)
ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆಗೆ ಶಾಸಕ ಆನಂದ್ ನೇತೃತ್ವದಲ್ಲಿ ನೀಡಿದ ಮನವಿ ಸ್ವೀಕಾರ
ನೀರಿನ ಲಭ್ಯತೆ ನೋಡಿಕೊಂಡು ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಆರಂಭಿಸುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಾಲ್ಕನೇ ಹಂತದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ಆರಂಭಕ್ಕೆ ಕಡೂರಿನ ಶಾಸಕ ಆನಂದ್ ನೇತೃತ್ವದಲ್ಲಿ ನೂರಾರು ಮಂದಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಭಾನುವಾರ ಕಡೂರಿನಲ್ಲಿ ಮನವಿ ಸಲ್ಲಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಭದ್ರಾ ಮೇಲ್ಡಂಡೆ ಯೋಜನೆಗೆ ನಿಗದಿ ಪಡಿಸಿರುವ ನೀರಿನ ಪ್ರಮಾಣದಲ್ಲಿ ನೀರಿನ ಲಭ್ಯತೆ ಇದ್ದರೆ, ಮುಂದಿನ 4ನೇ ಹಂತದ ಕಾಮಗಾರಿ ನಡೆಸಲು ಅವಕಾಶ ಇದೆ. ಶಾಸಕ ಆನಂದ್ ನೇತೃತ್ವ ದಲ್ಲಿ ಮನವಿ ಸಲ್ಲಿಸಿ, ವರ್ಷದಲ್ಲಿ ಒಂದೆರಡು ಮಳೆ ಮಾತ್ರ ಆಗುತ್ತದೆ. ಕುಡಿಯುವ ನೀರಿಗೂ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಮೇಲ್ದಂಡೆ ಯೋಜನೆ ಮೂಲಕ ನೀರು ಪೂರೈಸಲು ಮನವಿ ಮಾಡಿದ್ದಾರೆ. ಪರಿಶೀಲನೆ ನಡೆಸುವುದಕ್ಕೆ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಭದ್ರಾ ಹಾಗೂ ತುಂಗಾ ನದಿಯಿಂದ 29 ಟಿಎಂಟಿ ನೀರು ಬಳಕೆ ಮಾಡಲಾಗುತ್ತಿದ್ದು, ಈ ಪೈಕಿ 21 ಟಿಎಂಸಿಯನ್ನು ಸಣ್ಣ ನೀರಾ ವರಿಗೆ, 6 ಟಿಎಂಸಿ ಕೆರೆ ತುಂಬಿಸುವ ಯೋಜನೆಗೆ, ವಾಣಿವಿಲಾಸ ಸಾಗರ ಜಲಾಶಯಕ್ಕೆ 2 ಟಿಎಂಸಿ ಪೂರೈಕೆ ಮಾಡಲಾ ಗುವುದು. ಒಟ್ಟು 5.75 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದರು.
ಕಡೂರು ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಕೆರೆಗಳಿಗೆ ನೀರು ಹರಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿದೆ. ಬರಗಾಲದಲ್ಲಿರುವ ಕಡೂರು ತಾಲೂಕು 79 ವರ್ಷದಿಂದ ಬರಗಾಲ ಎದುರಿಸುತ್ತಿದೆ. 2018 ರಿಂದ ಮೂರು ಹಂತದಲ್ಲಿ ನೀರು ಹರಿಸುವ ಯೋಜನೆಗೆ ಮೊದಲ ಹಂತದಿಂದ ಇದುವರೆಗೆ ₹90 ಕೋಟಿ ನೀಡಿದ್ದು, ಕಾಂಗ್ರೆಸ್ ಸರ್ಕಾರ ₹450 ಕೋಟಿ ಗುತ್ತಿಗೆ ದಾರರಿಗೆ ನೀರಾವರಿ ಬಿಲ್ ಕೂಡುವ ಮೂಲಕ ಕಾಮಗಾರಿ ವೇಗ ಪಡೆದಿದೆ. 2ನೇ ಹಂತದಲ್ಲಿ 72 ಕೆರೆ ಕಾಮಗಾರಿ ಮುಕ್ತಾಯ ವಾಗಲಿದೆ. 3ನೇ ಹಂತದಲ್ಲಿ ಕಡೂರು ಹಾಗು ಚಿಕ್ಕಮಗಳೂರು ಕ್ಷೇತ್ರದ 112 ಕೆರೆ ತುಂಬುವ ಯೋಜನೆಗೆ ಮತ್ತು 3ನೇ ಹಂತಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ₹309 ಕೋಟಿ ನೀಡಿದೆ. ಉಳಿದಂತೆ ಮುಖ್ಯವಾದ 4ನೇ ಹಂತ ಕಾಮಗಾರಿ ಆರಂಭಿಸ ಬೇಕಿದೆ ಎಂದು ಮನವಿ ಮಾಡಿದರು.
ಈ ವೇಳೆ ನೀರಾವರಿ ಇಲಾಖೆ ಅಧಿಕಾರಿ ಹರೀಶ್, ನೀರಾವರಿ ಇಲಾಖೆ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್, ಈರಳ್ಳಿ ರಮೇಶ್, ಆಸಂದಿ ಕಲ್ಲೇಶ್, ಚಂದ್ರಮೌಳಿ ಇದ್ದರು.ಫೋಟೋ
---ಬಾಕ್ಸ್---ಭದ್ರಾ ಮೇಲ್ಡಂಡೆಗೆ ಕೇಂದ್ರ ನಯಾಪೈಸೆ ಕೊಟ್ಟಿಲ್ಲ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ₹5300 ಕೋಟಿ ಘೋಷಿಸಿದ್ದ ಕೇಂದ್ರ ಸರ್ಕಾರ ಈ ವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಈಗಾಗಲೇ ತನ್ನ ಪಾಲಿನ ₹12 ಸಾವಿರ ಕೋಟಿ ಅಧಿಕ ಹಣ ಖರ್ಚು ಮಾಡಿ ಕಾಮಗಾರಿ ಮುಂದುವರಿಸಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಯಾವುದೇ ಪರಿಸ್ಥಿತಿಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಲಾಶಯಗಳಲ್ಲಿ ಅಗತ್ಯ ನೀರು ಕಾಯ್ದಿರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.