ಸಮಾಜಕ್ಕೆ ಛಾಯಾಗ್ರಹಕರ ಸೇವೆ ಅನನ್ಯ: ದೊಡ್ಡಯ್ಯ

KannadaprabhaNewsNetwork |  
Published : Aug 20, 2025, 01:30 AM IST
19ಕೆಎಂಎನ್ ಡಿ11 | Kannada Prabha

ಸಾರಾಂಶ

ಹಳೇ ಕ್ಯಾಮೆರಾಗಳಿಂದ ಹಿಡಿದ ಇಂದಿನ ಡಿಜಿಟಲ್ ತಂತ್ರ ಜ್ಞಾನದವರೆಗೂ ಛಾಯಾಗ್ರಹಕರು ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಫೋಟೋ ಇಲ್ಲದೆ ಯಾವುದೇ ಕೆಲಸ ನಡೆಯದು ಎಂಬ ಸ್ಥಿತಿ ಇಂದು ನಿರ್ಮಾಣವಾಗಿದೆ. ಬದುಕಿನ ಅವಿಭಾಜ್ಯವಾಗಿರುವ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿರುವ ಎಲ್ಲಾ ಛಾಯಾಗ್ರಹಕರಿಗೆ ಒಳ್ಳೆಯದಾಗಲಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪದಗಳಲ್ಲಿ ವರ್ಣಿಸಲು ಸಾಧ್ಯವಾಗದ ಮಾತುಗಳನ್ನು ಕೇವಲ ಒಂದು ಚಿತ್ರದ ಮೂಲಕ ತಿಳಿಸುವ ಛಾಯಗ್ರಾಹಕರ ಸೇವೆ ಅನನ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದಲ್ಲಿ ವಿಶ್ವ ಛಾಯಾಗ್ರಹಕರ ದಿನದ ಅಂಗವಾಗಿ ಹಿರಿಯ ಛಾಯಾಗ್ರಹಕ ಹೇಮಂತ್‌ರಾಜ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಹಳೇ ಕ್ಯಾಮೆರಾಗಳಿಂದ ಹಿಡಿದ ಇಂದಿನ ಡಿಜಿಟಲ್ ತಂತ್ರ ಜ್ಞಾನದವರೆಗೂ ಛಾಯಾಗ್ರಹಕರು ನಿರಂತರ ಸೇವೆ ಸಲ್ಲಿಸುತ್ತ ಬಂದಿದ್ದಾರೆ ಎಂದರು.

ಫೋಟೋ ಇಲ್ಲದೆ ಯಾವುದೇ ಕೆಲಸ ನಡೆಯದು ಎಂಬ ಸ್ಥಿತಿ ಇಂದು ನಿರ್ಮಾಣವಾಗಿದೆ. ಬದುಕಿನ ಅವಿಭಾಜ್ಯವಾಗಿರುವ ಫೋಟೋಗ್ರಫಿಯಲ್ಲಿ ತೊಡಗಿಕೊಂಡಿರುವ ಎಲ್ಲಾ ಛಾಯಾಗ್ರಹಕರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಮೊಬೈಲ್‌ಗಳಲ್ಲಿ ಫೋಟೋ ತೆಗೆಯುವುದು ಸುಲಭ. ತಂತ್ರಜ್ಞಾನ ಬದಲಾದರೂ ಛಾಯಾಗ್ರಾಹಕರ ಶ್ರದ್ಧೆ ಬದಲಾಗಿಲ್ಲ. ಮದುವೆ ಮುಂತಾದ ಸಮಾರಂಭದಲ್ಲಿ ಛಾಯಗ್ರಾಹಕರಿಗೆ ಊಟ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಪತ್ರಿಕೋಧ್ಯಮದಲ್ಲಿ ಸೇವೆ ಸಲ್ಲಿಸುವ ಛಾಯಗ್ರಾಹಕರು ತಮ್ಮ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸುತ್ತಾರೆ. ಅವರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ರಾಜಶೇಖರ್, ತಾಲೂಕು ಛಾಯಾಗ್ರಹಕರು ಸಂಘದ ಅಧ್ಯಕ್ಷ ಸಾಗರ್, ಹಿರಿಯ ಛಾಯಾಗ್ರಹಕ ಶಶಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಇತರರು ಇದ್ದರು.

ಮಂಡ್ಯ - ಮೈಸೂರು ಜಿಲ್ಲೆಗಳಲ್ಲಿ ಸಿಕ ಅನುಭವ ಮತ್ತು ತರಬೇತಿ ಕೇಂದ್ರ ಪ್ರಾರಂಭ: ಮಯೂರಗೌಡ

ಮಂಡ್ಯ:

ಆರ್‌ಜಿಎಂ ಕನ್‌ ಸ್ಟ್ರಕ್ಷನ್ಸ್‌ ವತಿಯಿಂದ ಸಿಕ ಅನುಭವ ಮತ್ತು ತರಬೇತಿ ಕೇಂದ್ರವನ್ನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪರಿಚಯಿಸಲಾಗುತ್ತಿದೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜೆ.ಆರ್.ಮಯೂರಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಜಿಎಂ ಸ್ವಿಜ್ಜರ್ ಲ್ಯಾಡ್‌ನ 110 ವರ್ಷಗಳ ಇತಿಹಾಸ ಇರುವ ರಾಸಾಯನಿಕ ಉತ್ಪನ್ನ ಸಂಸ್ಥೆ. ಸಿಕ ಅನುಭವ ಮತ್ತು ತರಬೇತಿ ಕೇಂದ್ರವನ್ನು ಆಗಸ್ಟ್ 21ರಂದು ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯಲ್ಲಿ ಉದ್ಘಾಟಿಸಲಾಗುವುದು ಎಂದರು.

ಸಿಕ ಸಂಸ್ಥೆಯು ಕಟ್ಟಡದ ಅಡಿಪಾಯದಿಂದ ಛಾವಣಿಯವರೆಗೆ ಸಂಪೂರ್ಣ ಜಲನಿರೋಧಕ ಪರಿಹಾರ ಒದಗಿಸುವ ಸಂಸ್ಥೆಯಾಗಿದೆ. ಮಾನವನ ದೇಹ ಮುಖ್ಯವಾದ ರೋಗ ನಿರೋಧಕ ಶಕ್ತಿ ಒದಗಿಸುವ ಮಾತ್ರೆಯಂತೆ. ಕಟ್ಟಡಕ್ಕೆ ತೊಂದರೆಯಾಗದಿರಲು ಬೇಕಾದ ರಾಸಾಯನಿಕ ಒದಗಿಸುತ್ತದೆ ಎಂದರು.

ಮೈಸೂರು ಮತ್ತು ಮಂಡ್ಯ ಬೆಳೆಯುತ್ತಿರುವ ನಗರಗಳಾಗಿವೆ. ಈ ನಗರಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಸಿಕ ಸಂಸ್ಥೆ ಆರಂಭಿಸಲಾಗುತ್ತಿದೆ. ಮೈಸೂರಿನಲ್ಲಿ ನೂತನ ಘಟಕವನ್ನು ಮಾಜಿ ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದಾರೆ ಎಂದರು.

ನಿರ್ಮಾಣವಾಗಿರುವ ಕಟ್ಟಡಗಳಲ್ಲಿ ನೀರಿನ ಸೋರಿಕೆ ಮೂಲ ಕಂಡು ಹಿಡಿಯಲು ‘ತರ್ಮಲ್ ಇಮೇಜಿಂಗ್ ಕ್ಯಾಮೆರಾ’ ಉಪಕರಣದ ವ್ಯವಸ್ಥೆಯನ್ನು ಆರ್‌ಜಿಎಂ ಸಂಸ್ಥೆ ಒದಗಿಸುತ್ತಿದೆ. ಹಿಂದೆ ಈ ವ್ಯವಸ್ಥೆಗೆ 15 ಸಾವಿರ ರು.ಗಳಷ್ಟು ವ್ಯಯಿಸಬೇಕಿತ್ತು. ಈಗ 2 ಸಾವಿರ ರು.ಗಳಿಗೆ ಆರ್‌ಜಿಎಂ ಸಂಸ್ಥೆ ಒದಗಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹ ಸಂಸ್ಥಾಪಕಿ ಕುಮುದ, ನೇಗಿಲಯೋಗಿ ಸೇವಾ ಸಂಸ್ಥೆಯ ಅಧ್ಯಕ್ಷ ಎ.ಸಿ.ರಮೇಶ್ ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ