ ಕೇಳುತ್ತಿದ್ದಾರೆ. ಯಾವುದಾದರೂ ಮಾಡಲಿ ಆದರೆ, ನಮಗೆ ಚಿಕ್ಕೋಡಿ ಜಿಲ್ಲೆ ಆಗಬೇಕು. ಜಿಲ್ಲಾ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಸ್ವತಂತ್ರ ಜಿಲ್ಲೆ ಮಾಡಿಕೊಡಿ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ ಅವರಿಗೆ ಮನವಿ ಮಾಡಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ನನ್ನ ಬೇಡಿಕೆಯ ಮೇರೆಗೆ ಚಿಕ್ಕೋಡಿ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರ ಸಂಘದ ಕಟ್ಟಡಕ್ಕೆ ₹2.5 ಕೋಟಿ ರೂ.ಮಂಜೂರು ಮಾಡಿದ್ದಾರೆ ಎಂದರು.

ಹೈಕೋರ್ಟ್ ನ್ಯಾಯಾಧೀಶ ಸಚಿನ ಮಗದುಮ್ಮ ಮಾತನಾಡಿ, ತಮ್ಮ ಹುಟ್ಟೂರು ಚಿಕ್ಕೋಡಿ. ಇಲ್ಲಿ ಆತ್ಮೀಯ ಸಂಬಂಧಗಳಿವೆ. ಈ ಸ್ಥಳದಲ್ಲಿ ವಕೀಲ ವೃತ್ತಿ ಮಾಡಿದ್ದೇನೆ ಎಂದರು.

ಹೈಕೋರ್ಟ್ ನ್ಯಾಯಾಧೀಶರು ಕೆ. ಎಸ್. ಹೇಮಲೇಖಾ, ಅನಿಲ ಕಟ್ಟಿ , ರಾಮಚಂದ್ರ ಹುದಾರ, ವಿಜಯಕುಮಾರ ಪಾಟೀಲ ರಿಜಿಸ್ಟ್ರಾರ್ ಜನರಲ್ ಭರತಕುಮಾರ, ವಿನಯ್ ಮಾಂಗ್ಲೇಕರ, ಪಿಡಬ್ಲ್ಯುಡಿ ಅಧೀಕ್ಷಕ ಅರುಣ್ ಕುಮಾರ, ಎಂಜಿನಿಯರ್ ಸುನೀಲ ಬಳ್ಳೋಳ್, ಚಿಕ್ಕೋಡಿಯ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಲ್. ಚವ್ಹಾಣ, ನ್ಯಾಯಾಧೀಶ ಹರೀಶ ಪಾಟೀಲ, ನ್ಯಾಯಾಧೀಶ ನಾಗೇಶ ಪಾಟೀಲ್, ನ್ಯಾಯಾಧೀಶ ಅಶೋಕ್ ಆರ್‌. ಎಚ್., ವಕೀಲರ ಸಂಘದ ಚಿಕ್ಕೋಡಿ ಅಧ್ಯಕ್ಷ ಕಲ್ಮೇಶ ಕಿವಡ, ಕಾರ್ಯದರ್ಶಿ ಎಸ್. ಆರ್‌. ವಾಲಿ, ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ಗೌಡರ್, ಎಚ್.ಎಸ್ ನಸಲಾಪುರೆ, ಬಿ.ಆರ್‌ ಯಾದವ್, ನಾಗೇಶ ಕಿವಾಡ್, ಸತೀಶ ಕುಲಕರ್ಣಿ, ಮುದಸರ ಜಮಾದಾರ, ಅನಿಲ ಮಾನೆ, ಗುಲಾಬ ಬಾಗವಾನ ರಾಮಾ ಮಾನೆ ಇದ್ದರು.

ಜಿಲ್ಲಾ ನ್ಯಾಯಾಧೀಶ ಎಲ್. ವಿಜಯಲಕ್ಷ್ಮಿ ದೇವಿ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಪಾಟೀಲ ನಿರೂಪಿಸಿದರು. ಎಸ್.ಆರ್‌.ವಾಲಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ