ಗೃಹಲಕ್ಷ್ಮಿ ಯೋಜನೆ ಹಣದಿಂದ ಬೋರ್ ವೆಲ್ ಕೊರೆಸಿದ ಫಿಲೋಮಿನಾ, ಜೆಸ್ಸಿ

KannadaprabhaNewsNetwork |  
Published : Apr 16, 2025, 12:40 AM IST
ನರಸಿಂಹರಾಜಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಶೆಟ್ಟಿಕೊಪ್ಪದ ಜೇಮ್ಸ್ ಹಾಗೂ ಅವರ ಪತ್ನಿ ಜೆಸ್ಸಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ಶೆಟ್ಟಿಕೊಪ್ಪದ ಜೇಮ್ಸ್ ಎಂಬುವವರ ಪತ್ನಿ ಜೆಸ್ಸಿ ಹಾಗೂ ಅವರ ತಾಯಿ ಫಿಲೋಮಿನಾ ಅವರು ತಮಗೆ ಬಂದ ಗೃಹಲಕ್ಷ್ಮಿ ಯೋಜನೆ ಹಣದ ಸಹಾಯದಿಂದ ಬೋರ್‌ ವೆಲ್ ಕೊರೆಸಿದ ಹಿನ್ನೆಲೆಯಲ್ಲಿ ಮಂಗಳವಾರ ಜೇಮ್ಸ್ ದಂಪತಿಯನ್ನು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ಶೆಟ್ಟಿಕೊಪ್ಪದ ಜೇಮ್ಸ್ ಎಂಬುವವರ ಪತ್ನಿ ಜೆಸ್ಸಿ ಹಾಗೂ ಅವರ ತಾಯಿ ಫಿಲೋಮಿನಾ ಅವರು ತಮಗೆ ಬಂದ ಗೃಹಲಕ್ಷ್ಮಿ ಯೋಜನೆ ಹಣದ ಸಹಾಯದಿಂದ ಬೋರ್‌ ವೆಲ್ ಕೊರೆಸಿದ ಹಿನ್ನೆಲೆಯಲ್ಲಿ ಮಂಗಳವಾರ ಜೇಮ್ಸ್ ದಂಪತಿಯನ್ನು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಶೆಟ್ಟಿಕೊಪ್ಪದ ಜೇಮ್ಸ್ ಎಂಬುವವರು ಕಳೆದ ವರ್ಷ ಎರಡು ಬೋರ್‌ಗಳನ್ನು ಕೊರೆಸಿದ್ದರೂ ವಿಫಲವಾಗಿದ್ದವು. ಆರ್ಥಿಕ ಸಂಕಷ್ಟ ದಿಂದ ಮತ್ತೊಂದು ಬೋರ್ ವೆಲ್ ಕೊರೆಸಲು ಆಗಿರಲಿಲ್ಲ. ಅವರ ತಾಯಿ ಫಿಲೋಮಿನಾ ಬೇರೆ ವಾಸವಾಗಿದ್ದು ಫಿಲೋಮಿನಾ ಹಾಗೂ ಜೇಮ್ಸ್ ಪತ್ನಿ ಜೆಸ್ಸಿಯವರು ತಮಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ 13 ಕಂತುಗಳ ಹಣವನ್ನು ಕೂಡಿಟ್ಟಿದ್ದರು. ಒಟ್ಟು ₹52 ಸಾವಿರ ರು. ಹಣದಿಂದ ಹಾಗೂ ಇನ್ನುಳಿದ ಹಣವನ್ನು ಕೈಯಿಂದ ಭರಿಸಿ ಹೊಸದಾಗಿ ಬೋರ್ ಕೊರೆಸಿದ್ದು ಮೂರು ಇಂಚು ನೀರು ಲಭಿಸಿದೆ. ಇದರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ನೀರಿಲ್ಲದೆ ಬೇಸತ್ತಿದ್ದ ಜೇಮ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಸರ್ಕಾರದ ಈ ಯೋಜನೆ ಸದ್ಬಳಕೆ ಮಾಡಿಕೊಂಡ ದಂಪತಿಯನ್ನು ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ ಸನ್ಮಾನಿಸಲಾಯಿತು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಪ್ರತೀ ತಿಂಗಳು ಬರುವ ₹2 ಸಾವಿರ ಕುಟುಂಬದ ಮಹಿಳೆಯರಿಗೆ ಬಹಳ ಉಪಯುಕ್ತವಾಗುತ್ತಿದೆ. ಸರ್ಕಾರದ ಗೃಹಲಕ್ಷ್ಮಿ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.ತಾ.ಪಂಚಾಯಿತಿ ಇಓ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಸರ್ಕಾರದ ಯಾವುದೇ ಸವಲತ್ತು ಸದ್ಬಳಕೆ ಮಾಡಿ ಕೊಂಡಾಗ ಮಾತ್ರ ಯೋಜನೆಗಳು ಸಾರ್ಥಕವಾಗುತ್ತವೆ. ಇಂತಹ ಸರ್ಯೋಕಾರದ ಯೋಜನೆ ಹಣವನ್ನುಕೂಡಿಟ್ಟು ತಮ್ಮ ಜಮೀನಿನ ಅಭಿವೃದ್ಧಿಗೆ ಕೊಳವೆ ಬಾವಿ ಕೊರೆಸಿ ಯಶಸ್ವಿಯಾಗಿರುವುದು ತುಂಬಾ ಸಂತಸ ತಂದಿದೆ ಎಂದರು.ಜೇಮ್ಸ್ ಮಾತನಾಡಿ, ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಣ ನಮಗೆ ಕಷ್ಟ ಕಾಲಕ್ಕೆ ಬಹಳ ಉಪಕಾರವಾಯಿತು. ಇಂತಹ ಯೋಜನೆ ಜಾರಿಗೆ ತಂದ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ಎಂದರು.ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಜಿ.ನಾಗರಾಜ್, ನಿತ್ಯಾನಂದ, ಹೂವಮ್ಮ,ಇಂದಿರಾನಗರ ರಘು, ಅಪೂರ್ವ, ಕ್ಷೇತ್ರ ಕುಮಾರ್,ಇಸ್ಮಾಯಿಲ್,ದೇವರಾಜ್, ಜಯರಾಂ,ಬೇಸಿಲ್, ಸೈಯದ್‌ ಶಫೀರ್‌ಅಹಮ್ಮದ್ , ಕಡಹಿನಬೈಲು ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ ಕುಮಾರ್, ತಾ.ಪಂ. ಇಓ ಎಚ್.ಡಿ.ನವೀನ್‌ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!