ಪದವಿ ಪೂರ್ವ ತಾ.ಮಟ್ಟದ ಕ್ರೀಡಾಕೂಟ
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ದೈಹಿಕ ಹಾಗೂ ಮಾನಸಿಕ ನೆಮ್ಮದಿಗೆ ಕ್ರೀಡೆ ಮತ್ತು ಯೋಗದ ಅವಶ್ಯಕತೆ ಇದೆ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ಗೆಂಡೇಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಜಂಟಿಯಾಗಿ ೨೦೨೫-೨೫ ನೇ ಸಾಲಿನ ಪದವಿ ಪೂರ್ವ ಕಾಲೇಜು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸಿನ ಏಕಾಗ್ರತೆ ಮತ್ತು ಶಾಂತಿಗಾಗಿ ಕ್ರೀಡೆ ಅತ್ಯವಶ್ಯಕ. ಕ್ರೀಡೆಯಲ್ಲಿ ಭಾಗವಹಸುವುದು ಕೇವಲ ಬಹುಮಾನ ಗೆಲ್ಲಲು ಅಲ್ಲ. ಇಂದಿನ ಯುವಕರು ಆರೋಗ್ಯದತ್ತ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನು ವ್ಯಾಯಾಮಕ್ಕೆ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಎಂ.ಮಮತಾ ಮಅತನಾಡಿ, ಕ್ರೀಡೆ ಹಾಗೂ ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ನಿಮ್ಮ ಭವಿಷ್ಯ ಉಜ್ವಲಗೊಳ್ಳಲು ಈ ಎರಡು ಅಂಶಗಳು ಅತ್ಯವಶ್ಯಕ. ಓದು ನಿಮಗೆ ದಾರಿದೀಪವಾಗುತ್ತದೆ. ಅದರಂತೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಿಮ್ಮ ಮನಸ್ಸು ದೈಹಿಕವಾಗಿ, ಮಾನಸಿಕವಾಗಿ ಬಲಾಢ್ಯವಾಗುತ್ತದೆ ಎಂದು ಹೇಳಿದರು.
ಗ್ರಾಪಂ ಅದ್ಯಕ್ಷ ಅಬ್ದುಲ್ ಹಕಿಂ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದರ್ಶನ್, ರತನ್, ಮುಖಂಡರಾದ ಬಾಣಸವಳ್ಳಿ ಅಶ್ವತ್, ಜಿ.ಕೆ.ಕುಮಾರ್, ಶ್ರೀನಿವಾಸ್, ಹಿರಿಯಣ್ಣ ಗೌಡ, ಮಹೇಶ್, ಕೆಂಚೇಗೌಡ, ಭಾರತಿ, ಸಂದೀಪ್, ಭುವನ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕುಮಾರ್, ಇತರರು ಹಾಜರಿದ್ದರು.