-ಸ.ನಂ. 77ರ 130 ಎಕರೆ ಜಮೀನು ಕಬಳಿಸಲು ಪ್ರಭಾವಿಗಳ ಹುನ್ನಾರ
-----ಕನ್ನಡಪ್ರಭವಾರ್ತೆ ಹಿರಿಯೂರು: ಕೂನಿಕೆರೆ ಗ್ರಾಪಂ. ವ್ಯಾಪ್ತಿಯ ಸನಂ 77 ರ 130 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಕರಿಮುದ್ದಯನ ಹಟ್ಟಿ ಹಾಗೂ ಎವಿ ಕೊಟ್ಟಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಜಮೀನನ್ನು ಇಲಾಖೆಯ ದಾಖಲೆಗಳಲ್ಲಿ ಊರಿನ ಗ್ರಾಮದ ಜಾನುವಾರುಗಳಿಗೆ ಹುಲ್ಲು ಮೇಯಿಸುವುದಕ್ಕೆ ಎಂದು ಷರಾ ಬರೆದು ಮೀಸಲಿಟ್ಟಿರುತ್ತಾರೆ. ಈ ಭೂಮಿಗೆ ಊರಿನ ಎಲ್ಲಾ ಗ್ರಾಮಸ್ಥರಿಂದ ವಂತಿಕೆ ಸಂಗ್ರಹಿಸಿ ಕಂದಾಯ ಕಟ್ಟುತ್ತಾ ಬರಲಾಗಿದೆ. ಅದರಲ್ಲಿ ಈಗಾಗಲೇ 30 ಎಕರೆ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿದ್ದು ಈ ಖಾತೆಯನ್ನು ವಜಾಗೊಳಿಸಬೇಕು ಮತ್ತು ಉಳಿದ ಭೂಮಿಗೆ ಈಗ ಮಾರುಕಟ್ಟೆ ಮೌಲ್ಯದ ಪ್ರಕಾರ 20 ಕೋಟಿ ಬೆಲೆ ಬಾಳುತ್ತದೆ. ಆದ್ದರಿಂದ, ಈಗ ಭೂಗಳ್ಳರ ಕಣ್ಣು ಬಿದ್ದಿದೆ. ಗ್ರಾಮದಲ್ಲಿ ಮೂರ್ನಾಲ್ಕು ಜನರು ನಮಗೆ ಸಂಬಂಧಪಟ್ಟ ಜಮೀನು ಎಂದು ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪೌತಿ ಖಾತೆ ಮಾಡಿಸಲು ಮುಂದಾಗಿರುತ್ತಾರೆ. ಐದು ಜನರ ವಂಶದಲ್ಲಿ 150 ಕ್ಕೂ ಹೆಚ್ಚು ಕುಟುಂಬಗಳಾಗಿರುವುದರಿಂದ ತಾವುಗಳು ಯಾವುದೇ ಪೌತಿ ಖಾತೆ ಮಾಡದೆ ಯಥಾಸ್ಥಿತಿ ಕಾಪಾಡಿ ಗ್ರಾಮದ ಜಾನುವಾರು ಮೇಯಿಸಲು ಅನುವು ಮಾಡಿಕೊಡಬೇಕು.ರಿಸ ನಂ 76 ಹುಲ್ಲುಬನ್ನಿ ಭೂಮಿಯಲ್ಲಿ ಬಹಳ ವರ್ಷಗಳ ಹಿಂದೆ ಕೆಲವರಿಗೆ ಸಾಗುವಳಿ ಪತ್ರ ಕೊಟ್ಟಿದ್ದು ಅವರು ಯಾರು ಸಾಗುವಳಿ ಮಾಡುತ್ತಿಲ್ಲ ಮತ್ತು ಗ್ರಾಮದಲ್ಲಿ ವಾಸವೇ ಇಲ್ಲ. ಆದ್ದರಿಂದ, ಎಲ್ಲಾ ಸಾಗುವಳಿಯನ್ನು ರದ್ದುಪಡಿಸಿ ರಿಸನಂ 133,134,181 ಸರ್ಕಾರಿ ಹುಲ್ಲುಬನ್ನಿ ಜಮೀನಿನ ಸುತ್ತಲೂ ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದು, ಈ ಎಲ್ಲಾ ಜಮೀನುಗಳ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಿ ಗ್ರಾಮದ ಕುರಿ, ದನ, ಮೇಕೆ ಮುಂತಾದ ಜಾನುವಾರು ಮೇಯಿಸಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.ರೈತ ಸಂಘದ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ಎವಿ ಕೊಟ್ಟಿಗೆ ಗ್ರಾಮದ ಮುಖಂಡರಾದ ಶಿವಣ್ಣ, ಟಿ ತಿಮ್ಮರಾಯಪ್ಪ, ಗೋವಿಂದಪ್ಪ ಎಲ್ ಜಿ, ರಾಜಪ್ಪ, ಪಾರ್ಥ, ಜೂಲ್ ರಾಜಪ್ಪ, ಕೆಎಸ್ ತಿಮ್ಮರಾಯಪ್ಪ, ಕುಂಬ್ರಿ ಸಣ್ಣಪ್ಪ, ವೆಂಕಟೇಶಮೂರ್ತಿ, ಕೃಷ್ಣಮೂರ್ತಿ, ಮೋಹನ್ ಕುಮಾರ್, ಚಂದ್ರಪ್ಪ, ರಾಮಲಿಂಗಪ್ಪ, ಮಹಾಲಿಂಗಪ್ಪ, ತಿಮ್ಮರಾಯಪ್ಪ ಟಿ, ರಾಜಪ್ಪ, ಗಜೇಂದ್ರ,ಸಿ ತಿಮ್ಮಯ್ಯ, ತಿಮ್ಮಣ್ಣ, ಪಾಂಡುರಂಗ, ಗಂಗಾಧರ,ದೇವರಾಜಪ್ಪ, ಕುಂಬ್ರಿ ಚಿಕ್ಕಣ್ಣ ಇದ್ದರು.
--------ಫೋಟೊ: 1,2
ಕೂನಿಕೆರೆ ಗ್ರಾಪಂ ವ್ಯಾಪ್ತಿಯ ಸ.ನಂ. 77ರ 130 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಕರಿಮುದ್ದಯನ ಹಟ್ಟಿ ಹಾಗೂ ಎವಿ ಕೊಟ್ಟಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.